ಸಮಂತಾ ಸೌಂದರ್ಯದ ಬಗ್ಗೆ ಪೂಜ ಹೆಗ್ಡೆ ಹೀಗ ಹೇಳೋದು..!

in Uncategorized/ಮನರಂಜನೆ 35 views

ಇತ್ತೀಚೆಗಷ್ಟೆ ಮುದ್ದು ಗೊಂಬೆ ಪೂಜಾ ಹೆಗ್ಡೆ ಖ್ಯಾತ ನಟಿ ಸಮಂತ ಅವರ ಸೌಂದರ್ಯವನ್ನು ಲೇವಡಿ ಮಾಡಿ ಪೋಸ್ಟ್ ಹಾಕಿದ್ದರು. ಇದೀಗ ಸಮಂತಾ ಪೂಜಾ ಹೆಗ್ಡೆ ವಿರುದ್ಧ ಮುಯ್ಯಿ ತೀರಿಸಿಕೊಂಡಿದ್ದಾರೆನಟಿ ಪೂಜಾ ಹೆಗ್ಡೆ ಅವರು ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಸಮಂತಾ ಅವರ ಮೆಮ್ ಒಂದನ್ನು ಪೊಸ್ಟ್ ಮಾಡಿದ್ದರು. ಆ ಮೆಮ್ ಅಲ್ಲಿ ‘ನನಗೆ ಆಕೆ ಸುಂದರವಾಗಿ ಕಾಣುತ್ತಿಲ್ಲ’ ಎಂದು ಬರೆಯಾಲಾಗಿತ್ತು.ಈ ಪೋಸ್ಟ್ ನೋಡಿದ ಸಮಂತಾ ಅಭಿಮಾನಿಗಳು ಕೆರಳಿದ್ದರು. ಸಮ್ಮು ಸುಂದರವಾಗಿ ಕಾಣುತ್ತಿಲ್ಲ ಎಂದಿದ್ದಕ್ಕೆ ಪೂಜಾ ಕೂಡಲೆ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು.

Advertisement

Advertisement

ಆದರೆ ಪೂಜಾ ಹೆಗ್ಡೆ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ, ಇನ್‌ಸ್ಟಾಗ್ರಾಂ ನಲ್ಲಿ ಇತ್ತೀಚೆಗೆ ಪೋಸ್ಟ್‌ ಆದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಲಾಗುವುದು ಎಂದು ಬರೆದುಕೊಂಡಿದ್ದರು. ಆದರೆ ಪೂಜಾ ಹೆಗ್ಡೆ ಉದ್ದೇಶಪೂರ್ವಕವಾಗಿಯೇ ಸಮಂತಾ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಇದಕ್ಕೆ ಮುಯ್ಯಿ ತೀರಿಸಿಕೊಂಡಿರುವ ಸಮಂತಾ ಅವರು , ಇಂದು ತಮ್ಮ ಗೆಳತಿಯ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಪೂಜಾ ಹೆಗ್ಡೆಗೆ ಕಾಲೆಳೆಯುವ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Advertisement

ತಮ್ಮ ಗೆಳತಿ ಮಾಡಿದ ‘ವಾಟ್‌ ದಿ ಹ್ಯಾಕ್’ ಎಂಬ ಪೂಜಾ ಹೆಗ್ಡೆ ಗೆ ಕಾಲೆಳೆಯುವ ಪೋಸ್ಟ್‌ಗೆ ಸಮಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಂತಾ ಗೆಳತಿ, ‘ನನ್ನ ಮೆದುಳು ಸಹ ಹ್ಯಾಕ್ ಆಗಿದೆ’ ಎಂದಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ, ‘ಮುಂದಿನ ನೊಟೀಸ್‌ ನೀಡುವ ವರೆಗೆ ‘ಹ್ಯಾಕ್’ ಬಗ್ಗೆ ಜೋಕ್ ಬೇಡ’ ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ.ನಿನ್ನೆ ಸಮಂತಾ ಟ್ವಿಟ್ಟರ್‌ನಲ್ಲಿ ವಿಜಯದ ಸಂಕೇತ ತೋರಿಸುವ ಪೋಸ್‌ನ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದು ಪೂಜಾ ಹೆಗ್ಡೆಗೆ ಅವರು ನೀಡಿರುವ ಉತ್ತರ ಎಂದೇ ಹೇಳಲಾಗುತ್ತಿತ್ತು.

Advertisement
Share this on...