ಈ ಖ್ಯಾತ ನಟಿಯ ಮೇಲೆ ತಾಯಿಯೇ ದೂರು ಕೊಟ್ಟಿದ್ದು ಯಾಕೆ ಗೊತ್ತಾ..?

in Uncategorized 83 views

ಕೆಲವೊಮ್ಮೆ ಸ್ಟಾರ್ ಗಿರಿ, ಹಣ, ಒಂದು ಮಗುವಿನ ಮೇಲೆ ತೋರುವ ಹೆಚ್ಚು ಪ್ರೀತಿಯೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗೆ ಆಗಿದೆ ಈ ಸ್ಟಾರ್ ನಟಿಯ ಸ್ಥಿತಿ. ಮಗಳು ನನ್ನನ್ನು ಮನೆಯಿಂದ ಆಚೆ ನೂಕಿದ್ದಾಳೆ ಎಂದು ಹೆತ್ತ ತಾಯಿಯೇ ಆರೋಪ ಮಾಡಿದ್ದಾರೆ. ಈ ಆರೋಪ ಎದುರಿಸುತ್ತಿರುವ ನಟಿ ಸಂಗೀತ. ಕನ್ನಡದ ನಲ್ಲ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಈ ನಟಿ. ಇವರು ಖ್ಯಾತ ಸಿಂಗರ್ ಕ್ರಿಶ್ ಅವರನ್ನು ಮದುವೆಯಾಗಿದ್ದಾರೆ.  ನಟಿ ಸಂಗೀತರವರ ಮೇಲೆ ದೊಡ್ಡ ಆರೋಪ ಮಾಡಿರುವ ಈ ನಟಿಯ ತಾಯಿ ನನ್ನ ಮಗಳು ಸಂಗೀತ ನನ್ನನ್ನು ಮನೆಯಿಂದ ಹೊರಗೆ ನೂಕಿದ್ದಾಳೆ. ನನ್ನ ವಯಸ್ಸನ್ನು ನೋಡದೆ ಮನೆಯಿಂದ ಹೊರಗೆ ಹಾಕಲಾಗಿದೆ. ಅಷ್ಟೇ ಅಲ್ಲದೆ ನನ್ನ ಆಸ್ತಿಯನ್ನು ಕಬಳಿಸುವ ಪ್ರಯತ್ನ ಮಾಡುತ್ತಿದ್ದಾಳೆ ಎಂದು ನಟಿ ಸಂಗೀತ ಮೇಲೆ ಆರೋಪ ಹೊರಿಸಿರುವ ತಾಯಿ 2019 ರಲ್ಲಿ ಮಗಳ ಮೇಲೆ ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ. ಆಗ ಇದಕ್ಕೆ ತುಂಬಾ ತೀಕ್ಷಣವಾಗಿ ಪ್ರತಿಕ್ರಿಯಿಸಿದ ನಟಿ ಸಂಗೀತ ಹೇಳಿದ್ದೇನು ಗೊತ್ತಾ..?

Advertisement


ಈ ಜಗತ್ತಿಗೆ ನನ್ನನ್ನು ಪರಿಚಯಿಸಿದ್ದಕ್ಕೆ ನನ್ನ ತಾಯಿಗೆ ತುಂಬು ಹೃದಯದ ಧನ್ಯವಾದ, 13 ನೇ ವಯಸ್ಸಿಗೆ ನನ್ನನ್ನು ಕೆಲಸಕ್ಕೆ ಸೇರುವಂತೆ ಒತ್ತಾಯ ಮಾಡಿದ ತಾಯಿಗೆ ಧನ್ಯವಾದ, ಖಾಲಿ ಚೆಕ್ ನಲ್ಲಿ ನನ್ನ ಸಹಿ ಮಾಡಿಸಿದಕ್ಕೆ ಧನ್ಯವಾದ, ಮಾದಕ ವಸ್ತುಗಳಿಗೆ ದಾಸನಾಗಿ ಕೆಲಸ ಮಾಡದೆ ಮನೆಯಲ್ಲಿ ಕುಳಿತಿದ್ದ ನಿನ್ನ ಮಗನ ಸಲುವಾಗಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ ತಾಯಿಗೆ ಧನ್ಯವಾದ, ನನಗೆ ಇಷ್ಟವಾದ ಹುಡುಗನನ್ನು ಮದುವೆಯಾಗಲು ಬಿಡದೆ ಹೋರಾಟ ಮಾಡುವಂತೆ ಮಾಡಿದ ತಾಯಿಗೆ ಧನ್ಯವಾದ, ಮದುವೆಯ ನಂತರವೂ ನನ್ನ ಹಾಗೂ ನನ್ನ ಗಂಡನ ಕುಟುಂಬಕ್ಕೆ ಕಿರುಕುಳ ಕೊಟ್ಟ ತಾಯಿಗೆ ಧನ್ಯವಾದ, ಒಬ್ಬ ತಾಯಿ ಹೇಗೆ ಇರಬಾರದು ಎಂದು ತೋರಿಸಿದ್ದಕ್ಕೆ ಧನ್ಯವಾದ. ಹೀಗೆ ತಾಯಿ ಮಾಡಿದ ತಪ್ಪುಗಳನ್ನು ಉಲ್ಲೇಖಿಸಿ ತಾಯಿಗೆ ತಿಕ್ಷಣವಾಗಿ ತಿರುಗೇಟು ಕೊಟ್ಟಿದ್ದರು ನಟಿ ಸಂಗೀತ. ತಾಯಿ-ಮಗಳಿನ ಮಧ್ಯೆ ವಿಭೇದಗಳು ಬಂದಿರುವುದು ತುಂಬಾ ನೋವಿನ ಸಂಗತಿ.

Advertisement

– ಸುಷ್ಮಿತಾ

Advertisement
Advertisement

Advertisement
Share this on...