ವಿವಾಹವಾಗುವುದಾಗಿ ನಂಬಿಸಿ ಜೋಶ್ ಚಿತ್ರದ ನಟಿಗೆ ಮಾಡಿದ್ದೇನು?

in ಮನರಂಜನೆ/ಸಿನಿಮಾ 301 views

ಕನ್ನಡದ ಖ್ಯಾತ ನಿರ್ದೇಶಕ ಶಿವಮಣಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಜೋಶ್ ಸಿನಿಮಾ ತಮಗೆಲ್ಲರಿಗೂ ನೆನಪಿದೆ ಅಲ್ಲವೇ ? ೨೦೦೯ ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆಗಿತ್ತು. ಟೀನ್ ಏಜ್ ಹುಡುಗರ ಮೋಜು ಮಸ್ತಿ, ಶಾಲಾ ದಿನಗಳ ತುಂಟಾಟ, ಕಾಲೇಜಿನಲ್ಲಿ ಮಾಡುವ ತರ್ಲೆ ಜೊತೆಗೆ ಕಾಮಿಡಿ, ಪ್ರೀತಿ ಪ್ರೇಮ, ಹಾಗೆಯೇ ಟೇನ್ ಏಜ್ ನಲ್ಲಿ ಯಾವ ರೀತಿ ಅಕರ್ಷಿತರಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ, ಇವೆಲ್ಲವನ್ನು ತೆರೆಯ ಮೇಲೆ ತೋರಿಸಿ ಶಿವ ಮಣಿ ಗೆದ್ದಿದ್ದರು.  ಇನ್ನು ಈ ಚಿತ್ರದಲ್ಲಿ ಮುಖ್ಯ ಅಕರ್ಷಣೆ ಚಿತ್ರದ ಮೊದಲ ನಾಯಕಿ ನಟಿ ಶಾಮ್ನಾ ಕಾಸಿಮ್. ಮುದ್ದು ಮುಖ, ತೊಂಡೆ ಹಣ್ಣಿನಂತಹ ತುಟಿ, ನಯನ ಮನೋಹರವಾದ ಕಣ್ಣುಗಳು, ಅಬ್ಬಾ ಈಕೆಯನ್ನು ಶಾಲಾ ವಿದ್ಯಾರ್ಥಿನಿ ಪಾತ್ರದಲ್ಲಿ ನೋಡಿದ ಯುವಕರು ಫಿದಾ ಆಗಿದ್ದರು..

Advertisement

Advertisement

ನಟಿ ಶಮ್ನಾ ಕಾಸಿಮ್ ಅವರು ಕೇರಳದ ಕಣ್ಣೂರಿನಲ್ಲಿ ೨೩ ಮೇ ೧೯೮೯ ರಂದು ಮೀನುಗಾರರ ಕುಟುಂಬದಲ್ಲಿ ಜನಿಸುತ್ತಾರೆ. ಕಣ್ಣೂರಿನ ಉರ್ಸುಲಿನ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮತ್ತು ಕಣ್ಣೂರಿನ ಸೇಂಟ್ ತೆರೇಸಾ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ಅವರು, ಪತ್ರವ್ಯವಹಾರದ ಮೂಲಕ ಇಂಗ್ಲಿಷ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪೂರ್ಣಗೊಳಿಸಿದ್ದಾರೆ. ಶಾಸ್ತ್ರೀಯ ನರ್ತಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರ ಅವರು ಅಮೃತ ಟಿವಿಯಲ್ಲಿ ರಿಯಾಲಿಟಿ ಆಧಾರಿತ ನೃತ್ಯ ಸ್ಪರ್ಧೆಯ ಸೂಪರ್ ಡ್ಯಾನ್ಸರ್ನಲ್ಲಿ ಭಾಗವಹಿಸಿ ನಂತರ ಮನರಂಜನಾ ಉದ್ಯಮಕ್ಕೆ ಕಾಲಿಟ್ಟರು. 2004 ರಲ್ಲಿ ಮಲಯಾಳಂ ಚಿತ್ರ ಮಂಜು ಪೊಲೊರು ಪೆಂಕುಟ್ಟಿ ಎಂಬ ಚಿತ್ರದಲ್ಲಿ ಅಭಿನಯ ಮಾಡುವ ಮೂಲಕ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿದರು. ಇನ್ನು ಅವರ ಚೊಚ್ಚಲ ತೆಲುಗು ಚಿತ್ರ ಶ್ರೀ ಮಹಾಲಕ್ಷ್ಮಿ ಮತ್ತು ಅವರ ಮೊದಲ ತಮಿಳು ಚಿತ್ರ ಮುನಿಯಂಡಿ ವಿಲಾಂಗಿಯಲ್ ಮೂನ್ರಾಮಂಡು ಚಿತ್ರದಲ್ಲಿ ಪ್ರಮುಖ ಮಹಿಳಾ ಪಾತ್ರದಲ್ಲಿ ನಟಿಸಿದ್ದಾರೆ.

Advertisement

Advertisement

ಕನ್ನಡದಲ್ಲಿ ಜೋಶ್ ಹಾಗೂ ರಾಧನಗಂಡ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಈ ನಟಿ ಹೆಚ್ಚಾಗಿ ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಶಾಮ್ನಾ ಕಾಸಿಮ್ ಅವರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಮುಂದಾಗಿದ್ದ 7 ಆರೋಪಿಗಳನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸೆಲೆಬ್ರೆಟಿಗಳ ಹೇರ್ ಸ್ಟೈಲಿಸ್ಟ್ ಹ್ಯಾರಿಸ್​ ಅವರನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟಿ ಶಾಮ್ನಾ ಕಾಸಿಮ್ ಅವರ ಬಳಿ ಹಣ ಸುಲಿಗೆ ಮಾಡಲು ಆರೋಪಿಗಳು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

.

 

 

ಈ ಗ್ಯಾಂಗ್ ಶಾಮ್ನಾ ಅವರ ಪೋಷಕರನ್ನು ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಸಂಪರ್ಕಿಸಿತ್ತು. ಈ ಬಗ್ಗೆ ಹಲವು ಬಾರಿ ಚರ್ಚೆಗಳು ಹಾಗೂ ದೂರವಾಣಿ ಸಂಭಾಷಣೆ ನಡೆದ ನಂತರ ಪೋಷಕರಿಗೆ ಅನುಮಾನ ಬಂದಿದೆ. ಬಳಿಕ ನಟಿಯ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಗ್ಯಾಂಗ್, ಶಾಮ್ನಾ ಅವರನ್ನು ಸಂಪರ್ಕಿಸಲು ಹೇರ್ ಸ್ಟೈಲಿಸ್ಟ್ ಹ್ಯಾರಿಸ್​ನನ್ನು ಬಳಸಿಕೊಂಡಿದ್ದು, ಈ ಗ್ಯಾಂಗ್ ವಿರುದ್ಧ ಈಗಾಗಲೇ ಹಲವಾರು ಬಾರಿ ಅನೇಕರು ದೂರು ನೀಡಿದ್ದರು ಎಂದು ಕೊಚ್ಚಿ ಪೊಲೀಸ್ ಆಯುಕ್ತ ವಿಜಯ್ ಸಖಾರೆ ಅವರು ತಿಳಿಸಿದ್ದಾರೆ.ಬಂಧಿತರು ದೊಡ್ಡ ಚಿನ್ನದ ಕಳ್ಳ ಸಾಗಣೆ ವಂಚನೆ ಜಾಲಕ್ಕೆ ಸೇರಿದವರು.

ತನ್ನ ಬಲೆಗೆ ಬಿದ್ದ ತಾರಾಮಣಿಗಳನ್ನು ಸುಲಭವಾಗಿ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಬಳಸುವುದು ಇವರ ಉದ್ದೇಶ, ಸಕಾಲದಲ್ಲಿ ತಮ್ಮ ಕುಟುಂಬಸ್ಥರು ಎಚ್ಚೆತ್ತುಕೊಂಡಿದ್ದರಿಂದ ​ನಟಿ ಶಾಮ್ನಾ ಕಾಸಿಮ್ ಈ ಜಾಲದಲ್ಲಿ ಸಿಲುಕುವುದು ತಪ್ಪಿದೆ. ಇನ್ನೂ ಅನೇಕ ತಾರಾಮಣಿಗಳು ಇಂತಹ ಜಾಲದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಕೇರಳ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement
Share this on...