ನಿನಾಸಂ ಸತೀಶ್ ಹೇಳಿದ ಕಥೆ ನಿಜವಾದ ಕಥೆಯಾ ಅಥವಾ ಕಟ್ಟು ಕಥೆಯಾ ?

in ಮನರಂಜನೆ/ಸಿನಿಮಾ 73 views

ಚಿತ್ರರಂಗದಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಬೇಕು, ದೊಡ್ಡ ನಟರಾಗಬೇಕು ಎಂದು ಕನಸೊತ್ತಿ ಬರುವ ಹಲವು ಮಂದಿಯಿದ್ದಾರೆ. ಆದರೆ ಚಲನಚಿತ್ರರಂಗದಲ್ಲಿ ಸ್ಥಾಪನೆ ಕೊಳ್ಳುವವರು ಬೆರಳೆಣಿಕೆಯಷ್ಟು.. ಹೀಗೆ ತಾನು ಒಬ್ಬ ನಟನಾಗಬೇಕು ಎಂದು ಕನಸೊತ್ತು ಬಂದ ನೀನಾಸಂ ಸತೀಶ್ ಅವರು ಜೀವನದಲ್ಲಿ ಅನೇಕ ಏಳು ಬೀಳು, ಕಷ್ಟಗಳನ್ನು ಅನುಭವಿಸಿ ಇದೀಗ ಅಭಿನಯ ಚತುರರಾಗಿ ಎಲ್ಲರ ಮುಂದೆ ನಿಂತಿದ್ದಾರೆ ..  ನಿಷ್ಠೆ ಇರುವವರಿಗೆ ಕಲಾ ದೇವಿ ಕೈ ಬಿಡುವುದಿಲ್ಲ  ಎಂಬುದಕ್ಕೆ ಮುಖ್ಯ ಸಾಕ್ಷಿ ಈ  ಅಭಿನಯ ಚತುರ .ಮಂಡ್ಯ ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದ ನೀನಾಸಂ ಸತೀಶ್ ರವರು   ಬಾಲ್ಯದಿಂದಲೂ ಸಿನಿಮಾ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು..ನಂತರ ನಿನಾಸಂ ಸಂಸ್ಥೆಯಲ್ಲಿ ನಾಟಕಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಎರಡು  ವರ್ಷಗಳ ಡಿಪ್ಲೊಮಾ ಆಕ್ಟಿಂಗ್ ಕೋರ್ಸ್ ಪೂರ್ಣಗೊಳಿಸುತ್ತಾರೆ. ನಂತರ ಕರ್ನಾಟಕಾದ್ಯಂತ ನಾಟಕಗಳಲ್ಲಿ ಪ್ರದರ್ಶನ ನೀಡಿದ ಅವರು ಸಹಸ್ರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ತಮ್ಮ ರಂಗ ಜೀವನದ ನಂತರ ದೂರದರ್ಶನದಲ್ಲಿ ಸುಮಾರು ಒಂದು ವರ್ಷಗಳ ಕಾಲ ಕಾಣಿಸಿಕೊಂಡರು, ತದ ನಂತರ 2008ರಲ್ಲಿ ಮಾದೇಶ ಎಂಬ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದರು.

Advertisement

Advertisement

ಇದಾದ ಬಳಿಕ ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರ ಜೊತೆ ಮನಸಾರೆ,  ಪಂಚರಂಗಿ,  ಡ್ರಾಮಾ , ಚಿತ್ರಗಳಲ್ಲಿ ಅಭಿನಯಿಸಿ ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಾರೆ. ಹೀಗೆ ಹಾಸ್ಯ ನಟನಾಗಿ ಸುಮಾರು ಚಿತ್ರಗಳಲ್ಲಿ ಅಭಿನಯಿಸಿ ತನ್ನದೇ ಆದ ಹೆಸರನ್ನು  ಸಂಪಾಧಿಸಿಕೊಂಡಿದ್ದ ಸತೀಶ್ ಅವರು, 2013 ರಲ್ಲಿ ಪವನ್ ಕುಮಾರ್ ಅವರ ನಿರ್ದೇಶನದ ಲೂಸಿಯಾ ಎಂಬ ಪ್ರಯೋಗಾತ್ಮಕ ಚಿತ್ರದಲ್ಲಿ ಪರಿಪೂರ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ಇದಾದ ಬಳಿಕ ಸಾಲು ಸಿನಿಮಾಗಳನ್ನು ಮಾಡುತ್ತಾ ಅಭಿನಯ ಚತುರನಾಗಿ ನಿಂತಿರುವ ಸತೀಶ್ ಅವರ ಜೀವನ ಅನ್ಯರಿಗೆ ಮಾದರಿ ಎಂದರೆ ತಪ್ಪಾಗಲಾರದು.. ಸತೀಶ್ ನೀನಾಸಂ ಒಬ್ಬರು ಕ್ರಿಯಾಶೀಲ ವ್ಯಕ್ತಿ. ಇದೀಗ ಅವರು ವಿಶೇಷ ಪ್ರಯತ್ನಕ್ಕೆ  ಕೈ  ಹಾಕಿದ್ದು, ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕತೆ ಹೇಳುವ ಪ್ರಯತ್ನ  ಪ್ರಾರಂಭಿಸಿದ್ದಾರೆ. ತಮ್ಮ ಕಥಾ ಸರಣಿಯ  ಮೊದಲ ಕಥೆಯಾಗಿ ‘ಸಿಹಿ ತಿಂಡಿ’ ಎಂಬ ಕತೆಯನ್ನು ಹೇಳಿ  ಅಪ್‌ಲೋಡ್ ಮಾಡಿದ್ದಾರೆ. ಸಿಹಿ ತಿಂಡಿ ಕಥೆ ಸರಳವಾಗಿ ಸುಂದರವಾಗಿಯೂ ಇದೆ.

Advertisement

Advertisement

‘ಅಜ್ಜಿಯ ಸಿಹಿತಿಂಡಿ ಬಹಳ ಬೇಗ ಜನಪ್ರಿಯತೆ  ಗಳಿಸುತ್ತಿದೆ . ಅಜ್ಜಿ ಮಾಡಿದ ಸಿಹಿತಿಂಡಿ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿಬಿಡುತ್ತದೆ. ನಂತರ ಅಜ್ಜಿ ವಿವಿಧ ಸಿಹಿತಿಂಡಿಗಳನ್ನು ಮಾಡುತ್ತಾಳೆ. ಅವೂ ಸೇಲ್ ಆಗಿಬಿಡುತ್ತದೆ. ಅಜ್ಜಿಯ ಸಿಹಿತಿಂಡಿ ಬಹಳ ಬೇಗ ಜನಪ್ರಿಯತೆ ಗಳಿಸುತ್ತದೆ. ಒಬ್ಬ ಗ್ರಾಹಕರಂತೂ ನಿಮ್ಮ ಸಿಹಿತಿಂಡಿ ತಿಂದು ನನಗೆ ಬಾಲ್ಯ ನೆನಪಾಯಿತು ಎನ್ನುತ್ತಾರೆ. ಮೊಮ್ಮಗಳು ಅಜ್ಜಿಯ ಸಿಹಿತಿಂಡಿ ಮಾರಲು ಬಾಕ್ಸ್‌ ಅನ್ನು ತಯಾರಿಸಿ ಅದಕ್ಕೆ ‘ಬಾಲ್ಯದ ನೆನಪು’ ಎಂದು ಹೆಸರಿಡುತ್ತಾರೆ. ಕೆಲವೇ ದಿನಗಳಲ್ಲಿ ಬಾಲ್ಯದ ನೆನಪು ಸಿಹಿ ತಿಂಡಿ ಬ್ರ್ಯಾಂಡ್ ಆಗಿ ಹೋಗುತ್ತದೆ. ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅಜ್ಜಿಯ ಸಾಧನೆಯನ್ನು ಮೆಚ್ಚಿ, ಆಕೆಗೆ ವರ್ಷದ ನವೋದ್ಯಮಿ ಎಂಬ ಬಿರುದು ನೀಡುತ್ತಾರೆ.

ಕೊನೆಗೆ ಕೆಲವು ಯುವಕರು ಅಜ್ಜಿಗೆ ಕೇಳುತ್ತಾರೆ, ‘ನಾವು ಬೇಗನೆ ಸಾಧನೆ ಮಾಡಬೇಕು ಆದರೆ ಏನು ಮಾಡಬೇಕು ಎಂದು ಗೊತ್ತಿಲ್ಲ ಎಂದು,  ಆಗ ಅಜ್ಜಿ ಹೇಳುತ್ತಾಳೆ,  ನನ್ನ ಬದುಕು ಪ್ರಾರಂಭವಾಗಿದ್ದೇ 90 ವಯಸ್ಸಾದ ನಂತರ ಎಂದು.  ಇದು ನೀನಾಸಂ ಸತೀಶ್ ಅವರು ಹೇಳಿದಂತಹ ಸುಂದರ  ಹಾಗೂ ಸರಳವಾದ ಕತೆ. ಇದು ಸತ್ಯಕತೆಯೂ ಹೌದು, ಕತೆಯಲ್ಲಿ ಬರುವ ಅಜ್ಜಿಯ ಹೆಸರು ಹರ್ಬಜನ್ ಕೌರ್ ಈಗ ಆಕೆಗೆ   94 ವರುಷವಾಗಿದೆ. ಒಟ್ಟಾರೆ ಸತೀಶ್ ಅವರು ಮಾಡುತ್ತಿರುವ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Advertisement
Share this on...