ಶಬರಿ ಮಲೆಗೆ ಹೋಗುವ ಮುನ್ನ ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಿ ಇಲ್ಲವಾದರೆ ಸ್ವಾಮಿಯ ದರ್ಶನ ಸಿಗುವುದಿಲ್ಲ…

in ಕನ್ನಡ ಮಾಹಿತಿ 131 views

ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯೂ ಹರಿಹರ ಸುತರಾಗಿ ಜನಿಸುತ್ತಾರೆ ನಂತರ ಬಂದಾಳದ ರಾಜಕುಮಾರ ರಾಜ ಶೇಖರ ಅವರ ಮನೆಯಲ್ಲಿ ಸಾಕು ಮಗನಾಗಿ ಬೆಳೆಯುತ್ತಾರೆ. ಶಬರಿಮಲೆ ಸ್ವಾಮಿ ಅವರನ್ನು ಬಂದಾಳ ಎಂದು ಸಹ ಕರೆಯಲಾಗುತ್ತದೆ ವಿರಕ್ತಿಯ ಬಳಿಕ ಶಬರಿ ಮಲೆ ಗಿರಿಯಲ್ಲಿ ಅಯ್ಯಪ್ಪ ಸ್ವಾಮಿ ನೆಲೆಸುತ್ತಾರೆ. ನಂತರ ಬಂದಾಳದ ರಾಜ ಮನೆತನದವರ ವತಿಯಿಂದಲೇ ಇವರಿಗೆ ಗುಡಿಯನ್ನು ಕಟ್ಟಿ ಕೊಡಲಾಗುತ್ತದೆ. ಇಂದಿಗೂ ಶಬರಿ ಮಲೆಯಿಂದ 84 ಕಿಲೋ ಮೀಟರ್ ದೂರದಲ್ಲಿರುವ ಬಂದಾಳ ಎಂಬಲ್ಲಿ ನೆಲೆಸಿರುವ ಈ ರಾಜ ಮನೆತನವು ಶಬರಿ ಮಲೆಯ ಬಹುತೇಕ ಚಟುವಟಿಕೆಗಳಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಪ್ರತಿ ವರ್ಷವೂ ಶಬರಿ ಮಲೆ ಗಿರಿಯಲ್ಲಿ ಲಕ್ಷಾಂತರ ಮಂದಿ ಭಕ್ತಾದಿಗಳು ಭಾಗವಹಿಸುವಂತಹ ಪವಿತ್ರ ಜ್ಯೋತಿಯಾದ ಮಕರಜ್ಯೋತಿ ಸಮಯದಲ್ಲಿ ನಡೆಯುವ ತಿರುವಣಭರಣ ಮೆರವಣಿಗೆ ಬಂದಾಳ ಮನೆಯಿಂದ ಆರಂಭವಾಗುತ್ತದೆ.

Advertisement

Advertisement

ತಿರುವಣಭರಣ ಅಂದರೆ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಧರಿಸುವ ಪವಿತ್ರವಾದ ಒಡವೆಗಳು ಎಂದರ್ಥ. ಬಂದಾಳದ ರಾಜ ರಾಜಶೇಖರನು ತನ್ನ ಸಾಕು ಮಗನಾದ ಶ್ರೀ ಅಯ್ಯಪ್ಪ ಸ್ವಾಮಿಗೆ ಮಾಡಿಸಿದ ಚಿನ್ನದ ಆಭರಣಗಳು ಇವು. ಈ ಮನೆತನದವರು ಪೂರ್ವ ಕಾಲದಿಂದ ಈ ಒಡವೆಗಳನ್ನು ಅವರ ಸಂಸ್ಥಾನದಲ್ಲಿ ಇಟ್ಟಿದ್ದಾರೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಅಂದರೆ ಮಕರ ಸಂಕ್ರಾಂತಿಯ ದಿನದಂದು ಮಾತ್ರ ಶ್ರೀ ಅಯ್ಯಪ್ಪ ಸ್ವಾಮಿಗೆ ಈ ಆಭರಣಗಳಿಂದ ಅಲಂಕಾರವನ್ನು ಮಾಡಲಾಗುತ್ತದೆ. ಹಾಗಾಗಿ ಈ ಮಕರ ಸಂಕ್ರಾತಿಯ ದಿನದಂದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಇನ್ನೂ ಈ ಬಾರಿ ನೀವು ಶಬರಿ ಮಲೆಗೆ ಹೋಗುವ ಮುಂಚೆ ಕೆಲವು ಸಿದ್ಧತೆಗಳನ್ನು ಮುಂಚೆಯೇ ಮಾಡಿ ಕೊಳ್ಳಬೇಕಾಗುತ್ತದೆ.

Advertisement

ಕೇರಳದ ತಿರುವನಂತ ಪುರದಲ್ಲಿ ಇರುವ ಶಬರಿ ಮಲೆಯ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಲು ಇನ್ನೂ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುವುದಕ್ಕಿಂತ ಮುಂಚೆ ದೇವಾಲಯದ ಸಮಿತಿಯು ಕೆಲವೊಂದಷ್ಟು ನಿಯಮಗಳನ್ನು ಜಾರಿಗೊಳಿಸಲು ತಿರ್ಮಾನಿಸಿದೆ. ಪ್ರತಿ ವರ್ಷವೂ ಕೂಡ ಶಬರಿ ಮಲೆಯ ಅಯ್ಯಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತಾಧಿಗಳು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ಈ ವರ್ಷ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ದಿನಕ್ಕೆ ಕೇವಲ 25 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಒದಗಿಸಲಾಗಿದೆ ಎಂದು ದೇವಾಲಯದ ಸಮಿತಿಯು ತಿಳಿಸಿದೆ. ಕೇರಳ ರಾಜ್ಯ ಇಂತಹದೊಂದು ನಿರ್ಣಯವನ್ನು ಕೈಗೊಳ್ಳುವುದಕ್ಕೆ ಮುಖ್ಯ ಕಾರಣ ಏನೆಂದರೆ ಕೊರೋನಾ ಸೋಂಕಿನಿಂದ ಭಕ್ತರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗಬಾರದು ಎಂಬ ಉದ್ದೇಶದಿಂದ ಈ ರೀತಿಯಾದಂತಹ ನಿರ್ಣಯವನ್ನು ಕೈಗೊಂಡಿದ್ದಾರೆ.

Advertisement

ಮುಖ್ಯವಾಗಿ ನೀವು ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಕೊರೋನ ಗೆ ಸಂಬಂಧಿಸಿದ ಎರಡು ಡೋಸ್ ಲಸಿಕೆಗಳನ್ನು ಪಡೆದಿರಬೇಕು. ಇದರ ಜೊತೆಗೆ ದೇವಾಲಯದ ವತಿಯಿಂದ ಕೆಲವು ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಸ್ನಾನ ಘಟ್ಟವಾದ ಪಂಪಾದಲ್ಲಿ ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ಕೊರೋನಾ ಆರ್‌.ಟಿ.ಪಿ.ಸಿ.ಆರ್ ಪರೀಕ್ಷೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ನವೆಂಬರ್ 16 ರಿಂದ ಶಬರಿ ಮಲೆ ಸ್ವಾಮಿಯ ದರ್ಶನ ಪ್ರಾರಂಭವಾಗುತ್ತದೆ. ಈ ಬಾರಿ ಸ್ವಾಮಿಯ ದರ್ಶನಕ್ಕೆ 65 ಮೇಲ್ಪಟ್ಟವರಿಗೆ ಹಾಗೂ 10 ವರ್ಷದ ಒಳಗೆ ಇರುವ ಮಕ್ಕಳಿಗೂ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ ಎಂದು ದೇವಲಯದ ವತಿಯಿಂದ ತಿಳಿಸಿದ್ದಾರೆ.

ಹರ್ಷಿತ.ಜಿ ಕೊಳ್ಳೇಗಾಲ

Advertisement