ಅವರ ಪರ ನಿಂತು ಸ್ವಂತ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಟಿ…ಮಗ ಮಾಡಿದ ತಪ್ಪೇನು…?

in ಮನರಂಜನೆ 79 views

ತೃತೀಯಲಿಂಗಿಯೊಬ್ಬರಿಗಾಗಿ ಖ್ಯಾತ ನಟಿಯೊಬ್ಬರು ಮಗನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಘಟನೆ ನಡೆದಿರುವುದು ಕೇರಳದಲ್ಲಿ. ಅಂದಹಾಗೆ ಮಗನ ವಿರುದ್ಧ ದೂರು ನೀಡಿರುವುದು ಮಲಯಾಳಂ ನಟಿ ಮಾಲ ಪಾರ್ವತಿ ಎಂಬುವವರು. ಇದೇನಪ್ಪಾ ಮಗನ ವಿರುದ್ಧವೇ ತಾಯಿ ದೂರು ನೀಡುವುದಾ ಆತ ಕೊಲೆ ಏನಾದರೂ ಮಾಡಿದ್ನಾ ಅಂತ ಯೋಚಿಸಬೇಡಿ.ಸಾಮಾನ್ಯವಾಗಿ ಮಕ್ಕಳು ತಪ್ಪು ಮಾಡಿದರೆ ಹಿರಿಯರು ಬುದ್ಧಿ ಹೇಳುತ್ತಾರೆ. ಆದರೆ ಅದು ಕ್ಷಮಿಸಲಾರದ ತಪ್ಪಾದರೆ ಹೇಗೆ..? ಈ ನಟಿಯ ಮಗ ಕೂಡಾ ಅದೇ ತಪ್ಪು ಮಾಡಿದ್ದಾನೆ ಎಂಬ ಆರೋಪವಿದೆ. ಮಾಲ ಪಾರ್ವತಿ ಅವರ ಪುತ್ರ ಅನಂತಕೃಷ್ಣನ್ ತೃತೀಯ ಲಿಂಗಿ ಮೇಕಪ್ ಕಲಾವಿದೆ ಸೀಮಾ ವಿನೀತ್​ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಸೀಮಾ ವಿನೀತ್​ಗೆ ಅನಂತಕೃಷ್ಣ ಅಸಭ್ಯ ಸಂದೇಶ ಹಾಗೂ ಅಸಭ್ಯ ಪೋಟೋಗಳನ್ನು ಕಳಿಸಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಸೀಮಾ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದರು.

Advertisement

 

Advertisement

Advertisement

 

Advertisement

ವಿಷಯ ತಿಳಿದ ಮಾಲ ಪಾರ್ವತಿ ಮಗನ ತಪ್ಪನ್ನು ಮುಚ್ಚಿಡಲು ಯತ್ನಿಸಲಿಲ್ಲ, ಮಗನ ಪರವಾಗಿ ನಿಲ್ಲಲಿಲ್ಲ, ಕೂಡಲೇ ಸೀಮಾಗೆ ಕರೆ ಮಾಡಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ತಾವೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಾಲ ಪಾರ್ವತಿ ಮಗನ ವಿರುದ್ಧ ದೂರು ನೀಡಿದ್ದಾರೆ ಎಂಬ ಮಾತ್ರಕ್ಕೆ ಅವರಿಗೆ ಮಗನ ಮೇಲೆ ಕೋಪ ಇದೆ ಎಂದೋ, ಮಗ ನಿಜವಾಗಲೂ ತಪ್ಪು ಮಾಡಿದ್ಧಾನೆ ಎಂದು ಒಪ್ಪಿಕೊಂಡಿಲ್ಲ. ಈ ವಿಚಾರವಾಗಿ ಮಾತನಾಡಿರುವ ಮಾಲ ಪಾರ್ವತಿ ನನಗೆ ನನ್ನ ಮಗನ ಮೇಲೆ ನಂಬಿಕೆ ಇದೆ. ಸೀಮಾ ಹಾಗೂ ಅನಂತಕೃಷ್ಣನ್ ಬಹಳ ವರ್ಷಗಳಿಂದ ಸ್ನೇಹಿತರು. ನಾನು ತಪ್ಪು ಮಾಡಿಲ್ಲ ಎಂದು ಮಗ ಹೇಳಿದ್ದಾನೆ. ಆದರೆ ನಾನು ದೌರ್ಜನ್ಯಕ್ಕೊಳಗಾಗಿದ್ಧೇನೆ ಎಂದು ಸೀಮಾ ಘೋಷಿಸಿದ ಬಳಿಕ ಒಂದು ಹೆಣ್ಣಾಗಿ ನಾನು ಆಕೆ ಪರ ನಿಲ್ಲಬೇಕಿತ್ತು.

ನಿಜ ಏನು ಎಂಬುದು ಹೊರಗೆ ಬರಬೇಕು. ಆ ಕಾರಣದಿಂದ ಮಗನ ವಿರುದ್ಧ ದೂರು ನೀಡಿದೆ. ಮಗನ ಮೊಬೈಲ್ ಪೊಲೀಸರ ಬಳಿ ಇದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಂದು ವೇಳೆ ನಿಜಕ್ಕೂ ನನ್ನ ಮಗ ತಪ್ಪು ಮಾಡಿದ್ದಲ್ಲಿ ಖಂಡಿತ ಆತ ಶಿಕ್ಷೆ ಅನುಭವಿಸುತ್ತಾನೆ ಎಂದು ಮಾಲ ಹೇಳಿದ್ದಾರೆ.ಒಟ್ಟಿನಲ್ಲಿ ಮಕ್ಕಳ ತಪ್ಪನ್ನು ಮುಚ್ಚಿಕೊಳ್ಳುವ ಪೋಷಕರ ನಡುವೆ ಮಾಲ ಪಾರ್ವತಿ ಬಹಳ ವಿಭಿನ್ನ ಎಂದು ಹೇಳಬಹುದು.

Advertisement
Share this on...