ನಲ್ಲ ಚಿತ್ರದ ನಾಯಕಿಯ ವಿರುದ್ದ ತನ್ನ ತಾಯಿಯೆ ದೂರು ನೀಡಿರುವುದು ಯಾಕೆ ?

in ಕನ್ನಡ ಮಾಹಿತಿ/ಸಿನಿಮಾ 202 views

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಂತಹ ನಲ್ಲ ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ‌ ? ಕನ್ನಡ ಸಿನಿಪ್ರಿಯರ ನೆಚ್ಚಿನ ಸಿನಿಮಾ ಇದಾಗಿದ್ದು, ಹುಚ್ಚಿಯೊಬ್ಬಳನ್ನು ತನ್ನ ಮಗುವಂತೆ ಸಲಹಿ ಅವಳಿಗೆ ಸರಿಯಾಗುವಂತೆ ಮಾಡುವ ಮನಮುಟ್ಟುವ ಕಥೆ ನಲ್ಲ ಸಿನಿಮಾದಾಗಿತ್ತು. ಇನ್ನು ಈ ಸಿನಿಮಾವನ್ನು ಮಲಯಾಳಂನಿಂದ ಕನ್ನಡಕ್ಕೆ ರೀಮೇಕ್ ಮಾಡಿದವರು ನಾಗೇಂದ್ರ ಪ್ರಸಾದ್ ಅವರು. ಸಿನಿಮಾ ಸೂಪರ್ ಹಿಟ್ ಆಗದೇ ಹೋಗಿದ್ದರು, ಒಂದು ಮಟ್ಟದಲ್ಲಿ ಓಡಿತ್ತು. ‘ಮಲಗೇ ಮಲಗೇ ಗುಬ್ಬಿ ಮರಿ’ ಸೇರಿದಂತೆ ಒಂದೆರಡು ಹಾಡುಗಳು ಈಗಲೂ ಕೂಡ ಸೂಪರ್ ಹಿಟ್. ನಲ್ಲ ಸಿನಿಮಾದ ನಂತರ ಕನ್ನಡದಲ್ಲಿ ನಾಯಕಿ ಸಂಗೀತ ಕ್ರಿಶ್ ಅವರಿಗೆ ಯಾವುದೇ ರೀತಿಯ ಅವಕಾಶಗಳು ಬಂದೊದಗುವುದಿಲ್ಲ. ಮಲಯಾಳಂ, ತಮಿಳಿನಲ್ಲಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡ ಇವರು ನಂತರ ಗಾಯಕ ಕ್ರಿಶ್ ಅವರನ್ನು ಪ್ರೀತಿಸಿ ವಿವಾಹವಾದರು . ಇವರಿಗೆ ಒಬ್ಬ ಮುದ್ದಾದ ಮಗನಿದ್ದಾನೆ.

Advertisement

 

Advertisement


ಇನ್ನು ಇದೀಗ ಸಂಗೀತಾ ಅವರ ವಿರುದ್ಧ ಅವರ ತಾಯಿಯೆ ದೂರು ನೀಡಿದ್ದು, ವಯಸ್ಸಾದ ನನ್ನನ್ನು ಮಗಳು ಹೊರದೂಡಿದ್ದಾಳೆ ಎಂದು ದೂರಿದ್ದಾರೆ. ಏಕೆಂದರೆ ಚೆನೈನಲ್ಲಿ ಎರಡು ಫ್ಲೋರ್ ಮನೆಯಲ್ಲಿ ಗ್ರೌಂಡ್ ಫ್ಲೋರ್ ತಾಯಿ, ಮೇಲೆ ಮಗಳು ವಾಸವಾಗಿದ್ದರು. ವಿವಾಹವಾಗಿ ಮನೆ ಮಗಳು ಸಂಗೀತಾರ ಹೆಸರಿನಲ್ಲಿ ಇತ್ತು. ಇದೀಗ ಸಂಗೀತ ನನ್ನನ್ನು ಹೊರ ಹಾಕಿದ್ದಾಳೆ ಎಂದು ತಾಯಿ ದೂರು ನೀಡಿದ್ದಾರೆ. ಸಂಗೀತಾ ಮಾತ್ರ ತಮ್ಮ ತಾಯಿಯ ಬಗ್ಗೆ ಫೇಸ್‌ಬುಕ್‌ ನಲ್ಲಿ ಬೇರೆ ರೀತಿಯಲ್ಲೇ ಬರೆದುಕೊಂಡಿದ್ದಾರೆ!

Advertisement

 

Advertisement


‘ನನ್ನನ್ನು ಈ ಭೂಮಿಗೆ ತಂದಿದ್ದಕ್ಕೆ ಧನ್ಯವಾದಗಳು. ಶಾಲೆ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ, 13ನೇ ವಯಸ್ಸಿಗೆ ದುಡಿಯುವಂತೆ ಮಾಡಿದ್ದಕ್ಕೆ ಧನ್ಯವಾದಗಳು. ಬ್ಲ್ಯಾಂಕ್‌ ಚೆಕ್‌ನಲ್ಲಿ ಸಹಿ ಮಾಡಿಸಿದ್ದಕ್ಕೆ ಧನ್ಯವಾದಗಳು. ಜೀವನದಲ್ಲಿ ಕೆಲಸಕ್ಕೆ ಹೋಗದೆ ಆಲ್ಕೋಹಾಲಿಕ್, ಡ್ರಗ್ ಎಡಿಕ್ಟ್ ಆಗಿದ್ದ ನಿನ್ನ ಗಂಡುಮಕ್ಕಳಿಗೋಸ್ಕರ ನನ್ನ ಬಳಸಿಕೊಂಡಿದ್ದಕ್ಕೆ ಧನ್ಯವಾದಗಳು. ನನ್ನ ಮನೆ ನಿನ್ನ ನಿರ್ಣಯ ಹೇರಿದ್ದಕ್ಕೆ, ನನ್ನ ಮದುವೆ ಬಗ್ಗೆ ಯೋಚಿಸದಿದ್ದಕ್ಕೆ, ನನ್ನ ಗಂಡನಿಗೆ ಡಿಸ್ಟರ್ಬ್ ಮಾಡಿದ್ದಕ್ಕೆ, ನನ್ನ ಕುಟುಂಬದ ಶಾಂತಿ ಹಾಳು ಮಾಡಿದ್ದಕ್ಕೆ , ತಾಯಿ ಅನ್ನುವವಳು ಹೇಗೆ ಇರಬಾರದು ಎಂದು ತಿಳಿಸಿಕೊಟ್ಟಿದ್ದಕ್ಕೆ,ಈಗ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ, ನನ್ನನ್ನು ಜೀವನದಲ್ಲಿ ಪ್ರೌಢಳಾಗಿ ಮಾಡಿದ್ದಕ್ಕೆ, ಸ್ಟ್ರಾಂಗ್ ಆಗಿರುವಂತೆ ಮಾಡಿ ಹೋರಾಡುವಂತೆ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ವ್ಯಂಗ್ಯವಾಗಿ ಸಂಗೀತಾ ತಾಯಿಯ ವಿರುದ್ಧ ಹರಿಹಾಯ್ದಿದ್ದಾರೆ

Advertisement
Share this on...