ಅಣ್ಣನ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ…ತೊಟ್ಟಿಲ ಬೆಲೆ ಎಷ್ಟು ಗೊತ್ತಾ…?

in ಮನರಂಜನೆ/ಸಿನಿಮಾ 600 views

ಸದ್ಯಕ್ಕೆ ರಾಜ್ಯಾದ್ಯಂತ ಮೇಘನಾ ರಾಜ್ ಪ್ರಸವದ ವಿಚಾರವೇ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಮೇಘನಾ ರಾಜ್​ ಹಾಗೂ ಚಿರಂಜೀವಿ ಸರ್ಜಾ ಕುಟುಂಬ ಶಾಸ್ತ್ರೋಕ್ತವಾಗಿ ಮೇಘನಾ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿತ್ತು. ಮೇಘನಾ ಹಾಗೂ ಚಿರು ಸ್ನೇಹಿತರು, ಆಪ್ತರು ಮೇಘನಾ ಅವರಿಗೆ ಹರಸಿದ್ದರು. ಇನ್ನು ಅಕ್ಟೋಬರ್ 17 ರಂದು ಚಿರಂಜೀವಿ ಸರ್ಜಾ ಸಮಾಧಿ ಬಳಿ ತೆರಳಿದ ಮೇಘನಾ ರಾಜ್ ಪತಿಯ ಸಮಾಧಿಗೆ ಪೂಜೆ ಸಲ್ಲಿಸಿ ಬಂದಿದ್ದರು. ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದೇ ಮೇಘನಾ ರಾಜ್​​​ಗೆ ಡೆಲಿವರಿ ಆಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೆಲ್ಲಾ ಊಹಾಪೋಹ ಎಂದು ಮೇಘನಾ ಕುಟುಂಬದವರು ಸ್ಪಷ್ಟನೆ ನೀಡಿದ್ದರು. ಮೇಘನಾ ರಾಜ್ ಕೂಡಾ ಜನರನ್ನು ಉದ್ದೇಶಿಸಿ ದಯವಿಟ್ಟು ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದರು. ಆದರೆ ಇಂದು ಬೆಳಗ್ಗೆ ಮೇಘನಾ ರಾಜ್​ ಆಸ್ಪತ್ರೆಗೆ ದಾಖಲಾಗಿದ್ದು ಇಂದೋ ನಾಳೆಯೋ ಡೆಲಿವರಿ ಆಗಬಹುದು ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ ಅಕ್ಷ ಆಸ್ಪತ್ರೆಯಲ್ಲಿ ಮೇಘನಾ ಅವರನ್ನು ಅಡ್ಮಿಟ್ ಮಾಡಲಾಗಿದೆ.

Advertisement

Advertisement

ಮೇಘನಾ ಜೊತೆ ಧ್ರುವ ಸರ್ಜಾ ಪತ್ನಿ ಪ್ರೇರಣ ಹಾಗೂ ಚಿರಂಜೀವಿ ಸರ್ಜಾ ತಾಯಿ ಅಮ್ಮಣ್ಣಿ ಉಳಿದುಕೊಂಡಿದ್ದಾರೆ. ಮೇಘನಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮೇಘನಾ ಆಪ್ತರು, ಸ್ನೇಹಿತರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಮೇಘನಾ -ಚಿರುವಿಗೆ ಜನಿಸಲಿರುವ ಮಗುವನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಒಂದೆಡೆ ಮೇಘನಾಗೆ ಅವಳಿ ಮಕ್ಕಳಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಿರು ಹುಟ್ಟುಹಬ್ಬದಂದು ಕೂಡಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನೋಡೋಣ ಅವಳಿ ಮಕ್ಕಳು ಆದರೂ ಆಗಬಹುದು ಎಂದು ಮೇಘನಾ ಉತ್ತರಿಸಿದ್ದರು.

Advertisement

ಈ ನಡುವೆ ಮೇಘನಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಧ್ರುವ ಸರ್ಜಾ ಅಣ್ಣನ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ. ಜೊತೆಗೆ ಚಿನ್ನದ ಬಟ್ಟಲು ಕೂಡಾ ಖರೀದಿಸಿದ್ದಾರಂತೆ. 10 ಲಕ್ಷ ರೂಪಾಯಿ ನೀಡಿ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ ಎನ್ನಲಾಗಿದೆ. ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲಿನ ಮೂಲಕ ಜ್ಯೂನಿಯರ್ ಚಿರುವಿಗೆ ಸ್ವಾಗತ ಕೋರಲು ಧ್ರುವ ಸರ್ಜಾ ಮುಂದಾಗಿದ್ದಾರೆ. ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲ ಜೊತೆ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧ್ರುವ ಸರ್ಜಾ ತನ್ನ ಅಣ್ಣನನ್ನು ಎಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನಬಹುದು.

Advertisement

ಚಿರಂಜೀವಿ ಸರ್ಜಾ ನಿಧನರಾದಾಗಿನಿಂದ ಚಿರು ಕುಟುಂಬ, ಸ್ನೇಹಿತರು ಮೇಘನಾ ಅವರ ಜೊತೆ ಇದ್ದು ಧೈರ್ಯ ತುಂಬುತ್ತಿದ್ದಾರೆ. ಮೇಘನಾ ಕೂಡಾ ಇವರೆಲ್ಲರ ಪ್ರೀತಿಯಿಂದ ಚಿರು ಅಗಲಿಕೆ ನೋವಿನಿಂದ ಹೊರ ಬರುತ್ತಿದ್ದಾರೆ. ಮೇಘನಾ ಮಕ್ಕಳೊಂದಿಗೆ ಸಂತೋಷವಾಗಿ ಇರಲಿ ಎಂದು ಹಾರೈಸೋಣ.

Advertisement
Share this on...