ಅವನೆಷ್ಟೇ ಬುದ್ಧಿವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ..! ಭಾವುಕರಾದ ಶಂಕರ್ ಅಶ್ವಥ್

in ಮನರಂಜನೆ/ಸಿನಿಮಾ 239 views

ಕನ್ನಡದ ಚಾಮಯ್ಯ ಮೇಷ್ಟ್ರು ಅಲಿಯಾಸ್  ಕರಗನಳ್ಳಿ ಸುಬ್ಬರಾಯ ಅಶ್ವತ್ಥ್ ನಾರಾಯಣ ಅವರು ಯಾರಿಗೆ ಗೊತ್ತಿಲ್ಲ ಹೇಳಿ?  ತಮ್ಮ ವೃತ್ತಿ ಜೀವನದಲ್ಲಿ 370ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸುಮಾರು ಐದು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಆಳಿ, ತಮ್ಮ ನಟನೆಯಿಂದ  ಕನ್ನಡಿಗರ ಮನಸ್ಸಿನಲ್ಲಿ  ಸದಾ ಹಸಿರಾಗಿ ಉಳಿದಿದ್ದಾರೆ…ನಿಮಗೆ ಗೊತ್ತಿರ ಬಹುದು 80-90 ರ ದಶಕದಲ್ಲಿ ಸಿನಿಮಾರಂಗವನ್ನು ಆಳಿದ ಹಿರಿಯ ಕಲಾವಿದರ ಬಹುತೇಕ ಮಕ್ಕಳುಗಳು ತಮ್ಮ ತಂದೆಯಂತೆ ಚಿತ್ರರಂಗದಲ್ಲಿ ನೆಲೆಯೂರಲಿಲ್ಲ.. ಅಭಿನಯ ಎಂಬುದು ತಮ್ಮ ರಕ್ತದಲ್ಲೇ ಬಂದಿದ್ದರೂ  ನಟನಾ ಕೌಶಲ್ಯತೆಗಳನ್ನು ಹೊಂದಿದ್ದರು ನಿರ್ದೇಶಕ ಮತ್ತು ನಿರ್ಮಾಪಕರು ಅವಕಾಶಗಳನ್ನು ನೀಡುತ್ತಿರಲಿಲ್ಲ. ಈ ಸಾಲಿನಲ್ಲಿ ಚಾಮಯ್ಯ ಮೇಷ್ಟ್ರು ಅವರ ಪುತ್ರ ಶಂಕರ್ ಅಶ್ವತ್ಥ್ ಅವರು ಸಹ ಒಬ್ಬರು. ಅವರ ಸದ್ಯದ ಪರಿಸ್ಥತಿ ಕೇಳಿದರೆ ಕರುಣಾಜನಕವೆನಿಸುತ್ತದೆ. ಹೌದು ಹಿರಿಯ ಕಲಾವಿದ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಸಿನಿಮಾಗಳಲ್ಲಿ ನಟಿಸಲು ಅವಕಾಶವಿಲ್ಲದೆ ಊಬರ್ ಕ್ಯಾಬ್ ಡ್ರೈವಿಂಗ್ ಮಾಡುತ್ತಿರುವುದು ಬೇಸರದ ಸಂಗತಿ. ಈ ವಿಚಾರವನ್ನು ತಿಳಿದ ಕನ್ನಡದ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಚಿತ್ರ ಯಜಮಾನ ದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದರು.

Advertisement

Advertisement

ಇದರಿಂದ ಭಾವುಕರಾದ ಶಂಕರ್ ಅವರು ಮಾಧ್ಯಮಗಳ ಮುಂದೆ ದರ್ಶನ್ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು ಮತ್ತು ಯಜಮಾನ ಸಿನಿಮಾವಾದ ನಂತರ ಒಂದಿಷ್ಡು ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶಗಳು ಸಹ ಸಿಕ್ಕಿತು. ತಮ್ಮ ವೃತ್ತಿಯ ಅನುಭವಗಳ ಹಾಗೂ ಸಿನಿಮಾಗಳಲ್ಲಿನ ತಮ್ಮ ಅನುಭವ ಹಾಗೂ ತಂದೆಯ ನೆನಪುಗಳ ಬುತ್ತಿಯನ್ನು ಅವರು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೆರೆದಿಡುತ್ತಾರೆ. ಇತ್ತೀಚೆಗೆ ತನ್ನ ತಂದೆಯನ್ನು ಕೊನೆಯ ಕ್ಷಣದಲ್ಲಿ ಸುಖವಾಗಿ ಇರುವಂತೆ ನೋಡಿಕೊಳ್ಳಲು ತಮ್ಮಿಂದ ಸಾಧ್ಯವಾಗಲಿಲ್ಲ ಎಂದು ಶಂಕರ್ ಅಶ್ವತ್ಥ್  ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Advertisement

Advertisement

“ಅವತ್ತು! ಇವತ್ತು! “ಕರ್ಣ” ಚಿತ್ರ ಹೃದಯ ಮುಟ್ಟಿತು. ಟಿವಿಯಲ್ಲಿ “ಕರ್ಣ” ಸಿನಿಮಾ ನೋಡಿದಾಗ ನನ್ನ ಜೀವನದ ಘಟನೆ ನೆನಪಿಗೆ ಬಂದು ಇದನ್ನು ತಿಳಿಸುತ್ತಿದ್ದೇನೆ. ಈ ವಿಷಯ ನಾನು ತಿಳಿಸಲು ಕಾರಣ ಯಾರಿಂದಲೂ ಲೈಕ್ಸ್ ಗಿಟ್ಟಿಸಲಿಕ್ಕಾಗಲಿ ಪ್ರಚಾರಕ್ಕಾಗಲಿ ಅಲ್ಲ. ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ ಅವನೆಷ್ಟೇ ಬುದ್ಧಿವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಇದನ್ನು ಕೆಲವರು ಒಪ್ಪದೇ ಅತೀ ಬುದ್ಧಿವಂತಿಕೆಯಿಂದ ಯಾವುದರಲ್ಲಿ ಬೇಕಾದರೂ ತಪ್ಪನ್ನು ಹುಡುಕುತ್ತಾರೆ. ಅದೇ ಬುದ್ದಿವಂತರನ್ನು ಇಂದು ಕೊರೊನಾ ಬಗ್ಗೆ ಪ್ರಶ್ನಿಸಿದರೆ ? ನೇರವಾದ ಉತ್ತರ ಸಿಕ್ಕಲ್ಲ. ಎಲ್ಲಾ ಭಗವಂತನ ಇಚ್ಛೆ.

ನಾನೂ ಜೀವನದಲ್ಲಿ ಏನೇನೋ ಮಾಡಿದೆ ಆದರೆ ಎಲ್ಲೂ ಉದ್ಧಾರ ಆಗಲಿಲ್ಲ. ಡಿ. ಫಾರ್ಮ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದರೂ ಏನು ಪ್ರಯೋಜನ ಆಗಲಿಲ್ಲ. ಮೆಡಿಕಲ್ ವ್ಯಾಪಾರ ಮಾಡಿದ್ರೂ ಅಲ್ಲೂ ಸೋಲು. ಕೌನ್ ಬನೇಗ ಕರೋಡ್‌ಪತಿಗೆ ಸೆಲಕ್ಟ್ ಆಗಿ ಇಪ್ಪತ್ತು ವರ್ಷದ ಹಿಂದೆನೇ ನನ್ನ ತಂದೆ ಜೊತೆ ಹೋಗಿದ್ದೆ, ಅಲ್ಲೂ ಟುಸ್. ಸೀರಿಯಲ್ ಅನ್ನು  ಬಹಳ ಇಷ್ಟಪಟ್ಟು ತಂದೆಯನ್ನು ಒಪ್ಪಿಸಿ ಕಷ್ಟಪಟ್ಟು ಮಾಡಿದೆ, ಅಲ್ಲೂ ಸೋತೆ. ಯಾವುದಕ್ಕೂ ಜಗ್ಗದೆ ಹಾಗೆ ಜೀವನದಲ್ಲಿ ಮುಂದುವರೆದೆ ಕೊನೆಗೂ ನಾನು ಅಂದುಕೊಂಡಂತೆ ನನ್ನ ತಂದೆಯನ್ನು ಸುಖವಾಗಿ ನೋಡಿಕೊಳ್ಳಲು ಆಗಲಿಲ್ಲ” ಎಂದು ನೋವು ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಅವರ ಕರ್ಣ ಸಿನಿಮಾವನ್ನು ನೆನೆಸಿಕೊಂಡ ಅವರು ಬರೀ ವಿಧಿಯನ್ನೇ ನಿಂದಿಸುತ್ತಾ ಸುಮ್ಮನೆ ಕೂರಲಿಲ್ಲ. ಕೈಲಾದದ್ದನ್ನು ಮಾಡುತ್ತಲೇ ಇಲ್ಲಿಯವರೆಗೂ ಬಂದೆ. ಮತ್ತೆ ಈಗಿನ ಸಂದರ್ಭ ಅರವತ್ತು ವಯಸ್ಸಾದವರ ಸಂಕಷ್ಟ ಎಲ್ಲವನ್ನು ಮೆಲಕು ಹಾಕುತ್ತಾ ಇದ್ದೆ. ಅದಿರಲಿ ಇದನ್ನು ಪ್ರಸ್ತಾಪ ಮಾಡುವುದಕ್ಕೆ ಕಾರಣ, ‘ಕರ್ಣ’ ಚಿತ್ರದಲ್ಲಿ ನಾಯಕ ತನ್ನ ತಂದೆಗೆ ಸಹಾಯ ಮಾಡಲು ವ್ಯಥೆ ಪಡುವುದು ಹಾಗೂ ತಂದೆಗೆ ಅರವತ್ತು ವಯಸ್ಸಾದರಿಂದ ಕಿಡ್ನಿ ಸ್ವೀಕರಿಸಲು ನಿರಾಕರಿಸುವುದು. ನೋಡಿ ಬರೆಯಬೇಕನ್ನಿಸಿತು ಬರೆದೆ ಎಂದು  ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Advertisement
Share this on...