ಸುದೀಪ್ ನಟನೆಯ ಪ್ರೇಮದ ಕಾದಂಬರಿಯಲ್ಲಿ ನಟಿಸಿದ ಈಕೆ ಇದೀಗ ಕಿರುತೆರೆಯ ಪೋಷಕ ನಟಿ!

in ಮನರಂಜನೆ/ಸಿನಿಮಾ 827 views

ಸಂಗೀತಾ ಅನಿಲ್ ಪ್ರೇಕ್ಷಕರಿಗೆ ಹೊಸಬರೇನಲ್ಲ. ಗುಬ್ಬಿ ವೀರಣ್ಣ ಮೊಮ್ಮಗಳಾಗಿರುವ ಸಂಗೀತ ಅನಿಲ್ ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಂತಿ ನಿಮ್ಮ ಆಶಾ ಧಾರಾವಾಹಿಯಲ್ಲಿ ಕಥಾ ನಾಯಕಿ ಆಶಾಳಾಗಿ ಅಭಿನಯಿಸುತ್ತಿರುವ ಸಂಗೀತಾಗೆ ನಟನೆ ಎನ್ನುವುದು ರಕ್ತಗತವಾಗಿಯೇ ಒಲಿದು ಬಂದಿದೆ ಎಂದರೆ ತಪ್ಪಾಗಲಾರದು‌. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಬಂದಿರುವ ಚೆಲುವೆ ನೀ ನನ್ನ ಗೆಲ್ಲಲಾರೆ ,ನಾಗಕಾಳಭೈರವ ಸೇರಿದಂತೆ ಹತ್ತಾರು ಚಿತ್ರಗಳಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದರು. ಮೊದಲ ಬಾರಿಗೆ ನಾಯಕಿಯಾಗಿ ಸಂಗೀತ ತೆರೆ ಮೇಲೆ ಬಂದಾಗ ಕೇವಲ ಹದಿನೈದು ವರ್ಷ! ಕಾವೇರಿ ತೀರದಲ್ಲಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಸಂಗೀತಾ ಮುಂದೆ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಆಪರೇಷನ್ ಅಂತದಲ್ಲಿಯೂ ನಟಿಸಿದರು. ಸೂರ್ಯಪುತ್ರ ಸೇರಿದಂತೆ ಆರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಂಗೀತಾ ಇದ್ದಕ್ಕಿದ್ದಂತೆ ನಟನೆಯಿಂದ ಬ್ರೇಕ್ ಪಡೆದುಕೊಂಡರು. ಅದಕ್ಕೆ ಕಾರಣವೂ ಇದೆ. ತಂದೆಯ ಒತ್ತಡಕ್ಕೆ ಮಣಿದ ಸಂಗೀತಾ ನಟನೆಯಿಂದ ಬ್ರೇಕ್ ಪಡೆದು ಮುಂದೆ ಅನಿಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Advertisement

Advertisement

ಮುಂದೆ ಮನೆ, ಗಂಡ,ಮಕ್ಕಳು ಎಂದು ಸಂಸಾರದಲ್ಲಿ ಬ್ಯುಸಿಯಾಗಿದ್ದ ಸಂಗೀತಾ ಇದೀಗ ಪತಿಯ ಪ್ರೋತ್ಸಾಹದಿಂದಾಗಿ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಗಜ ಸಿನಿಮಾದಲ್ಲಿ ದೇವರಾಜ್ ಅವರ ಹೆಂಡತಿ ಪಾತ್ರದಲ್ಲಿ ನಟಿಸಿದ ಸಂಗೀತಾ ಅನಿಲ್ ಮುಂದೆ ದರ್ಶನ್ ಅವರ ಐದಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು.

Advertisement

ಆರ್. ಎನ್ ಜಯಗೋಪಾಲ್ ನಿರ್ದೇಶನದ ಜನನಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಪಯಣ ಆರಂಭಿಸಿದ ಸಂಗೀತಾ ಹೇಮಾ ಪಾತ್ರದ ಮೂಲಕ ಇಂದಿಗೂ ಮನೆ ಮಾತಾಗಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಭಾರತಿ ವಿಷ್ಣುವರ್ಧನ್ ಜೊತೆ ನಟಿಸಿದ ಸಂಗೀತಾ ಇಂದಿಗೂ ಹೇಮಾ ಪಾತ್ರದಿಂದಲೇ ಜನಜನಿತ. ಮುಂದೆ ಸುಧಾಕರ ಭಂಡಾರಿ ಅವರ ಪ್ರೇಮದ ಕಾದಂಬರಿ ಧಾರಾವಾಹಿಯಲ್ಲಿ ಕಿಚ್ಚ ಸುದೀಪ್ ಅವರ ಅಭಿನಯಿಸಿದ್ದ ಸಂಗೀತಾ ಇಂದಿಗೂ ಅದು ತುಂಬಾ ಅದ್ಭುತ ನೆನಪು ಎನ್ನುತ್ತಾರೆ. ಬದುಕು, ದಂಡಪಿಂಡಗಳು, ಭಾಗೀರಥಿ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸಂಗೀತಾ ಮದುವೆಯ ಸಲುವಾಗಿ ನಟನೆಯಿಂದ ದೂರ ಸರಿದರು. ತದ ನಂತರ ಜಗಳಗಂಟಿಯರು ಮೂಲಕ ಮತ್ತೆ ಕಿರುತೆರೆಗೆ ಬಂದ ಸಂಗೀತಾ ಮಾಂಗಲ್ಯಂ ತಂತು ನಾನೇನಾ ಧಾರಾವಾಹಿಯಲ್ಲಿ ನಾಯಕನ ಅಮ್ಮ ಮಾಗಿ ನಟಿಸಿದ್ದರು.

Advertisement

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಅಮ್ಮನಾಗಿಯೂ ಅಭಿನಯಿಸುತ್ತಿರುವ ಸಂಗೀತಾ ಇಂತಿ ನಿಮ್ಮ ಆಶಾ ಧಾರಾವಾಹಿಯಲ್ಲಿ ಆಶಾ ಎಂಬ ಗೃಹಿಣಿಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂತಿ ನಿಮ್ಮ ಆಶಾ ಧಾರಾವಾಹಿಯು ಆಶಾ ಎಂಬ ಗೃಹಿಣಿಯ ಸುತ್ತ ಸುತ್ತುವ ಕತೆಯಾಗಿದ್ದು ಇದರಲ್ಲಿ ಇಡೀ ಮನೆಯನ್ನು ಸಂಭಾಳಿಸುವ ,ಕಷ್ಟ ದುಃಖಗಳನ್ನೆಲ್ಲಾ ನುಂಗುವ ಪಾತ್ರಧಾರಿಯಾಗಿ ಆಶಾ ಕಾಣಿಸಿಕೊಳ್ಳುತ್ತಾಳೆ. ಅಮ್ಮ ,ಅತ್ತೆ , ಸೊಸೆಯಾಗಿ ಸಂಸಾರವನ್ನು ನಿಭಾಯಿಸುವ ಆಶಾ ಆಗಿರುವುದು ಥ್ರಿಲ್ ಸಂಗತಿ.

ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿ ನಟಿಸುತ್ತಿರುವ ಆಶಾ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ನಟನೆಯೇ ನನ್ನ ಬದುಕು ಎಂದು ಹೇಳುವ ಸಂಗೀತಾ ಮತ್ತೆ ಬಣ್ಣದ ಲೋಕದಲ್ಲಿ ಕಮಾಲ್ ಮಾಡುತ್ತಿದ್ದಾರೆ ಎಂದರೆ ಪತಿ ಅನಿಲ್ ಹಾಗೂ ಮಕ್ಕಳ ಪ್ರೋತ್ಸಾಹವೇ ಕಾರಣ.
– ಅಹಲ್ಯಾ

Advertisement
Share this on...