ಡಾ. ವಿಷ್ಣುವರ್ಧನ್ ಜೊತೆ ನಟಿಸಿದ್ದ ಈ ನಟಿಯ ಗುರುತು ಸಿಕ್ತಾ…?

in ಸಿನಿಮಾ 39 views

‘ಅನಾಥರು’ ಚಿತ್ರದಲ್ಲಿ ಉಪೇಂದ್ರ ಜೊತೆಯಾಗಿ, ‘ದಿಗ್ಗಜರು’ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಹೆಜ್ಜೆ ಹಾಕಿದ್ದ ಸಾಂಘವಿ ನಿಮಗೆ ನೆನಪಿರಬಹುದು. ಆದರೆ ಈ ಫೋಟೋ ನೋಡಿದರೆ ಅವರನ್ನು ಗುರುತು ಹಿಡಿಯುವುದು ಬಹಳ ಕಷ್ಟ. ಏಕೆಂದರೆ ಅವರು ಅಷ್ಟು ಬದಲಾಗಿದ್ದಾರೆ. ನೋಡಲು ದಪ್ಪ ಆಗಿದ್ದಾರೆ, ಸಾಂಘವಿಗೆ ಈಗ ಮಗು ಕೂಡಾ ಆಗಿದೆ. ಅವರ ಮುಖ ಕೂಡಾ ಗುರುತು ಸಿಗದಷ್ಟು ಬದಲಾಗಿದೆ.

Advertisement

 

Advertisement

Advertisement

ಅಂದಹಾಗೆ ಸಾಂಘವಿ ಮೂಲತ: ಮೈಸೂರಿನವರು. ಹುಟ್ಟಿ ಬೆಳೆದದ್ದು ಓದಿದ್ದು ಎಲ್ಲವೂ ಮೈಸೂರಿನಲ್ಲೇ. ಸಾಂಘವಿ ಮೊದಲ ಹೆಸರು ಕಾವ್ಯ ರಮೇಶ್. ಸ್ಯಾಂಡಲ್​​​ವುಡ್ ಹಿರಿಯ ನಟಿ ಆರತಿ ಕಾವ್ಯ ಅವರ ಅಜ್ಜಿಯ ತಂಗಿ ಮಗಳು. ಅವರ ಮೂಲಕ ಕಾವ್ಯ ಚಿತ್ರರಂಗಕ್ಕೆ ಬಂದರು. 1993 ರಲ್ಲಿ ತಮಿಳಿನ ‘ಅಮರಾವತಿ’ ಚಿತ್ರದ ಮೂಲಕ ಸಾಂಘವಿ ಹೆಸರಿನಲ್ಲಿ ಸಿನಿ ಕರಿಯರ್ ಆರಂಭಿಸಿದ ಅವರು ಪೋಷಕ ಪಾತ್ರ ಸೇರಿ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

 

1994ರಲ್ಲಿ ‘ರಾಯರ ಮಗ’ ಚಿತ್ರದ ಮೂಲಕ ಸಾಂಘವಿ ಸ್ಯಾಂಡಲ್​​ವುಡ್​​​ಗೆ ಕಾಲಿಟ್ಟರು. ನಂತರ ಅವರು ಲವ್​​​-94, ದಿಗ್ಗಜರು, ನಿಧಿ, ಅನಾಥರು, ಇಂದ್ರ, ಚಿತ್ರದಲ್ಲಿ ನಟಿಸಿದರು. ತಮಿಳು, ಮಲಯಾಳಂ, ಕನ್ನಡ ಚಿತ್ರಗಳಿಗಿಂತ ಹೆಚ್ಚಾಗಿ ಅವರು ನಟಿಸಿದ್ದು ತೆಲುಗು ಚಿತ್ರಗಳಲ್ಲಿ. 2005 ರಲ್ಲಿ ಒಮ್ಮೆ ತಂದೆಯೊಂದಿಗೆ ಮೈಸೂರಿನಿಂದ ಚೆನ್ನೈಗೆ ಹೋಗುವ ವೇಳೆ ಸಾಂಘವಿಗೆ ಅಪಘಾತವಾಗಿತ್ತು. ಕೆಲವು ದಿನಗಳ ನಂತರ ಅವರು ಬೆಡ್​ ರೆಸ್ಟ್​​​​ನಲ್ಲಿದ್ದರು. ಸಿನಿಮಾ ಮಾತ್ರವಲ್ಲ ಕಿರುತೆರೆಯಲ್ಲೂ ಸಾಂಘವಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

 

ಸಾಂಘವಿ 2016 ರಲ್ಲಿ ಐಟಿ ಉದ್ಯೋಗಿ ಎನ್​​. ವೆಂಕಟೇಶ್​​​​​​​​ ಎಂಬುವವರನ್ನು ಮದುವೆಯಾದರು. ಈಗ ಅವರಿಗೆ ಮುದ್ದಾದ ಹೆಣ್ಣು ಮಗು ಇದೆ. ಮಗುವಿನ ಪೋಟೋವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಹಾಗೂ ಮಗುವಿನೊಂದಿಗೆ ಸಾಂಘವಿ ಸಂತೋಷದಿಂದ ಜೀವಿಸುತ್ತಿದ್ದಾರೆ.

Advertisement
Share this on...