ಸ.ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾದ ನಿರ್ದೇಶಕರು ಆ ಶಾಲೆಯನ್ನು ಏನು ಮಾಡುತ್ತಿದ್ದಾರೆ ಗೊತ್ತಾ ?

in ಕನ್ನಡ ಮಾಹಿತಿ/ಸಿನಿಮಾ 99 views

ಮಂಗಳೂರಿನಿಂದ 500 ಕಿ.ಮೀ. ದೂರದಲ್ಲಿರುವ ಕಾಸರಗೋಡನ್ನು ಮರೆಯಲು ಸಾಧ್ಯವೇ.ಮೊದಲು ನಮ್ಮ ಕರ್ನಾಟಕ ರಾಜ್ಯಕ್ಕೆ ಸೇರಿಕೊಂಡಿದ್ದ ಈ ಕಾಸರಗೋಡು ಇದೀಗ ಕೇರಳದವರ ಸ್ವತ್ತಾಗಿ ಬಿಟ್ಟಿದೆ. ಒಂದು ಬಾರಿ ಕನ್ನಡಿಗರು ಕಾಸರಗೋಡನ್ನು ನೋಡಿಕೊಂಡು ಬನ್ನಿ, ನಮ್ಮ ಹೊಟ್ಟೆಯಲ್ಲಿ ಬೆಂಕಿ ಧಗಧಗನೆ ಉರಿಯುತ್ತದೆ ಇಂತಹ ಒಂದು ಜಾಗವನ್ನು ಕಳೆದುಕೊಂಡು ಬಿಟ್ಟೆವಲ್ಲ ಎಂಬುವ ನೋವು ನೀಗುವುದೇ ಇಲ್ಲ . ಯಾಕೆಂದರೆ ಅಷ್ಟು ಸುಂದರವಾದ ತಾಣಗಳು ಪರಿಸರಗಳು, ಸಮುದ್ರದಿಂದ ಕಾಸರಗೋಡು ಕಂಗೊಳಿಸುತ್ತಿದೆ . ಅದೆಷ್ಟೋ ಜನರು ಈಗಲೂ ಕೂಡ ಆ ನೆಲದಲ್ಲಿ ಕನ್ನಡವನ್ನು ಮಾತನಾಡುತ್ತಾರೆ ಅಲ್ಲದೇ ಕೋಟೆಗಳ ಮೇಲೆ ರಾಜರು ಕನ್ನಡದಲ್ಲಿ ಕೆತ್ತಿರುವ ಅಕ್ಷರಗಳು ಹಾಗೆಯೇ ಉಳಿದಿದೆ. ಕಾಸರಗೋಡನ್ನು ನಮ್ಮ ರಾಜ್ಯದಿಂದ ಬಿಟ್ಟುಕೊಟ್ಟು , ನಮ್ಮ ಕನ್ನಡ ತಾಯಿಯ ಒಂದು ಕೂಸನ್ನು ಕಳೆದುಕೊಂಡೆವು ಎಂದೇ ಹೇಳಬಹುದು.2018 ರಲ್ಲಿ ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದಂತಹ ಸಿನಿಮಾ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆ ಕಾಸರಗೋಡು, ಹೆಚ್ಚಿನ ಸಂಖ್ಯೆಯ ಕನ್ನಡ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವ ಕೇರಳದ ಗಡಿ ಜಿಲ್ಲೆ ಭಾಷೆಯ ಪ್ರಾಬಲ್ಯಕ್ಕೆ ಕೇಂದ್ರವಾಗಿದೆ,

Advertisement

Advertisement

ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಎಂಬ ಕನ್ನಡ ಶಾಲೆ ಇರುತ್ತದೆ. ಈ ಶಾಲೆಯನ್ನು ಕೇರಳದವರು ಮುಚ್ಚಿಸಲು ಮುಂದಾಗಿ, ಮಲೆಯಾಳಂ ಶಾಲೆ ತೆಗೆಯಬೇಕು ಮತ್ತು ಮಲೆಯಾಳಂ ಕಡ್ಡಾಯ ಎಂಬುದನ್ನು ಜಾರಿ ಮಾಡಲು ಮುಂದಾದಾಗ ಕನ್ನಡದವರು ಆ ಶಾಲೆಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುವುದನ್ನು ಹಾಸ್ಯದ ಜೊತೆಗೆ ವಿಶ್ರಮಿಸಿ ಈ ಕಥೆಯನ್ನು ಹೆಣೆದಿದ್ದರು.ರಿಷಬ್ ಶೆಟ್ಟಿಯವರ ಈ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು. ಅಲ್ಲದೇ ಈ ಚಲನಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಹಿಟ್ ಎಂದು ಘೋಷಿಸಲಾಯಿತು. ಮತ್ತು 66 ನೇ ರಾಷ್ಟ್ರೀಯ ಪ್ರಶಸ್ತಿ , 2019 ರಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ರೀತಿಯಾದಂತಹ ಸಿನಿಮಾವನ್ನು ಕನ್ನಡಿಗರು ಎಂದೂ ಮರೆಯಲು ಸಾಧ್ಯವಿಲ್ಲ.

Advertisement

ಚಿತ್ರ ಸೂಪರ್ ಹಿಟ್ ಆದ ಮೇಲೆ ಸುಮ್ಮನೆ ಕೂರದ ರಿಷಬ್, ಇದೀಗ ಅದೇ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.ಚಿತ್ರೀಕರಣ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಶಾಲೆ ಮುಚ್ಚುವ ಸ್ಥಿತಿಯಲ್ಲಿರೋ ವಿಚಾರ ಗೊತ್ತಾಗುತ್ತಿದ್ದಂತೆ ರಿಷಬ್ ದತ್ತು ಪಡೆದು, ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ.

Advertisement

 

 

 

ಚಿತ್ರೀಕರಣದ ವೇಳೆಯಲ್ಲಿ 42 ಮಕ್ಕಳು ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರಂತೆ. ಆದರೆ ನಂತರದ ದಿನಗಳಲ್ಲಿ ಶಾಲೆಯಲ್ಲಿ ಉಳಿದಿದ್ದು ಕೇವಲ 17 ಮಂದಿ ಮಾತ್ರ. ಇನ್ನೇನು ಶಾಲೆ‌ ಮುಚ್ಚಿಯೇ ಬಿಡುತ್ತಾರೆ, ಅನ್ನುವಷ್ಟರಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಶಾಲೆಯನ್ನ ದತ್ತು ಪಡೆದಿದ್ದಾರೆ.ಇನ್ನು ಶಾಲೆಗೆ ಬಣ್ಣ ಬಳಿಸಿ‌ ಸಂಪೂರ್ಣವಾಗಿ ನವೀಕರಿಸಿದ್ದಾರೆ. ಇದರ ಜೊತೆಗೆ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ , ಉತ್ತಮ ಶಿಕ್ಷಕರ ವ್ಯವಸ್ಥೆ ಒದಗಿಸಿದ್ದಾರೆ. ಇವರ ಈ ಕಾರ್ಯಕ್ಕೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Advertisement
Share this on...