2.1 ಮಿಲಿಯನ್’ಗೂ ಹೆಚ್ಚು ಲೈಕ್ಸ್ ಪಡೆದುಕೊಂಡ ಸಲ್ಮಾನ್ ಇನ್‘ಸ್ಟಾಗ್ರಾಂ ಪೋಸ್ಟ್’ನಲ್ಲಿ ಅಂತದ್ದೇನಿದೆ?

in ಮನರಂಜನೆ/ಸಿನಿಮಾ 72 views

ಭಾರತದಲ್ಲಿ ಲಾಕ್ ಡೌನ್ ಹೇರಿದಾಗಿನಿಂದಲೂ, ಎಲ್ಲಾ ಭಾಷೆಗಳ ಸಿನಿಮಾ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸೆಲೆಬ್ರಿಟಿಗಳು ಸಹ ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ. ಕೆಲವರು ಮಾತ್ರ ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಎಲ್ಲರಂತೆಯೇ ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಪನ್ವೆಲ್’ನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಹರಡಿರುವ ತಮ್ಮ ತೋಟದ ಮನೆಯಲ್ಲಿ ಕೆಲಸ ಮಾಡುತ್ತಾ ಬ್ಯೂಸಿಯಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಸಲ್ಮಾನ್ ಇನ್ಸ್ಟಾಗ್ರಾಂನಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಂತೋಷದಿಂದ ಮುಖ ಅರಳಿಸಿರುವ ಸಲ್ಮಾನ್, ಹಸಿರು ಹುಲ್ಲನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದು. ಫೋಟೋ ಜೊತೆಗೆ ಸಲ್ಮಾನ್ ‘ದಾನೆ ದಾನೆ ಪೆ ಲಿಖಾ ಹೋತಾ ಹೈ ಖಾನೆ ವಾಲೆ ಕಾ ನಾಮ್ … ಜೈ ಜವಾನ್! ಜೈ ಕಿಸಾನ್!, ‘ ಎಂಬ ಹಿಂದಿ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

Advertisement

Advertisement

ಅವರ ಇತ್ತೀಚಿನ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಪೋಸ್ಟ್ ಇದುವರೆಗೆ 2.1 ಮಿಲಿಯನ್ ಲೈಕ್ಸ್ ಮತ್ತು 58 ಕೆ ಕಾಮೆಂಟ್’ಗಳನ್ನು ಪಡೆದುಕೊಂಡಿದೆ. ಮದುವೆಯಾಗದಿದ್ದರೂ ಇಂದಿಗೂ ಸಲ್ಮಾನ್ ಖಾನ್ ಸಂತೋಷವಾಗಿಯೇ ಇದ್ದಾರೆ. ಅದಕ್ಕೆ ಕಾರಣಗಳು ಅನೇಕ. ಸಲ್ಲು ಹೆಸರು ಅನೇಕ ಸುಂದರಿಯರೊಂದಿಗೆ ತಳುಕು ಹಾಕಿಕಂಡರೂ ಅವರು ಇನ್ನೂ ಅವಿವಾಹಿತರಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಪದೇ ಪದೇ “ನೀವು ಯಾವಾಗ ಮದುವೆಯಾಗುತ್ತೀರಿ” ಎಂಬ ಪ್ರಶ್ನೆ ಕೇಳಲಾಗುತ್ತದೆ. ಆದರೆ ಸಲ್ಮಾನ್ ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಚಿತ್ರದ ಚಿತ್ರೀಕರಣ ಮತ್ತು ವ್ಯವಹಾರವನ್ನು ಮುನ್ನಡೆಸುವತ್ತ ಗಮನ ಹರಿಸುತ್ತಾರೆ. ಇದು ಅವರನ್ನು ಆರ್ಥಿಕವಾಗಿ ಸದೃಢವಾಗಿಡಲು ಸಹಾಯ ಮಾಡುತ್ತದೆ.

Advertisement

 

Advertisement
View this post on Instagram

 

Daane daane pe likha hota hai khane wale Ka naam… jai jawan ! jai kissan !

A post shared by Salman Khan (@beingsalmankhan) on

ಸಲ್ಮಾನ್ ಖಾನ್ ಅವರನ್ನು ಬೀಟೌನ್ ನ ‘ಆಂಗ್ರಿ ಯಂಗ್ ಮ್ಯಾನ್’ ಎಂದು ಕರೆಯಲಾಗುತ್ತದೆ. ಆದರೆ ಅವರು ಇತರರಿಗೆ ಸಾಕಷ್ಟು ಸಹಾಯ ಮಾಡುತ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಯಾರಾದರೂ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೆ ಅಥವಾ ಯಾರಾದರೂ ಬಾಲಿವುಡ್’ಗೆ ಪಾದಾರ್ಪಣೆ ಮಾಡುತ್ತಿದ್ದರೆ ಸಲ್ಮಾನ್ ಆ ಇಬ್ಬರಿಗೂ ಸಹಾಯ ಮಾಡಲು ಮುಂದೆ ಬರುತ್ತಾರೆ. ಹೌದು, ಸಲ್ಮಾನ್ ಬಡವರಿಗೆ ಸಾಕಷ್ಟು ಸಹಾಯ ಮಾಡುತ್ತಾರೆ. ಲಾಕ್ ಡೌನ್ ಸಮಯದಲ್ಲೂ ಅವರು ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ಒದಗಿಸುವುದರಿಂದ ಹಿಡಿದು ಜನರಿಗೆ ಸಾಕಷ್ಟು ಆರ್ಥಿಕ ಸಹಾಯ ಮಾಡಿದರು.

Advertisement
Share this on...