ಅಮೇರಿಕಾದಲ್ಲಿ ಇದ್ದಾಳೆ ಸತಿ ಸಾವಿತ್ರಿ : ಇವರ ಜೀವನ ನೋಡಿದರೆ ನಿಮ್ಮ ಕರುಳು ಚುರುಕ್ ಎಂಬುವುದಂತು ಸತ್ಯ !

in Uncategorized/ಕನ್ನಡ ಮಾಹಿತಿ/ಮನರಂಜನೆ 103 views

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಗಂಡ ಹೆಂಡತಿ ಜೀವನದಲ್ಲಿ ಒಬ್ಬರಿಗೊಬ್ಬರು ಎಂಬಂತೆ ಎಷ್ಟು ಅನ್ಯೋನ್ಯವಾಗಿ ಬದುಕಿದರು ಸಾಕಾಗುವುದಿಲ್ಲ. ವಿವಾಹದಲ್ಲಿ ಸಪ್ತಪದಿ ತುಳಿಯುವ ಮುನ್ನ ನನಗೆ ನೀನು ನಿನಗೆ ನಾನು ಎಂಬ ಮಂತ್ರವನ್ನು ಸಾರಿ ಸಾರಿ ಹೇಳಿರುತ್ತಾರೆ. ಆದರೆ ಅದೆಷ್ಟೊ ಬಾರಿ ಇದನ್ನು ನಿರ್ವಹಿಸಲು ಸಾಧ್ಯವೇ ಆಗಿರುವುದಿಲ್ಲ. ಸಣ್ಣ ಸಣ್ಣ ಬಿನ್ನಾಭಿಪ್ರಾಯಗಳು, ವಾದ ವಿವಾದಗಳಿಂದ ಸಂಸಾರದಲ್ಲಿ ಬಿರುಕು ಮೂಡಿಸಿಕಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ವಿವಾಹವನ್ನೆ ಮುರಿದು ಕೊಳ್ಳುತ್ತಾರೆ. ಒಬ್ಬ ಹೆಂಡತಿ ಹೋದರೆ ಏನೂ, ಇನ್ನೊಬ್ಬಳು ಸಿಗುತ್ತಾಳೆ ಎಂದು ಯೋಚಿಸುವ ಗಂಡಸರೆ ಜಾಸ್ತಿ. ವಿವಾಹವಾದ ಮೇಲೆ ಹೆಣ್ಣು ತನ್ನ ಎತ್ತಾಡಿಸಿದ ತಂದೆ, ಲಾಲನೆ ಪೋಷಣೆ ಮಾಡಿದ ತಾಯಿ ಮತ್ತು ಹುಟ್ಟಿ ಬೆಳೆದ ಮನೆಯನ್ನ ಬಿಟ್ಟು ಗಂಡನ ಮನೆಗೆ ಬಂದು ನೆಲೆಸುತ್ತಾಳೆ. ನಂತರ ಅವಳಿಗೆ ಎಲ್ಲಾವೂ ಗಂಡನೇ ಆಗಿರುತ್ತಾನೆ. ಒಬ್ಬ ಪತ್ನಿ ಗಂಡನಿಗಾಗಿ ತನ್ನ ಪ್ರಾಣವನ್ನು ಬಿಡಲು ಕೂಡ ಹೆದರುವುದಿಲ್ಲ ಅನ್ನುವುದು ಅದೆಷ್ಟೋ ಭಾರಿ ಸಾಭೀತು ಕೂಡ ಆಗಿದೆ ಅಲ್ಲವೇ?

Advertisement

 

Advertisement

Advertisement

ಪುರಾಣದಲ್ಲಿ ಧರ್ಮರಾಯನ ಜೊತೆ ಹೋರಾಟವನ್ನ ಮಾಡಿ ತನ್ನ ಗಂಡನ ಪ್ರಾಣವನ್ನ ಉಳಿಸಿಕೊಂಡ ಸತಿ ಸಾವಿತ್ರಿಯ ಕಥೆಯನ್ನು ಪ್ರತಿಯೊಬ್ಬರು ತಿಳಿದಿರುತ್ತೀರಿ. ಇದೀಗ ಅಮೇರಿಕಾದಲ್ಲಿ ಇದೇ ರೀತಿಯಾಗಿ ಪ್ರಾಣವನ್ನ ಕೈಯಲ್ಲಿ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದ ಗಂಡನನ್ನು ಮಹಿಳೆ ಕಾಪಾಡಿಕೊಂಡಿದ್ದಾಳೆ. ಆ ಮಹಿಳೆ ಹೇಗೆ ತನ್ನ ಗಂಡನನ್ನು ಕಾಪಾಡಿಕೊಂಡಿದ್ದಾಳೆ ಎಂದು ತಿಳಿದರೆ ನೀವು ಬೆರಗಾಗಿ ಬಿಡುತ್ತೀರಾ. ಅಮೇರಿಕಾ ದೇಶಕ್ಕೆ ಸೇರಿದ ಮ್ಯಾಕ್ ಮತ್ತು ಡೇನಿಯೇಲಾ ಐದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಇವರ ಪ್ರೇಮವನ್ನು ವಿಧಿಯಿಂದಲೂ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನಿಸುತ್ತದೆ. ವಿವಾಹವಾದ ಕೇವಲ ಆರು ತಿಂಗಳಲ್ಲೇ’ ಪತಿ ಮ್ಯಾಕ್ ಗೆ ಅಪಘಾತವಾದ ಕಾರಣ ಆತ ಕೋಮಾಗೆ ಹೋಗುತ್ತಾನೆ ಮತ್ತು ಆತನ ಬ್ರೈನ್ ಡೆಡ್ ಆಗಿಬಿಡುತ್ತದೆ.

Advertisement

 

ವೈದ್ಯರು ನಿನ್ನ ಪತಿ ಬದುಕುವುದು ಅಸಾಧ್ಯ ಹಾಗೇನಾದರು ಒಂದುವೇಳೆ ಆತ ಬದುಕಿ ಬಿಟ್ಟರೆ, ಜೀವಂತ ಶವವಾಗಿ ಹಾಸಿಗೆ ಮೇಲೆ ಇರುತ್ತಾನೆ. ಆದ ಕಾರಣ ದಿನ ಸಾಯುವದಿಕ್ಕಿಂತ ಆತನಿಗೆ ಕೊಡಲಾಗಿದ್ದ ಆಕ್ಸಿಜೆನ್ ಪೈಪ್ ಅನ್ನು ಕಿತ್ತು ಹಾಕಿ ಆತನಿಗೆ ಮುಕ್ತಿ ಕೊಡು ಎಂದು ವೈದ್ಯರು ಸಲಹೆಯನ್ನ ನೀಡುತ್ತಾರೆ. ಆದರೆ ಇದನ್ನು ಒಪ್ಪದ ಡೇನಿಯೇಲಾ ಬೇರೆಯ ವಿಧಾನವನ್ನೇ ಆಯ್ಕೆ ಹುಡುಕಿಕೊಳ್ಳುತ್ತಾಳೆ. ಗಂಡನಿಗೆ ಆಕ್ಸಿಜೆನ್ ಮತ್ತು ಆಹಾರವನ್ನ ಕೊಡುತ್ತಿದ್ದ ಪೈಪ್ ಜೊತೆಗೆ ಗಂಡನನ್ನ ಮನೆಗೆ ಕರೆದುಕೊಂಡು ಹೋಗಿ ಹಗಲು ರಾತ್ರಿ ಅನ್ನದೆ ಆರು ತಿಂಗಳು ಗಂಡನನ್ನ ಮಗುವಿನಂತೆ ನೋಡಿಕೊಳ್ಳುತ್ತಾಳೆ.

 

ಕೊನೆಗೆ ಆಕೆಯ ಪರಿಶ್ರಮಕ್ಕೆ ಬೆಲೆ ಸಿಕ್ಕಿಯೇ ಬಿಡುತ್ತದೆ. ಒಂದು ದಿನ ಎಲ್ಲರೂ ಆಶ್ಚರ್ಯ ಪಡುವಂತೆ ಮ್ಯಾಕ್ ಎದ್ದು ಅಳುವುದಕ್ಕೆ ಆರಂಭ ಮಾಡುತ್ತಾನೆ. ತನ್ನ ಗಂಡ ಎದ್ದಿದ್ದನ್ನು ನೋಡಿ ಡೇನಿಯೇಲಾಗೆ ಎಲ್ಲಿಲ್ಲದ ಸಂತೋಷವಾಗುತ್ತದೆ, ಆದರೆ ಮ್ಯಾಕ್ ಗೆ ಬ್ರೈನ್ ಡೆಡ್ ಆದಕಾರಣ ಆತನಿಗೆ ಯಾವುದು ಜ್ಞಾಪಕ ಇರುವುದಿಲ್ಲ ಮತ್ತು ವಿವಾಹವಾಗಿರುವುದು ನೆನಪಿರುವುದಿಲ್ಲ, ಆದರೆ ಇದರಿಂದ ಬೇಸರಪಡದ ಡೇನಿಯೇಲಾ ಪಟ್ಟುಬಿಡದೆ ಗಂಡನನ್ನ ಚೆನ್ನಾಗಿ ನೋಡಿಕೊಂಡು ಆತನಿಗೆ ಎಲ್ಲಾ ನೆನಪುಗಳನ್ನ ಮರುಕಳಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಾಳೆ.

 

ಸತತವಾಗಿ ಯೋಗ ಮತ್ತು ಫಿಸಿಯೊ ತೆರಪಿ ಮಾಡಿಸಿದಳು ಮತ್ತು ಹೀಗೆ ಮೂರೂ ತಿಂಗಳುಗಳ ಕಾಲ ತುಂಬಾ ಕಷಪಟ್ಟ ನಂತರ ಮ್ಯಾಕ್ ಗೆ ಮತ್ತೆ ಜ್ಞಾಪಕ ಶಕ್ತಿ ನಿಧಾನವಾಗಿ ವಾಪಾಸ್ ಬರುತ್ತದೆ, ಈಗ ಮ್ಯಾಕ್ ಮತ್ತು ಡೇನಿಯೇಲಾ ಪ್ರೀತಿಯನ್ನ ಹಂಚಿಕೊಂಡು ಸಂತೋಷವಾಗಿ ಜೀವನವನ್ನ ಮಾಡುತ್ತಿದ್ದಾರೆ.

Advertisement
Share this on...