ಮಹಿಳೆಯಾದರೂ ಪುರುಷನಂತೆ ಬದುಕುತ್ತಿರುವ ಸಾವಿತ್ರಿ…ವೃದ್ಧೆಯ ಈ ತ್ಯಾಗದ ಹಿಂದಿನ ಕಥೆ ಇದು…!

in ಕನ್ನಡ ಮಾಹಿತಿ/ಮನರಂಜನೆ 399 views

ಈಗಿನ ಕಾಲದಲ್ಲಿ ಮಹಿಳೆಯರು ನಾವು ಪುರುಷರಿಗಿಂತ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ವಿಮಾನದಲ್ಲಿ ಪೈಲೆಟ್ ಆಗಿ, ದೇಶವನ್ನು ಆಳುವ ರಾಜಕೀಯ ನಾಯಕಿಯಾಗಿ, ಅಪರಾಧಿಗಳನ್ನು ಮಟ್ಟ ಹಾಕುವ ಪೊಲೀಸ್ ಅಧಿಕಾರಿಯಾಗಿ ಎಲ್ಲಾ ಕ್ಷೇತ್ರದಲ್ಲೂ ನಾನು ಸೈ ಎಂಬುದನ್ನು ಸಾಬೀತು ಮಾಡಿದ್ದಾಳೆ. ಇನ್ನು ಗಂಡಾಗಿ ಹುಟ್ಟಿದರೂ ಹೆಣ್ಣಿನ ಭಾವನೆಗಳನ್ನು ಹೊಂದಿರುವ ಎಷ್ಟೋ ಹುಡುಗರು ಹೆಣ್ಣಾಗಿ ಬದಲಾಗಿರುವ ಎಷ್ಟೋ ಉದಾಹರಣೆಗಳಿವೆ. ಆದರೆ ಹೆಣ್ಣಾಗಿ ಜನಿಸಿ ಕಾರಣಾಂತರಗಳಿಂದ ಗಂಡಾಗಿ ಬದಲಾಗಿರುವ ವಿಚಾರವನ್ನು ನೀವು ಕೇಳಿದ್ದೀರಾ..?ಇಂತಹ ಮಹಿಳೆಯೊಬ್ಬರು ನೆರೆಯ ಆಂಧ್ರಪ್ರದೇಶದಲ್ಲಿದ್ದಾರೆ. ಇವರು ನೋಡಲು ಪುರುಷನಂತೆ ಇದ್ದಾರೆ. ಇವರು ಧರಿಸುವುದು ಕೂಡಾ ಪುರುಷನಂತೆ ಪಂಚೆ, ಬಿಳಿ ಶರ್ಟ್. ಆದರೆ ಇವರು ಹುಟ್ಟಿದ್ದು ಮಾತ್ರ ಹೆಣ್ಣಾಗಿ. ಅಷ್ಟಕ್ಕೂ ಇವರು ಹೀಗೆ ಗಂಡಾಗಿ ಬದಲಾಗಿದ್ದೇಕೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುವುದು ಸಹಜ. ತನ್ನ ತಂದೆ-ತಾಯಿಗಳಿಗಾಗಿ ಹಾಗೂ ತನ್ನ ಒಡಹುಟ್ಟಿದ ಸಹೋದರಿಯರಿಗಾಗಿ ಹೆಣ್ಣಾಗಿ ಹುಟ್ಟಿದ ಇವರು ಗಂಡಾಗಿ ಬದಲಾಗಿದ್ದಾರೆ.

Advertisement

Advertisement

ಅಂದಹಾಗೆ ಇವರ ಹೆಸರು ಸಾವಿತ್ರಿ. ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ನೀಲಾದ್ರಿಪುರಂ ಎಂಬ ಗ್ರಾಮದಲ್ಲಿ ವಾಸಿಸುತ್ತಿರುವ ಸಾವಿತ್ರಿ ಎಂಬ ಈ ವೃದ್ಧೆಗೆ ಈಗ 70 ವರ್ಷ ವಯಸ್ಸು. ಸಾವಿತ್ರಿ ತಂದೆ ತಾಯಿಗಳಿಗೆ 6 ಮಂದಿ ಹೆಣ್ಣು ಮಕ್ಕಳು. ಕುಟುಂಬದಲ್ಲಿ ಗಂಡು ಮಕ್ಕಳು ಇರದ ಕಾರಣ ಸಾವಿತ್ರಿ ಅವರನ್ನೇ ಅವರ ತಂದೆ ತಾಯಿ ಗಂಡು ಮಗನಂತೆ ಬೆಳೆಸಲು ಆರಂಭಿಸಿದರು. 14ನೇ ವಯಸ್ಸಿಗೆ ಶರ್ಟ್, ನಿಕ್ಕರ್, ಪ್ಯಾಂಟ್​​​​​ ಧರಿಸಲು ಆರಂಭಿಸಿದರು. ಜನರ ಮಾತಿಗೆ ತಲೆ ಕೆಡಿಸಿಕೊಳ್ಳದೆ ಸಾವಿತ್ರಿಯನ್ನು ಗಂಡುಮಗನಂತೆ ಬೆಳೆಸಿದರು. ಸಾವಿತ್ರಿ ಕೂಡಾ ತಂದೆ ತಾಯಿ ಕಷ್ಟವನ್ನು, ಅವರ ಆಸೆಯನ್ನು ನನಸು ಮಾಡಲು ತಂದೆ ತಾಯಿ ಹೇಳಿದಂತೆ ನಡೆಯಲಾರಂಭಿಸಿದರು.

Advertisement

ಯೌವನಕ್ಕೆ ಬಂದಾಗಲೂ ತಮ್ಮ ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಕಷ್ಟ ಪಟ್ಟು ದುಡಿದು ಹಣ ಸಂಪಾದಿಸಿ ಅದರೊಂದಿಗೆ ಸಾಲ ಮಾಡಿ ತಮ್ಮ ಸಹೋದರಿಯರ ಮದುವೆ ಮಾಡಿದ್ದಾರೆ ಸಾವಿತ್ರಿ. ಆದರೆ ಸಾವಿತ್ರಿ ತಮ್ಮ ಮದುವೆ ಬಗ್ಗೆ ಮಾತ್ರ ಎಂದಿಗೂ ಯೋಚನೆ ಮಾಡಲಿಲ್ಲ. ಇಂದಿಗೂ ಪುರುಷರಂತೆ ಬಟ್ಟೆ ಧರಿಸಿ, ಹೇರ್ ಕಟ್​​ ಮಾಡಿಸಿಕೊಂಡು, ಪುರುಷರಂತೆ ಜಮೀನಿನಲ್ಲಿ ದುಡಿಯುತ್ತಾ ಪುಟ್ಟ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾರಿಂದಲೂ ನೆರವು ಬಯಸದೆ ಸಾವಿತ್ರಿ ಸ್ವಾಭಿಮಾನಿಯಾಗಿ ಬದುಕು ಸಾಗಿಸುತ್ತಿದ್ದಾರೆ. ದೇಹ ಕೃಶವಾಗಿದ್ದರೂ, ಬೆನ್ನು ಬಾಗಿದ್ದರೂ ಒಂದು ಕೈಯ್ಯಲ್ಲಿ ಊರುಗೋಲು , ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದು ಕೆಲಸ ಆರಂಭಿಸಿದರೆ ದಣಿವು ಎಂಬುದು ಇವರ ಬಳಿ ಸುಳಿಯುವುದಿಲ್ಲವಂತೆ.

Advertisement

“ನಾನು ಚಿಕ್ಕಂದಿನಿಂದ ಇರುವುದು ಹೀಗೆ. ಯಾರಾದರೂ ಕೂಲಿಗೆ ಕರೆದರೆ ಹೋಗಿ ಕೆಲಸ ಮಾಡಿ ಹಣ ಸಂಪಾದಿಸಿ ಎಲ್ಲರಿಗೂ ನೆಲೆ ಮಾಡಿದ್ದೇನೆ. ಅಪ್ಪ-ಅಮ್ಮನ ಆಸೆಯಂತೆ ಗಂಡಾಗಿ ಬದುಕಿದ್ದೇನೆ, ಮುಂದೆ ಕೂಡಾ ಹೀಗೆ ಇರುತ್ತೇನೆ. ಕೂಲಿ ಮಾಡಿದರೆ ಸಂಪಾದನೆ, ಇಲ್ಲವಾದರೆ ಇಲ್ಲ” ಎಂದು ಸಾವಿತ್ರಿ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾರೆ. ನಾನು ಚೆನ್ನಾಗಿದ್ದರೆ ಸಾಕು. ನನ್ನ ಲೈಫ್ ಸೆಟಲ್ ಆದರೆ ಸಾಕು ಎಂದು ಸ್ವಾರ್ಥದಿಂದ ಬದುಕುವ ಜನಗಳ ನಡುವೆ ತಮ್ಮ ಜೀವನದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಂದೆ-ತಾಯಿಗಳಿಗಾಗಿ, ಒಡಹುಟ್ಟಿದವರಿಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಸಾವಿತ್ರಿ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

Advertisement
Share this on...