ಸಂಯುಕ್ತಾ ಹೆಗ್ಡೆ ಹೊಸ ಕಿರಿಕ್ ಏನ್ ಗೊತ್ತಾ ?

in ಮನರಂಜನೆ 41 views

ಸದ್ಯ ದೇಶದಲ್ಲಿ ಟಿಕ್ ಟಾಕ್ ಹಾವಳಿ ಜಾಸ್ತಿನೇ ಇದೆ ! ಯಾರ ಮೊಬೈಲ್ ನೋಡಿದರು ಅವರ ಮೊಬೈಲ್‌ ನಲ್ಲಿ ಟಿಕ್ ಟಾಕ್ ಆಪ್ ಇದ್ದೇ ಇರುತ್ತದೆ. ಯುವಕರಂತು ಇದರಲ್ಲಿ ವಿಡಿಯೋಗಳನ್ನು ಮಾಡುತ್ತ ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಿದ್ದಾರೆ. ಇನ್ನು ಈ ಆಪ್ ಚೀನಾ ದೇಶದಾಗಿದ್ದು, ಇದನ್ನು ಬ್ಯಾನ್ ಮಾಡಬೇಕೆಂದು ಧ್ವನಿ ಎತ್ತಿದ್ದಾರೆ. ಇದೇನು ಮೊದಲ ಬಾರಿ ಅಲ್ಲ ಈ ಬಹಳ ದಿನಗಳಿಂದ ಟಿಕ್ ಟಾಕ್ ಬ್ಯಾನ್ ಆಗಲೇಬೇಕು ಎಂದು ಒತ್ತಾಯ ಕೇಳಿಬರುತ್ತಿತ್ತು. ಈ ಹಿಂದೆ ಪ್ರಧಾನಿ ಮೋದಿ ಅವರು ಸ್ವದೇಶಿ ಉತ್ಪನ್ನ ಬಳಸುವಂತೆ ಕರೆ ಕೊಟ್ಟ ಬಳಿಕ ಈ ಟಿಕ್‌ಟಾಕ್ ಬ್ಯಾನ್‌ ಬಗ್ಗೆ ಹೆಚ್ಚಿನ ಬೇಡಿಕೆ ಎದ್ದಿದೆ.

Advertisement

 

Advertisement

Advertisement

ಇನ್ನು ಜನ ಸಾಮನ್ಯರ ಜೊತೆ ನಮ್ಮ ಚಿತ್ರರಂಗದ ತಾರೆಯರು ಕೂಡ ಟಿಕ್ ಟಾಕ್ ಆಪ್ ಬ್ಯಾನ್ ಮಾಡಬೇಕು ಎಂಬ ಅಭಿಯಾನಕ್ಕೆ ಬೆಂಬಲ ನೀಡಿರುವುದು ವಿಶೇಷ. ಕನ್ನಡದ ಖ್ಯಾತ ನಿರ್ದೇಶಕರಾದ ಸಿಂಪಲ್ ಸುನಿ, ಗೂಗ್ಲಿ ಪವನ್ ಒಡೆಯರ್ , ಸಂತೋಷ್ ಆನಂದ್ ರಾಮ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಈ ಈ ನಟಿ ಮಾತ್ರ ಟಿಕ್ ಟಾಕ್ ಬ್ಯಾನ್ ಮಾಡುವುದೇ ಬೇಡ ಎಂದು ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದ್ದಾರೆ.

Advertisement

 

 

ಇನ್ನು ಈ ನಟಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದ ತಕ್ಷಣ ಟಿಕ್ ಟಾಕ್ ಪರವಾಗಿ ಅವರು ನಿಂತಿಲ್ಲ. ಬ್ಯಾನ್ ಮಾಡಿ ಬಿಟ್ಟರೆ ಅದರಿಂದ ಹೆಚ್ಚೇನು ಬದಲಾಗುವುದಿಲ್ಲ ಎಂದು ಅವರ ಅನಿಸಿಕೆ. ಈ ರೀತಿಯಾಗಿ ಟ್ವೀಟ್ ಮಾಡಿರುವುದು ಕಿರಿಕ್ ಪಾರ್ಟಿಯ ಬೆಡಗಿ ಸಂಯುಕ್ತಾ ಹೆಗ್ಡೆ. ಟಿಕ್ ಟಾಕ್ ಬ್ಯಾನ್ ಮಾಡುವುದರಿಂದ ಪ್ರಯೋಜನವಿಲ್ಲ. ಬ್ಯಾನ್ ಮಾಡಿದರೆ ಜನ ಅದರ ಬದಲು ಮತ್ತೊಂದು ಆಪ್ ಹುಡುಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

 

ಜನರ ಮನಸ್ಥಿತಿ ಬದಲಾಗಬೇಕು ಎಂದು ಮಾತನಾಡಿರುವ ಸಂಯುಕ್ತಾ ‘ಒಂದು ಆಪ್ ಬ್ಯಾನ್ ಮಾಡಿದರೆ, ಜನ ತಮ್ಮ ತಿಕ್ಕಲು ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಮತ್ತೊಂದು ಆಪ್ ಅನ್ನು ಹುಡುಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ಟಿಕ್ ಟಾಕ್ ಪರವಾದ ಪೋಸ್ಟ್ ಇದಲ್ಲ ಎಂದು ಹೇಳಿರುವ ಕಿರಿಕ್ ರಾಣಿ, ಟಿಕ್ ಟಾಕ್ ಗೆ ಏನಾಗುತ್ತೋ ನನಗು ಅದಕ್ಕು ಸಂಭಂದವಿಲ್ಲ ಎಂದು ಹೇಳಿದ್ದಾರೆ. ‘ನಾವೇ ಬದಲಾಗಬೇಕು’, ನಮ್ಮೊಳಗೆ ಬದಲಾವಣೆ ಆಗಬೇಕು ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಸಹ ಸಂಯುಕ್ತ ಹೆಗಡೆ ಹಾಕಿದ್ದಾರೆ.

 

ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಸಿನಿ ಪಯಣವನ್ನು ಪ್ರಾರಂಭಿಸಿದ ಅವರು ನಂತರ ಕೆಲವು ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಚಿತ್ರಗಳಿಂದಲೂ ಅವರು ಖ್ಯಾತಿ ಗಳಿಸಿದ್ದಾರೆ. ಅವರ ಅಭಿನಯದ ಕನ್ನಡದ ತುರ್ತು ನಿರ್ಗಮನ, ತಮಿಳಿನ ತೀಲ್ ಸಿನಿಮಾ ಬಿಡುಗಡೆ ಆಗಬೇಕಿದೆ.

Advertisement
Share this on...