ಹಿರಿಯ ನಟಿ ಬಿ.ಸರೋಜಾ ದೇವಿ ಯಾರ ಮಾತಿಗೆ ಚಿತ್ರರಂಗದಿಂದ ದೂರ ಸರಿದಿದ್ದರು ಗೊತ್ತಾ!

in ಮನರಂಜನೆ/ಸಿನಿಮಾ 222 views

ಕನ್ನಡ ಸಿನಿಮಾ ರಂಗದಲ್ಲಿ ಅಭಿನಯ ಸರಸ್ವತಿ ಎಂದೇ ಬಿರುದು ಪಡೆದ ಕನ್ನಡದ ಖ್ಯಾತ ನಟಿ ಬಿ. ಸರೋಜಾ ದೇವಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವರ ಎಂಬಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ತಂದೆ ಬೈರಪ್ಪ ಹಾಗೂ ಗೃಹಿಣಿ ತಾಯಿ ರುದ್ರಮ್ಮ ದಂಪತಿಯ ನಾಲ್ಕನೇ ಮಗಳಾಗಿ 1938 ರಲ್ಲಿ ಬಿ. ಸರೋಜಾ ದೇವಿ ಜನಿಸಿದರು. ಬಾಲ್ಯದಲ್ಲಿ ತನ್ನ ತಾಯಿಯ ಒತ್ತಾಯದ ಮೇರೆಗೆ ಲಲಿತ ಕಲೆಯನ್ನು ಕಲಿತರು. ಇವರ ಪ್ರತಿಭೆಯನ್ನು ಗುರುತಿಸಿದ ಕನ್ನಡದ ಖ್ಯಾತ ನಟರಾಗಿದ್ದ ಹೊನ್ನಪ್ಪ ಭಾಗವತ್ ರವರು ಬಿ. ಸರೋಜಾ ದೇವಿಯವರಿಗೆ ‘ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು. ತಮ್ಮ 17 ನೇ ವಯಸ್ಸಿನಲ್ಲಿಯೇ ಅಂದರೆ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು ನಟಿ ಬಿ ಸರೋಜಾದೇವಿ. ಕನ್ನಡದಲ್ಲಿ ಡಾ. ರಾಜ್ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ಸೇರಿದಂತೆ ಇನ್ನೂ ಹಲವಾರು ಮೇರು ನಟರ ಜೊತೆ ಬಿ. ಸರೋಜಾದೇವಿ ನಾಯಕಿಯಾಗಿ ನಟಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಇವರ ಪಾತ್ರ ಇಂದಿಗೂ ಅವಿಸ್ಮರಣೀಯವಾದ ಪಾತ್ರವಾಗಿ ಜನರ ಮನದಲ್ಲಿ ನೆಲೆಸಿದೆ.

Advertisement

Advertisement

ಕನ್ನಡ, ತಮಿಳು, ತೆಲುಗು, ಹಿಂದಿ ಈ ಎಲ್ಲಾ ಭಾಷೆಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಬಿ. ಸರೋಜಾದೇವಿಯವರು ನಟಿಸಿದ್ದಾರೆ. ಕನ್ನಡದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಚಿಂತಾಮಣಿ, ಸ್ಕೂಲ್ ಮಾಸ್ಟರ್, ಜಗಜ್ಯೋತಿ ಬಸವೇಶ್ವರ ಇನ್ನು ಮುಂತಾದ ಚಿತ್ರಗಳು ಇವರಿಗೆ ಆ ಕಾಲದಲ್ಲಿ ತುಂಬಾ ಹೆಸರು ತಂದುಕೊಟ್ಟವು.1967 ರಲ್ಲಿ ಬಿ. ಸರೋಜಾ ದೇವಿಯವರಿಗೆ ಅವರ ತಾಯಿ ಇಂಜಿನಿಯರ್ ಆಗಿದ್ದ ಶ್ರೀಹರ್ಷ ಎಂಬುವವರೊಂದಿಗೆ ಮದುವೆ ಮಾಡುತ್ತಾರೆ. ಮದುವೆಯ ನಂತರ ಬಿ. ಸರೋಜಾದೇವಿ ಅವರಿಗೆ ಬಂದ ಆರ್ಥಿಕ ಮತ್ತು ತೆರಿಗೆ ಸಮಸ್ಯೆಗೆ ಅವರ ಪತಿ ಬೆಂಬಲವಾಗಿ ನಿಲ್ಲುತ್ತಾರೆ. ನಂತರ ತಮ್ಮ ತಾಯಿಯ ಮಾತಿನ ಮೇರೆಗೆ ಬಿ. ಸರೋಜಾ ದೇವಿಯವರು ಚಿತ್ರರಂಗದಿಂದ ದೂರ ಸರಿಯುತ್ತಾರೆ. ಮತ್ತೆ 1970 ರಲ್ಲಿ ತಮ್ಮ ಪತಿಯ ಪ್ರೋತ್ಸಾಹದಿಂದ ಚಿತ್ರರಂಗಕ್ಕೆ ಮರಳುತ್ತಾರೆ.

Advertisement

 

Advertisement

 

ಬಿ. ಸರೋಜಾ ದೇವಿಯವರಿಗೆ ಮೂವರು ಮಕ್ಕಳು. ಭುವನೇಶ್ವರಿ, ಇಂದಿರಾ ಹಾಗೂ ಮಗ ಗೌತಮ್ ರಾಮಚಂದ್ರನ್ ಎಂದು. ಸುಖ ಸಂತೋಷದಿಂದ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಬದುಕುತ್ತಿದ್ದ ಬಿ. ಸರೋಜಾ ದೇವಿ ಅವರಿಗೆ ಇದ್ದಕ್ಕಿದ್ದಂತೆ ತಮ್ಮ ಜೀವನದಲ್ಲಿ ಬರಸಿಡಿಲು ಬಡಿದಂತಾಗುತ್ತದೆ.ಬಿ. ಸರೋಜಾ ದೇವಿಯವರು ತುಂಬಾ ಪ್ರೀತಿಸುತ್ತಿದ್ದ ಅವರ ಪತಿ ನಿಧಾನರಾಗುತ್ತಾರೆ. ಹಲವಾರು ವರ್ಷ ಬಿ. ಸರೋಜಾ ದೇವಿ ಅವರು ತಮ್ಮ ಪತಿಯನ್ನು ಕಳೆದುಕೊಂಡ ನೋವಿನಿಂದ ಹೊರಬರಲಾಗದೆ ದುಃಖಿಸುತ್ತ ಕಾಲಕಳೆಯುತ್ತಾರೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ನಿಧಾನವಾಗಿ ಬಿ. ಸರೋಜಾ ದೇವಿಯವರು ದುಃಖ ಮರೆಯುತ್ತಾರೆ ಪ್ರಸ್ತುತ 80 ರ ಹರೆಯದ ಬಿ. ಸರೋಜಾ ದೇವಿಯವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತಮ್ಮ ಮಕ್ಕಳ ಜೊತೆ ಈಗ ನೆಲೆಸಿದ್ದಾರೆ.

– ಸುಷ್ಮಿತಾ

Advertisement
Share this on...