ಕ್ರೇಜಿಸ್ಟಾರ್ ಜೊತೆ ನಟಿಸಿದ್ದ ಈ ನಟಿಯನ್ನು ಮದುವೆಯಾಗಲು ಬಯಸಿದ್ದರು ಸಲ್ಮಾನ್ !

in ಮನರಂಜನೆ 77 views

ಸಲ್ಮಾನ್ ಖಾನ್ ಪ್ರತಿ ಬಾರಿ ಪ್ರೀತಿಯಲ್ಲಿ ಸಿಲುಕಿದಾಗಲೆಲ್ಲಾ ಅದು ದೊಡ್ಡ ಸುದ್ದಿಯಾಯಿತು. ಸಲ್ಮಾನ್ ಖಾನ್ ಅವರ ಜೀವನದಲ್ಲಿ ಸೋಮಿ ಅಲಿಯಿಂದ ಹಿಡಿದು ಐಶ್ವರ್ಯಾ ರೈ, ಸಂಗೀತ ಬಿಜ್ಲಾನಿ, ಕತ್ರಿನಾ ಕೈಫ್ ವರೆಗೆ ಅನೇಕರು ಬಂದು ಹೋಗಿದ್ದಾರೆ. 54 ನೇ ವಯಸ್ಸಿನಲ್ಲಿಯೂ ಬ್ಯಾಚುಲರ್ ಆಗಿರುವ ಸಲ್ಮಾನ್, ಅಂದು ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ್ದರಂತೆ. ಹೌದು, ಸಲ್ಮಾನ್ ಜೂಹಿ ಚಾವ್ಲಾರನ್ನು ತುಂಬಾ ಪ್ರೀತಿಸುತ್ತಿದ್ದರು. ತಮ್ಮ ಹಳೆಯ ಸಂದರ್ಶನದಲ್ಲಿ ಈ ವಿಷಯವನ್ನು ಹೇಳಿರುವ ಸಲ್ಮಾನ್ ಖಾನ್, “ನಾನು ಜೂಹಿಯನ್ನು ಮದುವೆಯಾಗಲು ಬಯಸಿದ್ದೆ” ಎಂದು ತಿಳಿಸಿದ್ದಾರೆ.

Advertisement

 

Advertisement


ಆ ಸಮಯದಲ್ಲಿ, ಜೂಹಿಗಾಗಿ ಸಲ್ಮಾನ್ ಹೃದಯ ಬಡಿಯುತ್ತಿತಂತೆ. ಆ ನಂತರ ಸಲ್ಮಾನ್ ಮದುವೆಯ ಪ್ರಸ್ತಾಪ ತೆಗೆದುಕೊಂಡು ಅವರ ತಂದೆ ಬಳಿ ಹೋದರಂತೆ. ಜೂಹಿಯ ತಂದೆ ಭಾರತೀಯ ಕಂದಾಯ ಸೇವೆಯಲ್ಲಿ ಉದ್ಯೋಗದಲ್ಲಿದ್ದರು. ಈ ವಿವಾಹದ ಪ್ರಸ್ತಾಪದ ಬಗ್ಗೆ ಸಲ್ಮಾನ್ ಜೂಹಿಯ ತಂದೆಗೆ ಕೇಳಿದಾಗ ಅವರು ನೇರವಾಗಿಯೇ ‘ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ’ ಎಂದು ಹೇಳಿದರು ಎಂದು ಸಲ್ಮಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಜೂಹಿಯ ತಂದೆ ಮದುವೆಯ ಪ್ರಸ್ತಾಪ ಏಕೆ ತಿರಸ್ಕರಿಸಿದರು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಲ್ಮಾನ್ “ಅವರು ಏನು ಬಯಸಿದರೆಂದು ನನಗೆ ಗೊತ್ತಾಗಲಿಲ್ಲ.

Advertisement

 

Advertisement

ಆದರೆ ನಾನು ಜೂಹಿಗೆ ಸರಿಹೊಂದುವುದಿಲ್ಲ ಎಂದು ಅವರಿಗನಿಸಿರಬೇಕು” ಎಂದು ಸಲ್ಮಾನ್ ಹೇಳಿದ್ದಾರೆ. ಜೂಹಿಯೊಂದಿಗೆ ಯಾಕೆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸಲ್ಮಾನ್ ಅವರನ್ನು ಕೇಳಿದಾಗ, ಸಲ್ಮಾನ್ ಅವರ ಉತ್ತರವು ಆಶ್ಚರ್ಯಕರವಾಗಿತ್ತು. ಅದೇನೆಂದರೆ “ಜುಹಿ ನನ್ನೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ”. ಆದರೆ 1997 ರಲ್ಲಿ ‘ದಿವಾನಾ ಮಸ್ತಾನಾ’ದಲ್ಲಿ, ಸಲ್ಮಾನ್ ಮತ್ತು ಜೂಹಿ ವಿವಾಹದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಮದುವೆಯಾಗದಿದ್ದರೂ ಇಂದಿಗೂ ಸಲ್ಮಾನ್ ಖಾನ್ ಸಂತೋಷವಾಗಿಯೇ ಇದ್ದಾರೆ. ಅದಕ್ಕೆ ಕಾರಣಗಳು ಅನೇಕ. ಸಲ್ಲು ಹೆಸರು ಅನೇಕ ಸುಂದರಿಯರೊಂದಿಗೆ ತಳುಕು ಹಾಕಿಕಂಡರೂ ಅವರು ಇನ್ನೂ ಅವಿವಾಹಿತರಾಗಿದ್ದಾರೆ.

 

ಇದೇ ಕಾರಣಕ್ಕೆ ಅವರಿಗೆ ಪದೇ ಪದೇ “ನೀವು ಯಾವಾಗ ಮದುವೆಯಾಗುತ್ತೀರಿ” ಎಂಬ ಪ್ರಶ್ನೆ ಕೇಳಲಾಗುತ್ತದೆ. ಆದರೆ ಸಲ್ಮಾನ್ ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಚಿತ್ರದ ಚಿತ್ರೀಕರಣ ಮತ್ತು ವ್ಯವಹಾರವನ್ನು ಮುನ್ನಡೆಸುವತ್ತ ಗಮನ ಹರಿಸುತ್ತಾರೆ. ಇತರರು ಏನು ಹೇಳುತ್ತಾರೆ? ಅದು ಏಕೆ ಮುಖ್ಯ? ಎನ್ನುವುದಕ್ಕೆ ಬದಲಾಗಿ ನಿಮ್ಮ ಕನಸು ಈಡೇರಲು ಮತ್ತು ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನಿಮ್ಮ ಸಂಪೂರ್ಣ ಶಕ್ತಿಯನ್ನು ವ್ಯಯಿಸಿ. ಜನರು ಮದುವೆಯ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದರೆ, ಕೋಪಗೊಳ್ಳುವ ಬದಲು ಅವರ ಜೊತೆ ಮಾತನಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು ಎನ್ನುತ್ತಾರೆ ಸಲ್ಲು.

Advertisement
Share this on...