ಸೂಜಿ ಚುಚ್ಚುವಾಗ ಮುಖ ಮುಚ್ಚಿಕೊಂಡ ಸ್ಯಾಂಡಲ್​ವುಡ್ ನಿರ್ದೇಶಕ…ಭಯಾನಾ ಅಥವಾ ನರ್ಸ್ ನೋಡಿ ನಾಚಿಕೇನಾ ಅಂತಿದ್ದಾರೆ ನೆಟಿಜನ್ಸ್​​​​​​​​

in News/ಸಿನಿಮಾ 83 views

ಕೊರೊನಾವನ್ನು ಸಂಪೂರ್ಣ ತಡೆಗಟ್ಟಲು 2ಡಿಜಿ ಔಷಧ ರಾಮಬಾಣ ಎಂದು ಹೇಳಲಾಗುತ್ತಿದ್ದರೂ ಸದ್ಯಕ್ಕೆ ಇದು ಜನರಿಗೆ ಸುಲಭವಾಗಿ ಸಿಗುವ ಪರಿಸ್ಥಿತಿಯಲ್ಲಿಲ್ಲ. ಒಂದು ವೇಳೆ ಕೊರೊನಾ ಅಟ್ಯಾಕ್ ಆದರೂ ಅದನ್ನು ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಭಾರತದಲ್ಲಿ ಈಗ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಸ್ಪುಟ್ನಿಕ್ ಕೂಡಾ ಬರಲಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ,18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ಕೊಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ಘೋಷಿಸಿದ್ದಾರೆ. ಆರಂಭದಲ್ಲಿ ಲಸಿಕೆ ವಿಚಾರವಾಗಿ ಮೂಗು ಮುರಿದವರು ಈಗ ಲಸಿಕೆ ದೊರೆತರೆ ಸಾಕಪ್ಪಾ ಎಂದು ಖಾಸಗಿ ಆಸ್ಪತ್ರೆಗೆ ತೆರಳಿ ಹಣ ನೀಡಿಯಾದರೂ ಲಸಿಕೆ ಪಡೆದು ಬರುತ್ತಿದ್ದಾರೆ. ಲಸಿಕೆ ಪಡೆದವರು ಫೋಟೋ ಕ್ಲಿಕ್ಕಿಸಿಕೊಂಡು ವ್ಯಾಕ್ಸಿನೇಟೆಡ್​ ಕ್ಯಾಪ್ಷನ್ ನೀಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್​​ಲೋಡ್ ಮಾಡುತ್ತಿದ್ದಾರೆ.

Advertisement

Advertisement

ಸೆಲಬ್ರಿಟಿಗಳು ಕೂಡಾ ವ್ಯಾಕ್ಸಿನ್ ಪಡೆಯುತ್ತಿದ್ದು ನೀವು ಕೂಡಾ ತಪ್ಪದೆ ಲಸಿಕೆ ಪಡೆಯಿರಿ ಎಂದು ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಯತ್ನಿಸುತ್ತಿದ್ಧಾರೆ. ಇತ್ತಿಚೆಗೆ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಲಸಿಕೆ ಪಡೆದಿದ್ದಾರೆ. ತಾವು ಲಸಿಕೆ ಪಡೆಯುತ್ತಿರುವ ಫೋಟೋವನ್ನು ಪ್ರಶಾಂತ್ ನೀಲ್ ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡಿದ್ದಾರೆ. ”ಕೊನೆಗೂ ನಾನು ಲಸಿಕೆ ಪಡೆದೆ. ಒಂದು ವೇಳೆ ನೀವು ಇನ್ನೂ ಲಸಿಕೆ ಪಡೆಯದಿದ್ದಲ್ಲಿ ಆದಷ್ಟು ಬೇಗ ರಿಜಿಸ್ಟರ್ ಮಾಡಿಸಿ ನಿಮ್ಮ ಕುಟುಂಬದೊಂದಿಗೆ ಹೋಗಿ ಪಡೆಯಿರಿ” ಎಂದು ಪ್ರಶಾಂತ್ ನೀಲ್ ಕೈ ಮುಗಿಯುವ ಎಮೋಜಿಯೊಂದಿಗೆ ಅಭಿಮಾನಿಗಳ ಬಳಿ ಮನವಿ ಮಾಡಿದ್ಧಾರೆ.

Advertisement

ಆದರೆ ಪ್ರಶಾಂತ್ ನೀಲ್ ಲಸಿಕೆ ಪಡೆಯುತ್ತಿರುವ ಫೋಟೋ ನೋಡಿ ಎಲ್ಲರೂ ನಗುತ್ತಿದ್ಧಾರೆ. ಫೋಟೋದಲ್ಲಿ ನರ್ಸ್ ಇಂಜಕ್ಷನ್ ಚುಚ್ಚುವಾಗ ಪ್ರಶಾಂತ್ ನೀಲ್ ಬಲಗೈಲಿ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದನ್ನು ನೋಡಿದರೆ ಅವರಿಗೆ ಇಂಜಕ್ಷನ್ ಅಂದರೆ ಭಯ ಇರಬಹುದೇನೋ ಅನ್ನಿಸುತ್ತಿದೆ. ಆದ್ದರಿಂದ ಕೆಲವರು ಇಂಜಕ್ಷನ್ ಅಂದರೆ ಭಯನಾ ಅಂತ ಪ್ರಶ್ನಿಸಿ ಲಾಫಿಂಗ್ ಎಮೋಜಿಯೊಂದಿಗೆ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನರ್ಸ್ ನೋಡಿ ನಾಚಿಕೊಂಡಿರಬೇಕು ಎಂದು ಕಾಲೆಳೆಯುತ್ತಿದ್ದಾರೆ. ಇನ್ನೂ ಕೆಲವರಂತೂ ಇಷ್ಟು ದೊಡ್ಡ ನಿರ್ದೇಶಕನಾಗಿ ಚಿಕ್ಕ ಇಂಜಕ್ಷನ್​​​ಗೆ ಭಯ ಪಡ್ತೀರಲ್ಲಾ ಎಂದು ನಗುತ್ತಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ಮಾತ್ರ ತಮಾಷೆ ಎನ್ನಿಸುತ್ತಿದೆ.

Advertisement

ಸಿನಿಮಾ ವಿಚಾರಕ್ಕೆ ಬರುವುದಾದರೆ ಪ್ರಶಾಂತ್ ನೀಲ್ 2014 ರಲ್ಲಿ ಶ್ರೀಮುರಳಿ ಅಭಿನಯದ ‘ಉಗ್ರಂ’ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟರು. ಈ ಚಿತ್ರದ ನಂತರ ನಿರ್ದೇಶಿಸಿದ ‘ಕೆಜಿಎಫ್​​​’ ಸಿನಿಮಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಯ್ತು. ಸದ್ಯಕ್ಕೆ ‘ಕೆಜಿಎಫ್​​​​​-2’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರೊಂದಿಗೆ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವ ಪ್ರಶಾಂತ್ ನೀಲ್, ‘ಸಲಾರ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಹಾಗೂ ಶೃತಿ ಹಾಸನ್ ನಟಿಸುತ್ತಿದ್ದಾರೆ. ಈ ಚಿತ್ರದ ನಂತರ ಜ್ಯೂನಿಯರ್ ಎನ್​ಟಿಆರ್​​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

-ರಕ್ಷಿತ ಕೆ.ಆರ್. ಸಾಗರ

Advertisement