ಕೊರೊನಾ ನಿಧಿ ಹಣದ ಸಮಸ್ಯೆ ನೀಗಿಸಲು ಏಕತಾ ಪ್ರತಿಮೆಯನ್ನೇ ಮಾರಾಟಕ್ಕೆ ಇಡಲಾಗಿದ್ಯಾ….?

in ಕನ್ನಡ ಮಾಹಿತಿ 27 views

ಪ್ರಸ್ತುತ ವಿಶ್ವವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಕೊರೊನಾ ವೈರಸ್​​​​​​​. ಚೀನಾದ ವುಹಾನ್​​​ನಲ್ಲಿ ಹುಟ್ಟಿದ ಈ ವೈರಸ್ ಇದೀಗ ವಿಶ್ವದ 200 ಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿದೆ. ಭಾರತಕ್ಕೂ ಈ ಮಾರಣಾಂತಿಕ ವೈರಸ್ ಕಾಡುತ್ತಿದ್ದು, ಈ ವೈರಸ್​ ವಿರುದ್ಧ ಹೋರಾಡಲು ಲಾಕ್ ಡೌನ್ ಮಾಡಲಾಗಿದೆ.

Advertisement

ಇನ್ನು ಈ ಸಮಸ್ಯೆ ಆರಂಭವಾದಾಗಿನಿಂದ ಬಡ ಜನರ ಸಹಾಯಕ್ಕೆ, ರೋಗಿಗಳ ಔಷಧಕ್ಕೆ ಸರ್ಕಾರ ಸಾಕಷ್ಟು ಖರ್ಚು ಮಾಡಲಾರಂಭಿಸಿದೆ. ಈ ಕಾರಣಕ್ಕಾಗಿ ದಾನಿಗಳು ತಮ್ಮ ಕೈಲಾದ ಹಣದ ಸಹಾಯ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಸಾವಿರ ಅಥವಾ ಲಕ್ಷ ರೂಪಾಯಿ ಹಣದಿಂದ ಪರಿಹಾರವಾಗುವ ಸಮಸ್ಯೆಯಲ್ಲ. ಈ ಕಾರಣದಿಂದ ಕೊರೊನಾ ನಿಧಿಗೆ ಹಣವನ್ನು ಸರಿದೂಗಿಸಲು ಪ್ರಧಾನಿ ನರೇಂದ್ರ ಮೋದಿ ಮುಂದೆ ನಿಂತು ಸ್ಥಾಪಿಸಿದ್ದ ಏಕತಾ ಪ್ರತಿಮೆಯನ್ನು ಮಾರಾಟಕ್ಕೆ ಇಡಲಾಗಿದೆ.

Advertisement

 

Advertisement

Advertisement

 

2018 ರಲ್ಲಿ ಗುಜರಾತ್​​ ನರ್ಮದಾ ನದಿ ತಟದ ಸರ್ದಾರ ಸರೋವರದ ಬಳಿ ನಿರ್ಮಿಸಲಾಗಿರುವ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಮೂರ್ತಿಯನ್ನು 2989 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಇದು ಅಮೆರಿಕದ ಸ್ಟ್ಯಾಚು ಆಫ್​ ಲಿಬರ್ಟಿಗಿಂತ ಎತ್ತರವಾಗಿದ್ದು ಮೂರ್ತಿ ಸ್ಥಾಪನೆಯಾಗಿದ್ದಕ್ಕೆ ಪರ ವಿರೋಧ ಚರ್ಚೆಗಳು ಕೇಳಿ ಬಂದವು. ಇಷ್ಟು ಹಣ ಖರ್ಚು ಮಾಡಿ ಪ್ರತಿಮೆ ಸ್ಥಾಪಿಸುವ ಅಗತ್ಯ ಇತ್ತೇ ಎಂಬ ಪ್ರಶ್ನೆಗಳು ಉದ್ಭವವಾಯ್ತು.

 

 

ಆದರೆ ಈಗ ಕೊರೊನಾ ಪರಿಹಾರ ನಿಧಿಗೆ 30 ಸಾವಿರ ಕೋಟಿ ರೂಪಾಯಿ ಹಣ ಅಗತ್ಯವಿದ್ದು ಇಷ್ಟು ಹಣ ಹೊಂದಿಸುವುದಕ್ಕಾಗಿ ‘ ಏಕತಾ ಪ್ರತಿಮೆ ಮಾರಾಟಕ್ಕಿದೆ’ ಎಂದು ಪ್ರತಿಮೆಯ ಫೋಟೋ ತೆಗೆದು ಯಾರೋ ಓಎಲ್​​​​ಎಕ್ಸ್​​​ನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಫೋಟೋ ಜೊತೆಗೆ ‘ ಕೊರೊನಾ ರೋಗಿಗಳ ಆಸ್ಪತ್ರೆ ಹಾಗೂ ಚಿಕಿತ್ಸೆ ಖರ್ಚಿಗೆ ತುರ್ತು ಹಣದ ಅಗತ್ಯವಿದೆ ‘ ಎಂದು ಬರೆಯಲಾಗಿದೆ. ಇದೀಗ ನಿಜಕ್ಕೂ ಏಕತಾ ಪ್ರತಿಮೆಯನ್ನು ಮಾರಾಟಕ್ಕೆ ಇಡಲಾಗಿದೆಯಾ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ.

 

 

ಇದು ನಿಜಕ್ಕೂ ತಮಾಷೆಗಷ್ಟೇ ಮಾಡಲಾಗಿದೆ. ಆದರೆ ಜನರ ಹಣವನ್ನು ತುರ್ತು ಪರಿಸ್ಥಿತಿಗಳಿಗೆ ಪರಿಹಾರದ ಹೆಸರಿನಲ್ಲಿ ತೆಗೆದುಕೊಳ್ಳುವ ಸರ್ಕಾರ ಅದನ್ನು ಇಂತಹ ಪ್ರತಿಮೆಯನ್ನು ಸ್ಥಾಪಿಸಲು ಬಳಸಿಕೊಳ್ಳುತ್ತದೆ ಎಂಬ ವಿಚಾರ ಇದರಿಂದ ಅರ್ಥವಾಗುತ್ತದೆ. ಒಟ್ಟಿನಲ್ಲಿ ಪ್ರತಿಮೆಯನ್ನು ಯಾರೂ ಮಾರಾಟಕ್ಕೆ ಇಡಲಾಗದು, ಎಂದಿನಂತೆ ನಮ್ಮ ಹಣದ ಸಮಸ್ಯೆ ಮುಂದುವರೆಯಲಿದೆ ಬಿಡಿ.
All Rights REserved Namma Kannada Entertainment.

Advertisement
Share this on...