ಚಂದನವನದ ಸ್ಟಾರ್ ನಟರಿಗೆ ಸಿಕ್ಕಿರುವ ಹೊಸ ಬಿರುದುಗಳು ಇವು… ನೋಡಿ !

in ಮನರಂಜನೆ/ಸಿನಿಮಾ 337 views

ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಪ್ರೀತಿಸುವಷ್ಟು ಆರಾಧಿಸುವಷ್ಟು ಬೇರೆ ಯಾವ ದೇಶದಲ್ಲೂ ಆರಾಧಿಸುವುದಿಲ್ಲ. ತನ್ನ ನೆಚ್ಚಿನ ನಟರಿಗೊಸ್ಕರ ಪ್ರಾಣ ಕೊಡುವುದಕ್ಕೂ ಅದೆಷ್ಟೋ ಅಭಿಮಾನಿಗಳು ಹೇಸುವುದಿಲ್ಲ. ಅವರನ್ನು ಅಷ್ಟು ಪ್ರೀತಿಸುತ್ತಿರುತ್ತಾರೆ. ಇನ್ನು ನಮ್ಮ ಕನ್ನಡ ಚಿತ್ರರಂಗದ ಸಿನಿತಾರೆಯರಿಗೆ ಅವರನ್ನು ಆರಾಧಿಸುವ ಅಭಿಮಾನಿ ದೇವರುಗಳು ಈಗಾಗಲೇ ಸಾಕಷ್ಟು ಬಿರುದುಗಳನ್ನು ನೀಡಿ ಬಿಟ್ಟಿದ್ದಾರೆ. ಆದರೆ ಅವರಿಗೆ ಇನ್ನೂ ಹೆಚ್ಚು ಖುಷಿ ಕೊಡುವ ವಿಚಾರ ಏನಂದರೆ ಅವರ ನೆಚ್ಚಿನ ನಟರಿಗೆ ಹೊಸ ಹೊಸ ಬಿರುದುಗಳನ್ನು ಕೊಡುತ್ತಲೇ ಇರುವುದು. ಇತ್ತೀಚೆಗೆ ನಮ್ಮ ಸ್ಯಾಂಡಲ್ ವುಡ್ ನ ಸ್ಟಾರ್‌ ನಟರಾದ ಡಿಬಾಸ್ ದರ್ಶನ್‌, ಕಿಚ್ಚ ಸುದೀಪ್‌, ಪುನೀತ್‌ ರಾಜ್‌ಕುಮಾರ್‌ ಮತ್ತು ಶಿವರಾಜ್ ಕುಮಾರ್ ಅಂತಹ ಸ್ಟಾರ್ ನಟರಿಗೆ ಅವರ ಅಭಿಮಾನಿಗಳು ಹೊಸ ಹೊಸ ಬಿರುದುಗಳನ್ನು ನೀಡುತ್ತಿರುವುದು ವಿಶೇಷ..

Advertisement

Advertisement

ಅಭಿಮಾನಿಗಳ ನೆಚ್ಚಿನ ದಾಸ ದರ್ಶನ್ ಅವರು ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲಿನ ಅಭಿಮಾನಿಗಳು ದರ್ಶನ್ ಅವರಿಗೆ ‘ಕರುನಾಡ ಕಲಾ ಕುಲತಿಲಕ’ ಎಂದು ಬಿರುದನ್ನು ನೀಡಿ ಸನ್ಮಾನಿಸಿದ್ದಾರೆ. ದರ್ಶನ್‌ ಅವರು ಕೂಡ ಅದನ್ನು ಖುಷಿಯಿಂದಲೇ ಸ್ವೀಕರಿಸಿದ್ದು, ಸನ್ಮಾನಿಸಲಾದ ಕೆಲವೊಂದು ಫೋಟೋಗಳ ನೋಡಿ ಅವರ ಅಭಿಮಾನಿಗಳು, ನಮ್ಮ ನೆಚ್ಚಿನ ನಟ ಇನ್ನು ಮುಂದೆ ಕರುನಾಡ ಕಲಾ ಕುಲತಿಲಕ ಎಂದು ಕರೆಯುತ್ತಿದ್ದಾರೆ.

Advertisement

Advertisement

ಇನ್ನು ಅಪ್ಪು ಅವರನ್ನು ರಾಜಕುಮಾರ ಸಿನಿಮಾದಲ್ಲಿ ‘ರಾಜರತ್ನ’ ಎಂದು ಕರೆಯಲಾಗಿತ್ತು ಮತ್ತು ಆ ಹೆಸರಿನಲ್ಲಿ ಅವರನ್ನು ಅಭಿಮಾನಿಗಳು ಕರೆಯುತ್ತಿದ್ದರು. ಇದೀಗ ರಾಜಕುಮಾರ ಸಿನಿಮಾವನ್ನು ನಿರ್ದೇಶಿದ್ದ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರ ಮತ್ತೊಂದು ಚಿತ್ರದಲ್ಲಿ ಅಪ್ಪು ನಟಿಸಿದ್ದು ಈ ಸಿನಿಮಾದ ಹೆಸರು ‘ಯುವ ರತ್ನ’. ಆದ ಕಾರಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಈ ಬಿರುದು ಸೂಕ್ತವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

 

ಕಿಚ್ಚ ಸುದೀಪ್‌ ಅವರು ಪೈಲ್ವಾನ್‌ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ, ಕಸರತ್ತು ಮಾಡಿದ್ದರು. ಕಿಚ್ಚ ಅವರಿಗೆ ಪೈಲ್ವಾನ್‌ ಚಿತ್ರತಂಡವೂ ಮತ್ತು ಕಿಚ್ಚನ ಅಭಿಮಾನಿಗಳು ಸುದೀಪ್ ಅವರಿಗೆ ‘ಬಾದ್‌ಶಾ’ ಎಂಬ ಬಿರುದನ್ನು ನೀಡಿದ್ದಾರೆ.

ಸರಳ ಜೀವಿಯಾದ ಶಿವಣ್ಣ ಅವರಿಗೆ ಹೊಸ ಬಿರುದೊಂದು ಬಂದಿದ್ದು ಆ ಬಿರುದೇ ‘ಭರತಚಕ್ರವರ್ತಿ’ . ಟಗರು ಚಿತ್ರದ ಯಶಸ್ಸಿನ ನಂತರ ಟಗರು ನಿರ್ಮಾಪಕ ಶ್ರೀಕಾಂತ್‌ ಮತ್ತು ಅಭಿಮಾನಿಗಳೂ ಅವರಿಗೆ ಈ ಬಿರುದು ಕೊಟ್ಟಿದ್ದರು. ಅದಲ್ಲದೆ ಅವರು ಆಸ್ಪ್ರೇಲಿಯಾಗೆ ಹೋದಾಗ ಅಲ್ಲಿ ‘ಮುಂಬಾ ಸ್ಟಾರ್‌’ ಎಂದು ಬಿರುದನ್ನು ನೀಡಿ ಗೌರವಿಸಲಾಗಿತ್ತು.

Advertisement
Share this on...