ಸುಶಾಂತ್ ಸಿಂಗ್ ರಜಪೂತ್ ತದ್ರೂಪಿಯ ವಿಡಿಯೋ ವೈರಲ್, ಅಭಿಮಾನಿಗಳು ಹೇಳಿದ್ದೇನು?

in ಮನರಂಜನೆ/ಸಿನಿಮಾ 54 views

ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ, ಸುಶಾಂತ್’ಗೆ ಸಂಬಂಧಿಸಿದ ಅನೇಕ ಹಳೆಯ ವಿಷಯಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಏತನ್ಮಧ್ಯೆ, ಇತ್ತೀಚೆಗೆ ಟಿಕ್ ಟಾಕ್ ಬಳಕೆದಾರನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಈ ಹುಡುಗನನ್ನು ನೋಡಿದ ಜನರು “ನಟ ಸುಶಾಂತ್ ಸಿಂಗ್ ತರಹ ಕಾಣಿಸುತ್ತಾನೆ” ಎಂದು ಕಾಮೆಂಟ್ ಮಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಹೋಲುವ ಈ ಯುವಕನ ಹೆಸರು ಸೈಕಿ ಸಾಕಿ ಪಡಾಯ. ಈ ಟಿಕ್ ಟಾಕ್ ಬಳಕೆದಾರನ ಮುಖವು ಸ್ವಲ್ಪಮಟ್ಟಿಗೆ ಸುಶಾಂತ್ ಸಿಂಗ್ ರಜಪೂತ್ ಅವರ ಮುಖವನ್ನು ಹೋಲುತ್ತದೆ. ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಸೈಕಿ ಟಿಕ್ ಟಾಕ್ ವಿಡಿಯೋ ಮಾಡಿದ್ದು, ಇದರಲ್ಲಿ ಅವರು ಸುಶಾಂತ್ ಸಿಂಗ್ ರಜಪೂತ್ ಅವರಂತೆಯೇ ನಡೆಯುತ್ತಿದ್ದಾರೆ ಮತ್ತು ‘ರೆಸ್ಟ್ ಇನ್ ಪೀಸ್ ಮೈ ಐಡಲ್’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

Advertisement

 

Advertisement


ಸಕ್ಕಿ ಪಡಾಯ ಅವರ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಟಿಕ್ ಟಾಕ್ ಇದುವರೆಗೆ 7.1 ಮಿಲಿಯನ್ ವೀಕ್ಷಣೆ ಪಡೆದಿದ್ದು, 3 ಲಕ್ಷಕ್ಕೂ ಹೆಚ್ಚು ಲೈಕ್ಗಳು ಮತ್ತು 2 ಸಾವಿರಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿವೆ. ಸೈಕಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡಿದ್ದು, ‘ಹಲೋ ಗೆಳೆಯರೇ, ಎಲ್ಲಿಂದ ಪ್ರಾರಂಭಿಸಬೇಕು ಎಂದು ನನಗೆ ತಿಳಿದಿಲ್ಲ, ಆದರೆ ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ತುಂಬಾ ಪ್ರೀತಿಸುತ್ತಿದ್ದ ನನ್ನ ಆದರ್ಶ ವ್ಯಕ್ತಿ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನನ್ನ ಗೌರವ ಸಲ್ಲಿಸಲು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

Advertisement

 

Advertisement


ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ಮನೆಯಲ್ಲಿ ಸಾವನ್ನಪ್ಪಿದರು. ಸುಶಾಂತ್ಗೆ 34 ವರ್ಷ ವಯಸ್ಸಾಗಿತ್ತು. ಟಿವಿ ಧಾರಾವಾಹಿಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ ನಂತರ ಸುಶಾಂತ್ ಬಾಲಿವುಡ್ಗೆ ಪ್ರವೇಶಿಸಿದರು. ಬಾಲಿವುಡ್ನಲ್ಲಿ ‘ಕೈ ಪೊ ಚೆ’, ‘ಬಯೋಮಕೇಶ್ ಬಕ್ಷಿ’, ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಮತ್ತು ‘ಚಿಚೋರೆ’ ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಗಲ್ಲಾಪೆಟ್ಟಿಗೆಯಲ್ಲಿ 216 ಕೋಟಿ ಲಾಭ ಮಾಡಿತ್ತು. 2016 ರಲ್ಲಿ, ಸಲ್ಮಾನ್ ಖಾನ್ ಅವರ ಸುಲ್ತಾನ್ ನಂತರ ಮೊದಲ ದಿನ ಬಾಕ್ಸ್ ಆಫೀಸ್’ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಿದು. ಇದು ತಮಿಳುನಾಡಿನಲ್ಲಿ ಪ್ರದರ್ಶನ ಕಂಡ ಮೊದಲ ವಾರಾಂತ್ಯದಲ್ಲಿ ದಾಖಲೆ ನಿರ್ಮಿಸಿತು.

Advertisement
Share this on...