ಸೆಲಬ್ರಿಟಿಗಳ ಕೈಯಲ್ಲಿ ಹಿಂದೆದೂ ಮಾಡದ ಕೆಲಸ ಮಾಡಿಸ್ತಿದೆ ಕೊರೊನಾ..!

in ಮನರಂಜನೆ 32 views

ಚೀನಾದ ವೂಹಾನ್​​ನಲ್ಲಿ ಹುಟ್ಟಿದ ಮಾರಕ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ತನ್ನ ಜಾಲ ವ್ಯಾಪಿಸಿದೆ. ದೇಶದಲ್ಲಿ 2.46 ಲಕ್ಷ ಮಂದಿ ಕೊರೊನಾ ಪೀಡಿತರಿದ್ದಾರೆ. ರಾಜ್ಯದಲ್ಲಿ ಲಾಕ್​​ಡೌನ್ ಸಡಿಲಿಕೆ ಆದದ್ದೇ ತಡ, ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು 5,213 ಪ್ರಕರಣಗಳು ವರದಿಯಾಗಿವೆ. 61 ಜನರು ಈ ಮಾರಕ ವೈರಸ್​ಗೆ ಬಲಿಯಾಗಿದ್ದಾರೆ.ಇನ್ನು ಲಾಕ್​ಡೌನ್ ಸಡಿಲಿಕೆಯಾಗಿದ್ದರೂ ಕೆಲವೆಡೆ ಜನರು ಇನ್ನೂ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮತ್ತೆ ಕೆಲವೆಡೆ ಯಾವುದಕ್ಕೂ ಹೆದರದೆ ಸಾಮಾಜಿಕ ಅಂತರವೂ ತಿರುಗುತ್ತಿದ್ದಾರೆ. ಇನ್ನು ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿಲ್ಲದ ಕಾರಣ ಸಿನಿಮಾ ಸೆಲಬ್ರಿಟಿಗಳು ಕೂಡಾ ಇನ್ನೂ ಮನೆಯಿಂದ ಹೊರಬಂದಿಲ್ಲ. ತಾವು ಇರುವಲ್ಲಿಯೇ ಲಾಕ್​ಡೌನ್​ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ.

Advertisement

 

Advertisement

Advertisement

ಇನ್ನು ಸಿನಿಮಾ ತಾರೆಯರು ಎಂದರೆ ಅವರಿಗೆ ಮನೆ ತುಂಬಾ ಕೆಲಸದವರಿರುತ್ತಾರೆ. ನಟರು ಯಾವ ಕೆಲಸಗಳನ್ನೂ ಮಾಡದೆ ಎಂಜಾಯ್ ಮಾಡುತ್ತಾರೆ ಎಂಬ ಮಾತಿದೆ. ಆದರೆ ಈ ಕೊರೊನಾ ಬಂದದ್ದೇ ಬಂದದ್ದು ಸಿನಿಮಾ ತಾರೆಯರು ಇದುವರೆಗೂ ಮಾಡಿಲ್ಲದೆ ಕೆಲಸವನ್ನು ಮಾಡಿಸುತ್ತಿದೆ. ಪಾತ್ರೆ ತೊಳೆಯುವುದು, ಮನೆ ಒರೆಸುವುದು, ಅಡುಗೆ ಮಾಡುವುದು ಹೀಗೆ ಕೆಲಸದವರ ಮೇಲೆ ಅವಲಂಬಿತರಾಗದೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್ ಆಗಿವೆ.

Advertisement

 

ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಇದೀಗ ತಮ್ಮ ತೋಟದ ಮನೆಯನ್ನು ಕ್ಲೀನ್ ಮಾಡುತ್ತಿದ್ದಾರೆ. ಲಾಕ್​ಡೌನ್​​ ಆರಂಭವಾದಾಗಿನಿಂದ ಪನ್ವೆಲ್​​​​​​​​ನ ತಮ್ಮ ತೋಟದ ಮನೆಯಲ್ಲೇ ಲಾಕ್​ ಆಗಿರುವ ಸಲ್ಮಾನ್ ಖಾನ್ ಮೊನ್ನೆ ಗೆಳತಿ ಲೂಲಿಯಾ ಹಾಗೂ ಕೆಲಸಗಾರರೊಂದಿಗೆ ಸೇರಿ ತೋಟದ ಆವರಣವನ್ನು ಸ್ವಚ್ಛ ಮಾಡಿದ್ದಾರೆ. ಗಾಳಿ, ಮಳೆ ಸುರಿದಿದ್ದರಿಂದ ತೋಟದ ತುಂಬೆಲ್ಲಾ ಮರದ ಎಲೆಗಳು ಬಿದ್ದಿದ್ದು ಸಲ್ಮಾನ್ ಪೊರಕೆ ಹಿಡಿದು ಎಲೆಗಳನ್ನೆಲ್ಲಾ ಗುಡಿಸಿ ಸ್ವಚ್ಛ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತ: ಸಲ್ಲು ಭಾಯ್ ತಮ್ಮ ಇನ್ಸ್​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಒಟ್ಟಿನಲ್ಲಿ ಕೊರೊನಾ ವೈರಸ್ ಎಷ್ಟೋ ಜನರ ಜೀವನಕ್ಕೆ ತೊಂದರೆಯುಂಟು ಮಾಡಿದ್ದರೆ, ಕೆಲವರ ಜೀವನದಲ್ಲಿ ಬದಲಾವಣೆ ತಂದಿದೆ ಎನ್ನಬಹುದು.

Advertisement
Share this on...