ಮಾರಕ ಕ್ಯಾನ್ಸರ್​​ ರೋಗವನ್ನು ಗೆದ್ರಾ ಸಂಜಯ್ ದತ್​​​…ಈ ಬಗ್ಗೆ ಖಳನಾಯಕ್​ ಹೇಳಿದ್ದೇನು…?

in ಮನರಂಜನೆ/ಸಿನಿಮಾ 309 views

ಹಿಂದೊಂದು ಕಾಲವಿತ್ತು, ಕ್ಯಾನ್ಸರ್ ಎಂದರೆ ಅಯ್ಯೋ ಇನ್ನು ನಮ್ಮ ಜೀವನ ಮುಗಿಯಿತು ಎಂಬ ಭಯದಿಂದಲೇ ಸತ್ತವರು ಅದೆಷ್ಟೋ ಮಂದಿ. ಆದರೆ ಇದೀಗ ಕ್ಯಾನ್ಸರ್​​ಗೆ ಕೂಡಾ ಮದ್ದು ಇದೆ. ಬೇಸರದ ವಿಚಾರ ಎಂದರೆ ಇದು ಬಡವರಿಗೆ ನಿಲುಕದ ನಕ್ಷತ್ರ. ಬಾಲಿವುಡ್ ನಟಿಯರಾದ ಸೋನಾಲಿ ಬೇಂದ್ರೆ, ಮೊನಿಷಾ ಕೊಯಿರಾಲ, ತಮಿಳು ನಟಿ ಗೌತಮಿ, ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಇನ್ನಿತರರು ಕ್ಯಾನ್ಸರ್​​​​ನಿಂದ ಬಳಲಿ ಗುಣಮುಖರಾಗಿ ಇದೀಗ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್​​ ಖಳನಾಯಕ್, ಕೆಜಿಎಫ್-2 ಅಧೀರ ಸಂಜಯ್ ದತ್ ಕೂಡಾ ಕ್ಯಾನರ್​​ನಿಂದ ಬಳಲುತ್ತಿದ್ದರು. ಇದೇ ವರ್ಷ ಆಗಸ್ಟ್​​ನಲ್ಲಿ ಸಂಜಯ್ ದತ್​ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ವೇಳೆ ಅವರಿಗೆ 4ನೇ ಹಂತದ ಕ್ಯಾನ್ಸರ್ ಇರುವ ವಿಚಾರ ತಿಳಿಯಿತು. ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಸಂಜಯ್ ದತ್ ಅಭಿಮಾನಿಗಳೊಂದಿಗೆ ಹಂಚಿಕೊಂಡು ನನ್ನನ್ನು ಆಶೀರ್ವದಿಸಿ ಎಂದು ಕೇಳಿಕೊಂಡಿದ್ದರು. ಸಂಜಯ್ ದತ್ ಪತ್ನಿ ಮಾನ್ಯತಾ ಕೂಡಾ ಸಂಜಯ್ ದತ್ ನಿಜವಾಗಲೂ ಕ್ಯಾನ್ಸರ್ ಗೆದ್ದು ಬರುತ್ತಾರೆ. ನಿಮ್ಮ ಪ್ರಾರ್ಥನೆ ಹಾಗೂ ಪ್ರೀತಿಯಿಂದ ಅವರು ಖಂಡಿತ ಗುಣಮುಖರಾಗುತ್ತಾರೆ ಎಂದು ಹೇಳಿಕೊಂಡಿದ್ದರು.

Advertisement

Advertisement

ಅಭಿಮಾನಿಗಳ ಪ್ರಾರ್ಥನೆ, ಮಾನ್ಯತಾ ಹಾಗೂ ಸಂಜಯ್ ದತ್ ಕುಟುಂಬದವರ ಹಾರೈಕೆಯಿಂದ ಕೊನೆಗೂ ಸಂಜಯ್ ದತ್ ಮಾರಕ ಕ್ಯಾನ್ಸರ್​​​ನಿಂದ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಸ್ವತ: ಸಂಜಯ್ ದತ್ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಸಂಜಯ್ ದತ್ ವೈದ್ಯರೊಂದಿಗೆ ನಿಂತಿರುವ ಫೋಟೋವೊಂದು ರಿವೀಲ್ ಆಗಿತ್ತು. ಆ ಫೋಟೋ ನೋಡಿ ಅಭಿಮಾನಿಗಳು ಬಹಳ ಬೇಸರ ವ್ಯಕ್ತಪಡಿಸಿದ್ದರು. ಏಕೆಂದರೆ ಆ ಫೋಟೋದಲ್ಲಿ ಸಂಜಯ್ ದತ್ ಬಹಳ ಕೃಶರಾಗಿದ್ದರು. ಆ ಫೋಟೋ ನೋಡಿದರೆ ನಿಜಕ್ಕೂ ಇವರೇನಾ ಸಂಜಯ್ ದತ್ ಎಂಬ ಅನುಮಾನ ಮೂಡುವಂತೆ ಇತ್ತು. ಆದರೆ ಇದೀಗ ಎಲ್ಲಾ ಸರಿ ಆಗಿದೆ.

Advertisement

Advertisement

ಅಕ್ಟೋಬರ್ 21 ರಂದು ಸಂಜಯ್ ದತ್ ಮಕ್ಕಳಾದ ಶಹ್ರಾನ್ ಹಾಗೂ ಇಕ್ರಾ ಹುಟ್ಟುಹಬ್ಬವಾಗಿದ್ದು ಈ ಖುಷಿಯ ದಿನದಂದು ಸಂಜಯ್ ದತ್ ತಾನು ಕ್ಯಾನ್ಸರ್​​​ನಿಂದ ಗುಣಮುಖನಾಗಿದ್ದೇನೆ ಎಂಬ ಸಂತೋಷದ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಸಂತೋಷದ ವಿಚಾರ ಸಂಜಯ್ ದತ್, ಅವರ ಮಕ್ಕಳಿಗಾಗಿ ನೀಡಿರುವ ಗಿಫ್ಟ್ ಕೂಡಾ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಸಂಜಯ್ ದತ್, ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ, ತಮಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಸಂಜಯ್ ದತ್ ಕನ್ನಡದ ಕೆಜಿಎಫ್ ಭಾಗ 2 ರಲ್ಲಿ ಅಧೀರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾನ್ಸರ್​​ ಚಿಕಿತ್ಸೆಗಾಗಿ ಸಂಜಯ್ ದತ್ ವಿದೇಶಕ್ಕೆ ತೆರಳುತ್ತಿದ್ದಾರೆ ಎಂದು ಸುದ್ದಿ ತಿಳಿದ ನಿರ್ಮಾಪಕರು ಮುಂದಿನ ಪರಿಸ್ಥಿತಿ ಹೇಗೋ ಎಂದು ಯೋಚಿಸುವಂತಾಗಿತ್ತು. ಆದರೆ ಇದೀಗ ಸಂಜಯ್ ದತ್ ಕ್ಯಾನ್ಸರ್​​ನಿಂದ ಗುಣಮುಖರಾಗಿ ಬಂದಿದ್ದು ಕೆಲವೇ ದಿನಗಳಲ್ಲಿ ಮತ್ತೆ ಶೂಟಿಂಗ್ ಹಾಜರಾಗುತ್ತಾರೆ ಎಂಬ ವಿಚಾರ ತಿಳಿದ ಸಿನಿಮಾ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement
Share this on...