ಸರಿಗಮಪ ಸೀಸನ್ 17 ಚಿತ್ರೀಕರಣ ಆರಂಭ, ತಯಾರಿ ಹೇಗಿದೆ ಗೊತ್ತಾ ?

in ಮನರಂಜನೆ/ಸಿನಿಮಾ 28 views

ಒಂದು ತಿಂಗಳ ಹಿಂದೆ ಕಿರುತೆರೆ ಧಾರಾವಾಹಿಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಸಹ, ರಿಯಾಲಿಟಿ ಶೋಗಳನ್ನು ಮಾತ್ರ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವವರು ಮತ್ತು ಸಿಬ್ಬಂದಿಯ ಕೊರತೆಯಿದ್ದು, 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ನಿಜ ಹೇಳಬೇಕೆಂದರೆ ವೀಕ್ಷಕರು ಗ್ಯಾಲರಿಯಲ್ಲಿ ಕುಳಿತು ಸ್ಪರ್ಧಿಗಳನ್ನು ವೀಕ್ಷಿಸುತ್ತಾ, ಪ್ರೋತ್ಸಾಹಿಸುವ ಮೂಲಕ ರಿಯಾಲಿಟಿ ಶೋಗಳು ಅಭಿವೃದ್ಧಿಯಾಗುತ್ತವೆ ಎಂಬುದು ಗಮನಾರ್ಹ.  ಆದರೆ ಜನಪ್ರಿಯ ಮ್ಯೂಸಿಕ್ ರಿಯಾಲಿಟಿ ಶೋ ಸರಿಗಮಪ ಇದಕ್ಕೊಂದು ಮಾರ್ಗವನ್ನು ಕಂಡುಕೊಂಡಿದೆ. ಲಾಕ್ಡೌನ್ಗೆ ಮುಂಚಿತವಾಗಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 17 ಚಿತ್ರೀಕರಣವನ್ನು ಪುನರಾರಂಭಿಸಿದೆ. ಚಾನೆಲ್’ನ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು “ನಾವು ಸರ್ಕಾರ ಹೊರಡಿಸಿದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ಕನಿಷ್ಠ ಜನರೊಂದಿಗೆ ಚಿತ್ರೀಕರಣ ಪ್ರಾರಂಭಿಸಿದ್ದೇವೆ. ಬೆಂಗಳೂರು ಮತ್ತು ಇತರ ಜಿಲ್ಲೆಗಳನ್ನು ಒಳಗೊಂಡ ಎಲ್ಲಾ ಸ್ಪರ್ಧಿಗಳು ನಾವು ಒದಗಿಸಿದ ವಸತಿ ಸೌಕರ್ಯಗಳಲ್ಲಿ ಇದ್ದಾರೆ. ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರವೇ ಕಾರ್ಯಕ್ರಮದ ಚಿತ್ರೀಕರಣವನ್ನು ಪುನರಾರಂಭಿಸಲಾಗಿದೆ.

Advertisement

Advertisement

ತೀರ್ಪುಗಾರರಾದ ಗಾನ ಗಾರುಡಿಗ ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ, ನಿರೂಪಕಿ ಅನುಶ್ರೀ ಸೇರಿದಂತೆ ಎಲ್ಲರಿಗೂ ನಾವು ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಿದ್ದೇವೆ. ದಿನದ ಚಟುವಟಿಕೆಗಳು ಪ್ರಾರಂಭವಾಗುವ ಮೊದಲು ಶೂಟಿಂಗ್ ನೆಲವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಸೆಟ್’ನಲ್ಲಿರುವ ಎಲ್ಲವೂ ಮೊದಲಿನಂತೆಯೇ ಇದ್ದರೂ, ಈ ಸಮಯದಲ್ಲಿ ಶೋ ವೀಕ್ಷಿಸಲು ಮತ್ತು ಸ್ಪರ್ಧಿಗಳನ್ನು ಹುರಿದುಂಬಿಸಲು ಯಾವುದೇ ಪ್ರೇಕ್ಷಕರು ಇರುವುದಿಲ್ಲ. ಶೋ ಇತಿಹಾಸದಲ್ಲಿ ಇದೇ ಮೊದಲನೆಯ ಬಾರಿಗೆ ಹೀಗೆ ನಡೆಸಲಾಗುತ್ತಿದೆ. ಈಗಿರುವ ಪರಿಸ್ಥಿತಿ ನೋಡಿ ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು” ಎಂದು ತಿಳಿಸಿದ್ದಾರೆ.

Advertisement

Advertisement

ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಕನ್ನಡದ ಸಂಗೀತದ ಲೋಕದಲ್ಲಿಯೇ ಹೊಸ ಅಧ್ಯಾಯಗಳನ್ನು ಬರೆದುಕೊಂಡು ಮುಂದೆ ಸಾಗುತ್ತಿದೆ. ಶೋ ಕಡಿಮೆ ಅವಧಿಯಲ್ಲೇ ಹೆಚ್ಚು ಜನರಿಗೆ ತಲುಪಿದ್ದರಿಂದ ಈ ಹಿಂದೆ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಸಣ್ಣ ಪ್ರಯತ್ನವಾಗಿ ಉಚಿತ ಸಂಗೀತಮಯ ಪ್ರಯಾಣವನ್ನು ವಾಹಿನಿಯು ಆಯೋಜನೆ ಮಾಡಿತ್ತು. ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಮಲೆಮಾದೇಶ್ವರ ಬೆಟ್ಟ, ಬೆಂಗಳೂರಿನಿಂದ ಮೈಸೂರು ಮತ್ತು ಹುಬ್ಬಳ್ಳಿ ಧಾರವಾಡದ ನಡುವಿನ ಪ್ರಯಾಣ ಅತ್ಯಂತ ಯಶಸ್ವಿ ಆಗಿ ನಡೆಯಿತು. ಎರಡೆರಡು ಬಾರಿ ಬಸ್’ಗಳು ಈ ಮಾರ್ಗದಲ್ಲಿ ಸಂಚರಿಸಿದವು.

ಜಾಹಿರಾತು :

“ಇಷ್ಟ ಪಟ್ಟ ಸ್ತ್ರೀ ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9535242057

Advertisement
Share this on...