ಫೋಟೋಶೂಟ್ ಮೂಲಕ ಪಡ್ಡೆ ಹೈಕಳ ಮನ ಕದ್ದ ಈ ಚೆಲುವೆ ಯಾರು?

in ಮನರಂಜನೆ/ಸಿನಿಮಾ 229 views

ಈಕೆಯ ಫೋಟೋ ನೋಡಿದರೆ ಒಂದು ಕ್ಷಣ ಇದು ಆಕೆಯಾ ಎಂದು ಎನ್ನಿಸದಿರದು! ಬಾಲ ಕಲಾವಿದೆಯಾಗಿ ಬಣ್ಣದ ಲೋಕದಲ್ಲಿ ಕಮಾಲ್ ಮಾಡಿರುವ ಈಕೆಯ ಹೆಸರು ಸಾನ್ಯಾ ಅಯ್ಯರ್! ಅರೇ, ಸಾನ್ಯಾ ಅಯ್ಯರ್ ಯಾರು ಎಂದು ಕನ್ ಫ್ಯೂಸ್ ಆಗಬೇಡಿ. ಯಾಕೆಂದರೆ ನಟನಾ ರಂಗದಲ್ಲಿ ಈಕೆ ಪುಟ್ಟ ಗೌರಿ ಎಂದೇ ಫೇಮಸ್ಸು! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ಕಾಣಿಸಿಕೊಂಡು, ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಲುವೆಯೇ ಸಾನ್ಯಾ ಅಯ್ಯರ್. ಪುಟ್ಟ ಗೌರಿ ಮದುವೆಯ ನಂತರ ನಟನಾ ಲೋಕದಿಂದ ಕೊಂಚ ದೂರವಿರುವ ಸಾನ್ಯಾ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿಕೊಂಡಿದ್ದು ಹಾಟ್ ಅವತಾರದ ಮೂಲಕ ಪಡ್ಡೆ ಹೈಕಳ ಮನ ಕದ್ದಿದ್ದಾರೆ. ಸಾಕ್ಷಿ ಧಾರಾವಾಹಿಯ ಮೂಲಕ ಬಣ್ಣದ ಪಯಣ ಶುರು ಮಾಡಿದ್ದ ಸಾನ್ಯಾ ಮುಂದೆ ಸಿಂಧೂರ, ಕುಸುಮಾಂಜಲಿ ಧಾರಾವಾಹಿಯಲ್ಲಿ ನಟಿಸಿದ್ದರು.

Advertisement

Advertisement

ಶ್ರುತಿ ನಾಯ್ಡು ನಿರ್ದೇಶನದ ಸಿಂಧೂರ ಧಾರಾವಾಹಿಯಲ್ಲಿ ಸಿಂಧೂ ಆಗಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಸಾನ್ಯಾ ಅಯ್ಯರ್ ವಿಲನ್ ಅಗಿಯೂ ವೀಕ್ಷಕರ ಮನ ಸೆಳೆದ ಚೆಲುವೆ! ಜೀ ಕನ್ನಡ ವಾಹಿನಿಯಲ್ಲಿವ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯಲ್ಲಿ ರಶ್ಮಿ ಎಂಬ ನೆಗೆಟಿವ್ ಪಾತ್ರದಲ್ಲಿ ನಟಿಸಿ ಸೀರಿಯಲ್ ಪ್ರಿಯರ ಮನಸೂರೆಗೊಳಿಸಿರುವ ಸಾನ್ಯಾ ಗೆ ನಟನಾ ಕ್ಷೇತ್ರದಲ್ಲಿ ಜನಪ್ರಿಯತೆ ದೊರಕಿದ್ದು ಪುಟ್ಟ ಗೌರಿ ಪಾತ್ರದ ಮೂಲಕ.

Advertisement

ರಾಮ್ ಜೀ ಅವರ ನಿರ್ದೇಶನದ ಪುಟ್ಟ ಗೌರಿ ಧಾರಾವಾಹಿಯಲ್ಲಿ ಪುಟ್ಟ ಗೌರಿಯಾಗಿ ಕಾಣಿಸಿಕೊಂಡ ಸಾನ್ಯಾ ಇಂದಿಗೂ ಪುಟ್ಟ ಗೌರಿಯಾಗಿಯೇ ಪರಿಚಿತ. ಪುಟ್ಟ ಗೌರಿ ಮದುವೆ ಧಾರಾವಾಹಿ ಮುಗಿದು ವರುಷಗಳೂ ಸಂದರೂ ಇಂದಿಗೂ ಆಕೆಯ ಪಾತ್ರವನ್ನು ಜನ ಮರೆತಿಲ್ಲ. ಅಷ್ಟರ ಮಟ್ಟಿಗೆ ಸಾನ್ಯಾ ಅವರ ಗೌರಿ ಪಾತ್ರ ವೀಕ್ಷಕರ ಮನದಲ್ಲಿ ಅಚ್ಚೊತ್ತಿ ಬಿಟ್ಟಿದೆ. ಸಾನ್ಯಾ ಅವರು ಕೇವಲ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿಯೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ಗಜ, ಅನು, ಬೆಳಕಿನೆಡೆಗೆ ಸಿನಿಮಾಗಳಲ್ಲಿ ಅಭಿನಯಿಸಿದ್ದ ಸಾನ್ಯಾ ಅವರಿಗೆ ಬೆಳ್ಳಿತೆರೆಯಲ್ಲಿ ಬ್ರೇಕ್ ನೀಡಿದ್ದು ವಿಮುಕ್ತಿ ಸಿನಿಮಾ.

Advertisement

ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ ಸಿನಿಮಾದ ನಟನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಸಾನ್ಯಾ. ಇದರ ಜೊತೆಗೆ ಮಲಯಾಳಂ ಆಲ್ಬಂನಲ್ಲಿಯೂ ಸಾನ್ಯಾ ಗುರುತಿಸಿಕೊಂಡಿದ್ದಾರೆ. ಆರಾರೊ ನೀಯಾರೊ ಎನ್ನುವ ಮಲಯಾಳಂ ಆಲ್ಬಂ ನಲ್ಲಿ ಸಾನ್ಯಾ ಕಾಣಿಸಿಕೊಂಡಿದ್ದು ಆ ಮೂಲಕ ಪರಭಾಷೆಯಲ್ಲಿ ಮಿಂಚಿದ್ದಾರೆ. ಸದ್ಯ ಒದಿನಲ್ಲಿ ಬ್ಯುಸಿಯಾಗಿರುವ ಸಾನ್ಯಾಗೆ ಮುಂದಿನ ದಿನಗಳಲ್ಲಿ ಮಾಡೆಲಿಂಗ್ ಲೋಕದಲ್ಲಿ ಹೆಸರು ಮಾಡುವ ಬಯಕೆಯಿದೆ.
– ಅಹಲ್ಯಾ

Advertisement
Share this on...