ಸಂಕಷ್ಟ ಚತುರ್ಥಿಯ ದಿನ ಹೀಗೆ ಮಾಡಿ, ವ್ಯಾಪಾರದಲ್ಲಿ ಯಥೇಚ್ಛವಾಗಿ ಲಾಭವನ್ನು ಪಡೆಯುತ್ತೀರ…

in ಕನ್ನಡ ಮಾಹಿತಿ/ಜ್ಯೋತಿಷ್ಯ 12,901 views

ಶಾರ್ವರಿ  ನಾಮ ಸಂವತ್ಸರೆ, ಉತ್ತರಾಯಣೆ, ಶಿಶಿರ ಋತು, ಮಾಘ ಮಾಸೆ, ಶುಕ್ಲ ಪಕ್ಷದ  ಪೌರ್ಣಮಿ   ತಿಥಿ, ಮಖಾ ನಕ್ಷತ್ರ, ಸುಕರ್ಮ ಯೋಗ, ಭವ ಕರಣ,  27ನೇ ತಾರೀಕು ಫೆಬ್ರವರಿ 2021 ಶನಿವಾರದ ಪಂಚಾಂಗ ಫಲವನ್ನು  ಸಂಖ್ಯೆಗಳಿಗನುಗುಣವಾಗಿ ಅಥವಾ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ದಿನಭವಿಷ್ಯವನ್ನು ಶ್ರೀ ರವಿಶಂಕರ್ ಗುರೂಜಿರವರು ನೀಡಿದ್ದಾರೆ.

Advertisement

ಪ್ರತಿತಿಂಗಳೂ ಸಂಕಷ್ಟ ಚತುರ್ಥಿಯ ದಿನ ನಿಮ್ಮ ವ್ಯಾಪಾರ ಸ್ಥಳದಲ್ಲಿ ಕುಲಪುರೋಹಿತರು ಇಲ್ಲವೇ ನಿಮ್ಮ ಕುಟುಂಬಕ್ಕೆ ಶ್ರೇಯಸ್ಸನ್ನು ಬಯಸುವ ಹಿರಿಯ ಆಚಾರ್ಯರರು ಇಲ್ಲವೇ ಗಣಪತಿ ದೇವಸ್ಥಾನದ  ಅರ್ಚಕರಿಂದ ಗಣ ಹೋಮ ಹವನ ಮಾಡಿಸಿ.  ಹೋಮ ಹವನ ಮಾಡಿಸುವಾಗ ಆ ಹೋಮಕುಂಡಕ್ಕೆ  ಇಪ್ಪತ್ತೊಂದು  ನೆಲ್ಲಿಕಾಯಿಗಳನ್ನು ಸಮರ್ಪಿಸಿ ನಿಮ್ಮ ವ್ಯಾಪಾರದಲ್ಲಿ ಶ್ರದ್ಧಾ ಭಕ್ತಿ ವೃತ್ತಿಪರತೆ ನೀತಿ ನಿಜಾಯಿತಿ ಶುದ್ಧತೆ ಪ್ರಾಮಾಣಿಕತೆ ಸಹೃದಯತೆ ದಾನ ಮಾಡುವ ಗುಣ ಇವೆಲ್ಲವನ್ನು  ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರೆ ವ್ಯಾಪಾರದಲ್ಲಿ ಯಥೇಚ್ಛವಾಗಿ ಲಾಭವನ್ನು ಪಡೆಯುತ್ತೀರ.

Advertisement

Advertisement

1,10, 19, 28, ನೇ ತಾರೀಕಿನಲ್ಲಿ ಹುಟ್ಟಿದವರಿಗೆ ಸ್ವಲ್ಪ ತಳಮಳವಿರುತ್ತದೆ.  ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ. ಮುಖ ಪೆಚ್ಚಾಗುತ್ತದೆ ಅಮಾವಾಸ್ಯೆ ಹುಣ್ಣಿಮೆಗಳ ದಿವಸಗಳಲ್ಲಿ ದೇವಿಯ ದೇವಸ್ಥಾನಕ್ಕೆ ಹೋಗಿ ಬನ್ನಿ ಇದರಿಂದ ಒಳ್ಳೆಯದಾಗುತ್ತದೆ. ಕುಂಕುಮ ಗಂಧದ  ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ನೆಮ್ಮದಿ ದೊರೆಯುತ್ತದೆ.

Advertisement

2, 11, 20, 29 ನೇ ತಾರೀಕಿನಲ್ಲಿ ಹುಟ್ಟಿದವರಿಗೆ ಹುಳಿಯಾದ ಭಾವವಿರುತ್ತದೆ, ಮನಸ್ಸಿಗೆ ನೋವಾಗುವ ನೋವಿನ ಸುದ್ದಿ ,=ಕಣ್ಣೀರಾಕುವ ಸಂಕಟದ ಛಾಯೆ ಯನ್ನು ಕೇಳುವಂತಹ ಪ್ರವೃತ್ತಿ. ಹೆಚ್ಚು ಖರ್ಚುಗಳು ಕೂಡ ನಿಮ್ಮನ್ನು ಬಾಧಿಸುತ್ತದೆ. ದೇವಸ್ಥಾನಗಳಲ್ಲಿ ಹೋಮ ಯಾಗಗಳನ್ನು ಮಾಡುತ್ತಿರುತ್ತಾರೆ  ಹೋಮಕ್ಕೆ ಗ್ರಂಥಿಗೆ ಅಂಗಡಿಯಲ್ಲಿ ಸುಗಂಧ ದ್ರವ್ಯಗಳನ್ನು ತೆಗೆದುಕೊಂಡು ಬಂದು ಸಮರ್ಪಿಸಿ . ನಿಮಗಿರುವ ಬಾರ ಹೊರೆ ಗಾಬರಿ  ಆತಂಕ ಎಲ್ಲವೂ ದೂರಾಗುತ್ತದೆ. ದೇವಿ ಖಡ್ಗಮಾಲವನ್ನು ಓದಿ  ಒಳ್ಳೆಯದಾಗುತ್ತದೆ.

3, 12, 21, 30 ನೇ ತಾರೀಖಿನಂದು ಹುಟ್ಟಿದವರಿಗೆ ಇಂದು ಕುಹಕದ ಮಾತುಗಳನ್ನು ಕೇಳುತ್ತೀರ, ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ಖುಷಿಯ ವಿಚಾರವನ್ನು ಕೇಳೆ ಕೇಳುತ್ತಾನೆ ಆದ್ದರಿಂದ ಗಣಪತಿ ದೇವಸ್ಥಾನಕ್ಕೆ ಹೋಗಿ ಬನ್ನಿ ಪಶುಪಕ್ಷಿಗಳಿಗೆ ಸ್ವಲ್ಪ ಆಹಾರವನ್ನು ನೀಡಿ ಒಳ್ಳೆಯದಾಗುತ್ತದೆ.

4, 13, 22, 31 ನೇ ತಾರೀಖಿನಂದು ಹುಟ್ಟಿದವರಿಗೆ ತಪ್ಪಾದ ಮಾರ್ಗಕ್ಕೆ ನಿಮ್ಮನ್ನು ಎಳೆಯುವ ಸಂಭವವಿದೆ. ಯಾರ ಮಾತನ್ನು ಕೇಳದ ಮೊಂಡುತನದಿಂದ   ಮನೆಯ ಹಿರಿಯರ ಯಾರ ಮಾತನ್ನು ಕೇಳದೆ ಮುಂದಕ್ಕೆ ಹೆಜ್ಜೆ ಇಡಲು ಹೋಗುತ್ತೀರಾ ಎಚ್ಚರಿಕೆಯಿಂದಿರಿ. ದುರ್ಗಾ ದೇವಿಯ ದೇವಸ್ಥಾನಕ್ಕೆ ಹೋಗಿ ದರ್ಶನ ಪೂಜೆ ಮಾಡಿ ಬನ್ನಿ. ಜೊತೆಗೆ ಬೂದುಕುಂಬಳಕಾಯಿ ದೀಪವನ್ನು ಹಚ್ಚಿ. ವಿಪರೀತ ಬಲ ನಿಮ್ಮನ್ನು ಅಂಬಾರಿಯ ಮೇಲೆ ಕೂರಿಸುತ್ತದೆ ಇಲ್ಲವೇ ಧರಾಶಾಹಿಯಾಗಿ ಮಾಡಿಬಿಡುತ್ತದೆ ಎಚ್ಚರಿಕೆಯಿಂದಿರಿ.

5, 14, 23, ನೇ ತಾರೀಖಿನಂದು ಹುಟ್ಟಿದವರಿಗೆ ಮನಸ್ಸಿಗೆ ಜ್ವರ ಬಂದ ಆಕೆ ಹುಳಿಯ ಭಾವ,  ಏನೂ ಮಾಡಲೂ ಮನಸಿಲ್ಲದ  ಭಾವ , ಆತಂಕ ಮಾಡುವುದೋ ಬೇಡವೋ ಎಂಬ ಗೊಂದಲದ ವಾತಾವರಣ ಇರುತ್ತದೆ ಆದ್ದರಿಂದ ಸುಂದರಕಾಂಡ ಓದಿ ಸಂಗಾತಿಯ ಜೊತೆ ಕಿರಿಕಿರಿ ಎಳೆದಾಟ,  ಯಾರಿಗೂ ದುಡ್ಡು ಕೊಟ್ಟು ಮೋಸ ಹೋಗುವ ಸಂಭವ ಕೂಡ ಎದುರಾಗುತ್ತದೆ. ಆದ್ದರಿಂದ ಸುಂದರಕಾಂಡ ಪಾರಾಯಣ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ.

6, 15, 24, ನೇ ತಾರೀಖಿನಂದು ಹುಟ್ಟಿದವರಿಗೆ ಚೆನ್ನಾಗಿದೆ , ಸ್ಪೋರ್ಟ್ಸ್ ಮ್ಯಾನ್ ಆಗಿದ್ದರೆ ಅತಿವೇಗ ಅವಸರ ಒಳ್ಳೆಯದಲ್ಲ. ದೇವಸ್ಥಾನಗಳಿಗೆ ಹೋಗಿ ಪೂಜೆ ಅರ್ಚನೆ ಮಾಡಿಸುವ  ಮನಸ್ಸಿಲ್ಲದಿದ್ದರೂ ಕೂಡ ದೇವಾಲಯದ ಆವರಣದಲ್ಲಿ  ಕುಳಿತುಕೊಂಡು ಬನ್ನಿ ಇದರಿಂದ ನಿಮಗಿರುವ ಅಗೋಚರ ಎಳೆದಾಟ ಗಳು ನಿವಾರಣೆಯಾಗುತ್ತದೆ.

7, 16, 25 ನೇ ತಾರೀಖಿನಂದು ಹುಟ್ಟಿದವರಿಗೆ ದಾನ ಧರ್ಮ ಮಾಡುವ ಅಂತಹ ದಿನ.

8, 17, 26 ನೇ ತಾರೀಖಿನಂದು ಹುಟ್ಟಿದವರಿಗೆ ಅತಿಯಾದ ಕೆಟ್ಟ ಹವ್ಯಾಸಗಳಿದ್ದರೆ ಅದು ಹೆಚ್ಚಾಗುತ್ತದೆ. ಯಾವುದು ಎಷ್ಟಿರಬೇಕು ಅಷ್ಟಿರಬೇಕು ಯಾವುದನ್ನು ಅತಿಯಾಗಿ ಮಾಡಿಕೊಳ್ಳಬೇಡಿ ಎಚ್ಚರಿಕೆಯಿಂದಿರಿ.

9, 18, 27ನೇ ತಾರೀಖಿನಂದು ಹುಟ್ಟಿದವರು   ಹಿರಿಯರ ಆರೋಗ್ಯದ ಕಡೆಗೆ ಗಮನ ಕೊಡಿ,  ತಳಮಳ ಮತ್ತು ಅಲರ್ಜಿ ಗಳಾಗುತ್ತವೆ.

All Rights reserved Namma  Kannada Entertainment.

Advertisement