ನಟಿ ಸರಿತಾ ಅವರ ಮಗ ಯಾರು ಗೊತ್ತಾ..? ಅವರು ಕೂಡ ದೊಡ್ಡ ನಟ..!

in ಮನರಂಜನೆ/ಸಿನಿಮಾ 122 views

ಕಪ್ಪು ಕೇವಲ ಬಣ್ಣವಷ್ಟೇ. ಬಣ್ಣ ನಟನೆಗೆ ಯಾವತ್ತೂ ಅಡ್ಡಿ ಬರುವುದಿಲ್ಲ ಎಂದು ನಿರೂಪಿಸಿದ ಕಪ್ಪು ಸುಂದರಿ ನಟಿ ಸರಿತಾ. ಸರಿತಾ ತೆಲುಗಿನ ‘ಮರುಚರಿತ್ರಂ’ ಎಂಬ ಚಿತ್ರದಿಂದ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚರಿತ್ರೆಯನ್ನೇ ಸೃಷ್ಟಿ ಮಾಡಿದರು. ಇನ್ನೂ ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ ಕುಮಾರ್ ಅವರೊಂದಿಗೆ ‘ಹೊಸಬೆಳಕು’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಹೊಸಬೆಳಕು ಮೂಡಿಸಿದರು.  ಒಂದು ಕಾಲದಲ್ಲಿ ತಮಿಳು, ತೆಲುಗು, ಮಲೆಯಾಳಂ ಹಾಗೂ ಕನ್ನಡದ ಹಲವಾರು ಚಿತ್ರಗಳಲ್ಲಿ ಫೇಮಸ್ ನಟಿಯಾಗಿ ಮಿಂಚಿದರು ನಟಿ ಸರಿತಾ. ಕನ್ನಡದಲ್ಲಿ ಹೊಸಬೆಳಕು, ಕೆರಳಿದಸಿಂಹ, ಭಕ್ತಪ್ರಹ್ಲಾದ, ಚಲಿಸುವ ಮೋಡಗಳು, ಕಾಮನಬಿಲ್ಲು, ಎರಡು ರೇಖೆಗಳು ಇನ್ನು ಮುಂತಾದ ಚಿತ್ರಗಳಲ್ಲಿ ಈ ನಟಿ ನಟಿಸಿದ್ದಾರೆ. ತಮ್ಮ ಕಣ್ಣಿನ ನೋಟದಲ್ಲಿ ಅದೆಷ್ಟೋ ಯುವಕರನ್ನು ಮರಳು ಮಾಡಿದವರು ಸರಿತಾ. ಈಕೆಗೆ ಫಿಲಂ ಫೇರ್ ಅವಾರ್ಡ್ ಗಳು, ನಂದಿ ಅವಾರ್ಡ್ ಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು ಹಲವಾರು ಪುರಸ್ಕಾರಗಳು ದೊರೆತಿದೆ.

Advertisement

 

Advertisement


ಸರಿತಾ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮುನಿಪಲ್ಲೇ ಎಂಬಲ್ಲಿ ಜನಿಸಿದರು. ನಟಿ ಸರಿತಾ ಕೇವಲ ಹದಿನಾಲ್ಕು ವರ್ಷವಿದ್ದಾಗಲೇ ಅವರ ಮನೆಯವರು ನಟ ವೆಂಕಟ ಸುಬ್ಬಯ್ಯ ಎಂಬುವವರೊಂದಿಗೆ ಕೊಟ್ಟು ಮದುವೆ ಮಾಡುತ್ತಾರೆ. 35 ವರ್ಷದ ಗಂಡನ ಮನಸ್ಥಿತಿಗೆ ಹಾಗೂ 14ವರ್ಷದ ಸರಿತಾರವರ ಮನಸ್ಥಿತಿಗೆ ಹೊಂದಾಣಿಕೆಯಾಗದೆ ಜೊತೆಗೆ ಗಂಡನ ಹಿಂಸೆ ತಾಳಲಾರದೆ ತಂದೆಯ ಮನೆಗೆ ವಾಪಸ್ ಬರುತ್ತಾರೆ ನಟಿ ಸರಿತಾ. ನಂತರ ವೆಂಕಟ ಸುಬ್ಬಯ್ಯನವರಿಗೆ ವಿಚ್ಛೇದನ ನೀಡುತ್ತಾರೆ. ಆನಂತರದಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಟಾಪ್ ನಟಿಯಾಗಿ ಬೆಳೆದರು.

Advertisement


ಮತ್ತೆ 12 ವರ್ಷಗಳ ನಂತರ ಮಲಯಾಳಂನ ನಟ ಮುಖೇಶ್ ಅವರನ್ನು ಪ್ರೀತಿಸಿ ಮದುವೆಯಾದರು. ಕೆಲವು ವರ್ಷಗಳು ಅನ್ಯೋನ್ಯವಾಗಿದ್ದ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಕೆಲವು ವರ್ಷಗಳ ನಂತರ ಮುಖೇಶ್ ರವರು ಸರಿತಾರವರಿಗೆ ಹಿಂಸೆ ಮಾಡಲು ಶುರುಮಾಡಿದರು. ಕುಡಿದು ಬಂದು ಗಲಾಟೆ ಮಾಡಿ ಹೊಡೆಯುತ್ತಿದ್ದರು. ಆ ಹಿಂಸೆಯನ್ನು ತಾಳಲಾರದೆ ನಟಿ ಸರಿತಾರವರು ಮುಖೇಶ್ ಅವರಿಗೆ ವಿಚ್ಛೇದನ ನೀಡಿ ತನ್ನ ಇಬ್ಬರು ಮಕ್ಕಳ ಜೊತೆ ದುಬೈನಲ್ಲಿ ನೆಲೆಸಿದ್ದಾರೆ. ಸರಿತಾ ಅವರ ಮಗ ಶ್ರವಣ್ ಕೂಡ ಒಬ್ಬ ನಟ. ಇವರು ಮಲೆಯಾಳಂನ ‘ಕಲ್ಯಾಣಂ’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇನ್ನು ಇವರ ತಂದೆ ಮುಖೇಶ್ ಅವರು ಕೂಡ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

Advertisement

– ಸುಷ್ಮಿತಾ

Advertisement
Share this on...