ಪಾರ್ಶ್ವವಾಯುಗೆ ತುತ್ತಾದ ಸ್ಯಾಂಡಲ್ ವುಡ್ ನಟಿ; ಈಗ ಹೇಗಿದ್ದಾರೆ ‘ಶಾಸ್ತ್ರಿ’ ಬೆಡಗಿ….?

in ಮನರಂಜನೆ/ಸಿನಿಮಾ 144,009 views

ಸಾಹಸಸಿಂಹ ಡಾ.ವಿಷ್ಣುವರ್ಧನ್, ಚಾಲೇಂಜಿಂಗ್ ಸ್ಟಾರ್ ದರ್ಶನ್, ರೋರಿಂಗ್ ಸ್ಟಾರ್ ಶ್ರೀಮುರುಳಿ ಸೇರಿದಂತೆ ಹಲವು ಘಟಾನುಘಟಿ ನಾಯಕರೊಂದಿಗೆ ನಟಿಸಿ, ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿದ್ದ ನಟಿ ಮಾನ್ಯಾ ನಾಯ್ಡು ಇದೀಗ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ವತ: ಮಾನ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, ತಮ್ಮ ಅನಾರೋಗ್ಯ, ಸಂಕಷ್ಟದ ದಿನಗಳ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವಿವಾಹದ ಬಳಿಕ ಹಲವು ವರ್ಷಗಳಿಂದ ಚಿತ್ರ ರಂಗದಿಂದ ದೂರ ಉಳಿದಿರುವ ಮಾನ್ಯಾ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಆರೋಗ್ಯದ ಸ್ಥಿತಿಗತಿ ಬಗ್ಗೆ ಹೇಳಿಕೊಂಡಿದ್ದಾರೆ.ನಟಿ ಮಾನ್ಯಾ ಇನ್ ಸ್ಟಾಗ್ರಾಂ ನಲ್ಲಿ ತಮ್ಮ ಅನಾರೋಗ್ಯದ ಬಗ್ಗೆ, ಕೋವಿಡ್ ಭೀತಿ ನಡುವೆಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ, ವೈದ್ಯರ ಭರವಸೆ, ಚೇತರಿಸಿಕೊಳ್ಳುತ್ತಿರುವ ರೀತಿ ಎಲ್ಲವನ್ನೂ ಹಂಚಿಕೊಂಡಿದ್ದಾರೆ. ಮಾನ್ಯಾ ಕಳೆದ ಮೂರು ವಾರಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಎಡಗಾಲು ಬಹುತೇಕ ಸ್ವಾಧೀನ ಕಳೆದುಕೊಳ್ಳುವ ಸ್ಥಿತಿಯಲ್ಲಿತ್ತು ಎಂದಿದ್ದಾರೆ. ನೋವಿನಿಂದಾಗಿ ತಮಗೆ ನಡೆಯಲು, ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬದುಕಿನ ಭರವಸೆಯನ್ನೇ ಕಳೆದುಕೊಂಡುಬಿಟ್ಟಿದ್ದೆ. ತುಂಬಾ ಕಷ್ಟದ ದಿನಗಳನ್ನು ಕಳೆದಿದ್ದೇನೆ ಎಂದು ಹೇಳಿದ್ದಾರೆ.

Advertisement

Advertisement

ನಿಲ್ಲಲು, ಮಲಗಲೂ ಸಾಧ್ಯವೇ ಇಲ್ಲ, ತಡೆದುಕೊಳ್ಳಲು ಅಸಾಧ್ಯವಾದ ನೋವಾದಾಗ ತುರ್ತು ಚಿಕಿತ್ಸೆ ಪಡೆಯಲು ಮುಂದಾದೆ. ಕೋವಿಡ್ ಕಾರಣದಿಂದಾಗಿ ಒಬ್ಬಳೇ ಆಸ್ಪತ್ರೆಯಲ್ಲಿ ಇರಬೇಕಾದ ಸ್ಥಿತಿ. ಆಸ್ಪತ್ರೆಯಲ್ಲಿ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದೇನೆ. ಮೊದಲಿನಂತಾಗುವ ವಿಶ್ವಾಸ ಮೂಡಿದೆ. ಪಾರ್ಶ್ವವಾಯುವಿನ ಲಕ್ಷಣ ಕಾಣಿಸಿಕೊಂಡಾಗ ಮೊದಲಿನಂತೆ ಡಾನ್ಸ್ ಮಾಡಲು ಇನ್ನೆಂದಿಗೂ ಸಾಧ್ಯವೇ ಇಲ್ಲ ಎಂದು ಆತಂಕಕ್ಕೊಳಗಾಗಿದ್ದೆ. ಆದರೆ ವೈದ್ಯರು ನಿಧಾನವಾಗಿ ಚೇತರಿಸಿಕೊಂಡ ಬಳಿಕ ಡಾನ್ಸ್ ಮಾಡಬಹುದು ಎಂದು ಭರವಸೆ ನೀಡಿದ್ದಾರೆ. ನನಗೆ ಶಕ್ತಿ ತುಂಬಿದ ದೇವರಿಗೆ ಚಿರಋಣಿಯಾಗಿದ್ದೇನೆ. ನನಗಾಗಿ ಪ್ರಾರ್ಥಿಸಿದ ನನ್ನ ಕುಟುಂಬದವರಿಗೆ, ನನಗಾಗಿ ಬೇಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ಎಂದಿದ್ದಾರೆ.

Advertisement

 

Advertisement
View this post on Instagram

 

A post shared by Manya (@manya_naidu)

ಬದುಕು ಯಾವಾಗಲೂ ಸುಲಭವಾಗಿಯೇ ಇರುವುದಿಲ್ಲ, ಜೀವನ ಏರಿಳಿತಗಳ ಸಂಗಮ. ಕಷ್ಟಗಳು ಬಂದಾಗ ಧೃತಿಗೆಡದೆ, ಸುಖ ಬಂದಾಗ ಹಿಗ್ಗದೇ ಎಲ್ಲವನ್ನು ಸಮಾನವಾಗಿ ಎದುರಿಸುತ್ತಾ ಹೋಗಬೇಕು. ನಾನು ಬಹುಬೇಗ ಗುಣಮುಖಳಾಗಿ ನೋವನ್ನು ಗೆದ್ದು ಬರುತ್ತೇನೆ ಎಂದು ಹೇಳಿದ್ದಾರೆ. ಮಾನ್ಯಾ ಬೇಗನೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಸ್ಯಾಂಡಲ್ ವುಡ್ ಮಾತ್ರವಲ್ಲ ತೆಲುಗು ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಮಾನ್ಯಾ ದಕ್ಷಿಣ ಭಾರತದ ಬಹುಬೇಡಿಕೆ ನಟಿ ಎನಿಸಿಕೊಂಡವರು. ಮಾನ್ಯಾ ಡಾ.ವಿಷ್ಣುವರ್ಧನ್ ಅಭಿನಯದ ವರ್ಷ, ದರ್ಶನ್ ಅಭಿನಯದ ಶಾಸ್ತಿ, ಶ್ರೀಮುರಳಿ ಅಭಿನಯದ ಶಂಭು ಸೇರಿದಂತೆ ಹಲವು ಖ್ಯಾತನಾಮರಿಗೆ ನಾಯಕಿಯಾಗಿ ಅಭಿನಯಿಸಿದ್ದರು.

Advertisement