ಶಕೀಲಾ ಅವರು ನೀಲಿಚಿತ್ರದಲ್ಲಿ ಅಭಿನಯಿಸಲು ಕಾರಣವೇನು ಗೊತ್ತಾ? ನೀಲಿ ರಾಣಿಯ ಕಪ್ಪು ಜೀವನ !

in ಮನರಂಜನೆ/ಸಿನಿಮಾ 1,716 views

ಹದಿಹರಯದ ಹುಡಗರಿಂದ ಹಿಡಿದು ವಯಸ್ಸಾದ ಮುದುಕರ ತನಕ ಅವರ ನಿದ್ದೆಗೆಡಿಸಿದ ನಟಿ ಎಂದರೆ ಶಕೀಲಾ ಅವರು. ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ಬಹು ಬೇಡಿಕೆ ಬೀ ಗ್ರೇಡ್ ನಟಿಯಾಗಿದ್ದ ಅವರ ಸಿನಿಮಾಗಳು ನೇಪಾಳಿ, ಚೀನಾ, ಸಿಂಹಿಳಿ ಸೇರಿದಂತೆ ವಿವಿಧ ವಿದೇಶಿ ಭಾಷೆಗಳಿಗೂ ಕೂಡ ಡಬ್ ಆಗುತ್ತಿತ್ತು. ಭಾರತ
ಸೇರಿದಂತೆ ವಿದೇಶಗಳಲ್ಲಿಯೂ ಕೂಡಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಈ ನಟಿ, ಯುವಕರ ಪಾಲಿನ ಕನಸಿನ ರಾಣಿಯಾಗಿದ್ದರು. ಶಕೀಲಾ ಬೇಗಮ್ ಅವರು ನೀಲಿ ಪ್ರಪಂಚದಲ್ಲಿ ದೊಡ್ಡ ಹೆಸರು ಮತ್ತು ಹಣ ಗಳಿಸಿದ್ದಾರೆ. ಇವರ ಅಭಿನಯದಿಂದದ ಹಣ ಮತ್ತು ಹೆಸರನ್ನು ಮಾಡಿಕೊಂಡ ಘಟಾನುಘಟಿಗಳು ಈಕೆಗೆ ಮೋಸವನ್ನು ಮಾಡಿಬಿಟ್ಟಿದದ್ದರು. ಇನ್ನು ತೆರೆಯ ಮೇಲೆ ನೀಲಿ ರಾಣಿಯಾಗಿ ಮಿಂಚಿದ್ದ ಶಕೀಲ ಬೇಗಮ್ ಅವರ ರಿಯಲ್ ಜೀವನ ತೆರೆಯಷ್ಟು ಗ್ಲಾಮರಸ್ ಆಗಿರಲಿಲ್ಲ.
೧೯೭೫ ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಶಕೀಲಾ ಅವರು, ಬಡತನದಲ್ಲಿಯೇ ಬೆಳೆದರು.  ಆಕೆಯ ತಂದೆ ಕೂಲಿ ಕೆಲಸ ಮಾಡಿ ಕುಟುಂಬ ನಡೆಸುತ್ತಿದ್ದರೆ, ತಾಯಿ ಮನೆಲ್ಲಿಯೇ ಕುಳಿತು ಮಕ್ಕಳನ್ನು ನೋಡಿ ಕೊಳ್ಳುತ್ತಿದ್ದರು.

Advertisement

Advertisement

ಇನ್ನು ಶಕೀಲಾ ಅವರಿಗೆ ಪೋಷಕರ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. ಆದ ಕಾರಣ ತಮ್ಮ ವಿಧ್ಯಾಭ್ಯಾಸಕ್ಕೆ ಗುಡ್ ಬಾಯ್ ಹೇಳಿದ ಅವರು ತಮ್ಮ ಕುಟುಂಬದ ನೆರವಿಗಾಗಿ ದುಡಿಯಲು ನಿಲ್ಲುತ್ತಾರೆ. 1980ರ ದಶಕದ ಕೊನೆಯಲ್ಲಿ ಶಕೀಲಾ ತನ್ನ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ದುಡಿಮೆ ಸಿಗದೇ ಕಷ್ಟ ಪಡುತ್ತಿರುತ್ತಾರೆ.ಇದೆಲ್ಲದಕ್ಕಿಂತ ಹೆಚ್ಚಾಗಿ ಬಹಳ ನೋವಾಗುವ ವಿಚಾರವೇನೆಂದರೆ ಮನೆಯಲ್ಲಿ ಕಡು ಬಡತನದಲ್ಲಿದ್ದ ಕಾರಣ ಹಣಕ್ಕಾಗಿ ವೇಶ್ಯಾವೃತ್ತಿ ನಡೆಸುವಂತೆ ಆಕೆಯ ತಾಯಿ ಅವರನ್ನು ಒತ್ತಾಯಿಸಿದ್ದರಂತೆ. ಇದರಿಂದ ಬಹಳ ನೊಂದಿದ್ದ ಶಕೀಲಾ ಅವರು ಡಿಪ್ರೆಶನ್ ತಲುಪುತ್ತಾರೆ. ಇದರ ಮಧ್ಯೆ ಸಾಕಷ್ಟು ಮಂದಿ ಆಕೆಯ ಮೈಮಾಟ ಮತ್ತು ಮುಖದ ಸೌಂದರ್ಯದ ಬಗ್ಗೆ ಹೊಗಳುತ್ತಾರೆ.

Advertisement

Advertisement

ಈ ಹೊಗಳಿಕೆಯನ್ನು ಕೇಳಿ ಸಂತಸ ಪಟ್ಟ ಅವರು ಸಿನಿಮಾರಂಗ ಪ್ರವೇಶಿಸುವ ಬಗ್ಗೆ ಕನಸು ಕಾಣತ್ತಾರೆ. ಶಕೀಲಾ ಅವರ ಮೇಲೆ ಬಹಳ ಪ್ರಭಾವ ಬೀರಿದ್ದ ನಟಿ ಎಂದರೆ ಆ ಸಮಯದಲ್ಲಿ ಹಾಟ್ ಬೆಡಗಿಯಾಗಿ ಎಂದೇ ಖ್ಯಾತಿ ಗಳಿಸಿದ್ದ ಸಿಲ್ಕ್ ಸ್ಮಿತಾ ಅವರು. ಇದರಿಂದ ಬಹಳ ಪ್ರಭಾವಿತರಾದ ಅವರು ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸುತ್ತಾರೆ. ನಂತರ ಬಿಡುವಿಲ್ಲದಷ್ಟು ಶೂಟಿಂಗ್ ನಲ್ಲಿ ಶಕೀಲಾ ತೊಡಗುತ್ತಾರೆ. ಆದರೆ ವಿಪರ್ಯಾಸವೇನಂದ್ರೆ ಮಾಮೂಲಿ ಸಿನಿಮಾಗಳಲ್ಲಿ ಆಕೆಗೆ ಅವಕಾಶ ಸಿಗಲೇಯಿಲ್ಲ. ಆಕೆ ನಟಿಸಿದ ಚಿತ್ರವೆಲ್ಲ ನೀಲಿ ಚಿತ್ರಗಳೇ.

 

ಶಕೀಲಾ ಅವರು ಸಿಕ್ಕ ಅವಕಾಶಗಳನ್ನು ಬಿಡಲೇ ಬಾರದು ಎಂದು ನಿರ್ದರಿಸಿ, ಒಂದರ ಹಿಂದೆ ಒಂದು ಎಂಬುವಂತೆ ವಯಸ್ಕರ ಸಿನಿಮಾಗಳಲ್ಲಿ ನಟಿಸಲು ಮುಂದಾಗುತ್ತಾರೆ. ಆದರೆ ಬೇಸರದ ಸಂಗತಿ ಏನೆಂದರೆ ಇದರಿಂದ ಅವರಿಗೆ ಯಾವುದೇ ರೀತಿಯ ಹೆಸರು ಬರುತ್ತಿರಲಿಲ್ಲ. ಆರಂಭದಲ್ಲಿ ಶಕೀಲಾ ನೀಲಿ ಚಿತ್ರಗಳಲ್ಲಿ ಸಂಭಾವನೆ ಪಡೆಯದೇ ನಟಿಸ್ತಿದ್ದರಂತೆ. ನಂತರ ಸಮಯ ಕಳೆಯುತ್ತಾ ಆಕೆ ಜನಪ್ರಿಯವಾಗ ತೊಡಗಿದರು. 1986 ರಲ್ಲಿ ಕನ್ನಡಾದ ಆಫ್ರಿಕಾದಲ್ಲಿ ಶೀಲಾ, ತಮಿಳಿನ ರಂಗನಾಯಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 2000 ರಲ್ಲಿ ಮಲಯಾಳಂನಲ್ಲಿ ತೆರೆಕಂಡಿದ್ದ ಕಿನ್ನರ ತುಂಬಿಗಳ್ ಸಿನಿಮಾ ಆಕೆಯ ಸಿನಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಅಂತಾನೆ ಹೇಳಬಹುದು.

ಈ ಸಿನಿಮಾಗಳಿಗೂ ಮುನ್ನ ಶಕೀಲಾ ಅವರು ತಮಿಳಿನ ಜಲ್ಲಿಕಟ್ಟು, ಖಾಲಿ ಸೇರಿದಂತೆ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯನ್ನು ಗಳಿಸಿದ್ದರು. ನಂತರ 2002 ತೆಲುಗು ಸಿನಿಮಾ ರಂಗದಲ್ಲಿ ನಟಿಸಿ ದೊಡ್ಡ ಖ್ಯಾತಿಯನ್ನೆ ಪಡೆದುಕೊಳ್ಳುತ್ತಾರೆ. ಇನ್ನು ನಟಿ ಶಕೀಲ ಮಲೆಯಾಳಂ ಚಿತ್ರರಂಗದಲ್ಲಿ ಯಾವ ರೀತಿ ಖ್ಯಾತಿ ಗಳಿಸಿದ್ದಾರೆ ಎಂದರೆ ಆಕೆ ನಟಿಸಿದ್ದ ಸಿನಿಮಾಗಳು ಯಾವು ಕೂಡ ನಷ್ಟ ಅನುಭವಿಸುವ ಮಾತೇ ಇಲ್ಲ. ಹೀಗಾಗಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾ ಪ್ರದರ್ಶನ ಕಾಣದ ಸಂದರ್ಭದಲ್ಲಿ ಶಕೀಲಾ ಅವರ ಸಿನಿಮಾ ಹೌಸ್ಫುಲ್ ಆಗುತ್ತಿತ್ತು. ದೊಡ್ಡ ಬಜೆಟ್ ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದ ನಿರ್ಮಾಪಕರು ಕೂಡ ಸದ್ದಿಲ್ಲದೆ ಶಕೀಲಾ ಬಳಿ ಬಂದು ನಟಿಸುವಂತೆ ಕೇಳಿಕೊಂಡು ಸಿನಿಮಾ ಮಾಡಿ ಹಣ ಗಳಿಸುತ್ತಿದ್ದರು. ಕೆಲವರು ತಮ್ಮ ಮನೆಗೆ ಆಕೆಯ ಹೆಸರನ್ನು ಕೂಡ ಇಟ್ಟಿದ್ದಾರಂತೆ.

ಇನ್ನೂ ಮಲಯಾಳಂ ಚಿತ್ರರಂಗದಲ್ಲಿ ನಟಿ ಶಕೀಲಾ 2001 ಮತ್ತು 2002 ರ ಸಾಲಿನಲ್ಲಿ ಬರೋಬ್ಬರಿ 40 ವಯಸ್ಕರ ಸಿನಿಮಾಗಳಲ್ಲಿ ನಟಿಸಿ ದಾಖಲೆ ಬರೆದಿದ್ದಾರೆ. ಅನಧಿಕೃತವಾಗಿ ಸುಮಾರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರನ್ನು ವಿವಾಹವಾಗಲು ನಾ ಮುಂದು ತಾ ಮುಂದು ಅಂತ ನಿರ್ಮಾಪಕರು, ಹಲವು ನಟರು ಮುಗಿಬಿದ್ದಿದ್ದರು. ಇನ್ನು ಆಕೆಯ ನಿಜ ಜೀವನದ ಹಿನ್ನೆಲೆ ಬಗ್ಗೆ ತಿಳಿಯುವ ಕುತೂಹಲ ಹಲವರಿಗಿತ್ತು. ಇದೆಲ್ಲದಕ್ಕೂ ಉತ್ತರ ಕೊಟ್ಟಿದ್ದು ಆಕೆಯ ಆತ್ಮಕಥೆ ಪುಸ್ತಕ. ಆಕೆಯಿಂದ ಲಾಭ ಪಡೆದಿರುವ ಮಂದಿ ಲೆಕ್ಕಕ್ಕಲ್ಲಿದಷ್ಟು. ಅಲ್ಲದೇ ಅದೆಷ್ಟು ಜನರು ಅಕೆಯಿಂದ ಹಣಕಾಸಿನ ಸಹಾಯವನ್ನು ಕೂಡ ಪಡೆದಿದ್ದಾರೆ.

ಆದರೆ ಕೊನೆಯಲ್ಲಿ ಆಕೆಗೆ ಎಲ್ಲರೂ ಕೂಡ ಮೋಸ ಮಾಡಿ ನಡು ನೀರಿನಲ್ಲಿ ಕೈಬಿಟ್ಟು ಬಿಟ್ಟರು. ಇನ್ನು ನೀಲಿ ಚಿತ್ರದ ನಟಿಯಾಗಿ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿದ್ದ ಅವರು, ತಮ್ಮ ವೈಯಕ್ತಿಕ ಬದುಕಿನಲ್ಲಿ ನೋವು ಉಂಡಿದ್ದೆ ಹೆಚ್ಚು. ಆಕೆಯ ಕುಟುಂಬದವರು ಕೂಡ ಆಕೆ ಯಾವುದೇ ಸಮಾರಂಭಕ್ಕೆ ಬಾರದಂತೆ ದೂರವೇ ಇರುತ್ತಿದ್ದರಂತೆ. ಸಹೋದರಿಯ ಮಗಳ ಮದುವೆಗೂ ಕೂಡ ಆಕೆಯನ್ನು ಆಹ್ವಾನ ಮಾಡಿರಲ್ಲಿಲ್ಲ. ಆಕೆಯ ಸೋದರಿ ಶಕೀಲಾ ಅವರಿಗೆ ನಿಮ್ಮಂತಹ ಸೆಕ್ಸ್ ನಟಿಯರಿಗೆ ಆಹ್ವಾನ ಮಾಡುವುದಿಲ್ಲ ಎಂದು ಮುಖಕ್ಕೆ ಹೊಡೆದಾಗೆ ಹೇಳಿದ್ದರು.ಇಂತಹ ಅವಮಾನಗಳಿಂದ ಹೊರಬರಲು ತಾನು ಬೇರೆ ಸಿನಿಮಾಗಳಲ್ಲಿ ನಟಿಸುವುದಾಗಿ ಶಕೀಲಾ ಹೇಳಿಕೊಂಡಿದ್ದರು.

ಆಕೆಯ ಸ್ವಂತ ಮನೆಯವರು ಕೂಡ ಹಣಕ್ಕಾಗಿ ಈಕೆಯ ಜೊತೆಗೆ ಸೇರಿಕೊಂಡಿದ್ದರು,ನಂತರ ಆಕೆಯ ಹಣವನ್ನೆಲ್ಲ ತಮ್ಮ ಸುಪರ್ತಿಗೆ ತೆಗೆದುಕೊಂಡಿದ್ದಾರೆ. ಇದೀಗ ಆಕೆಯ ಬಯೋಪಿಕ್ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ನಟಿ ರೀಚ ಚಾಧ ಶಕೀಲಾ ಪಾತ್ರ ನಿರ್ವಹಿಸಲಿದ್ದಾರೆ.

Advertisement
Share this on...