ಮನೆಯಲ್ಲಿಯೇ ಕ್ಯಾಟರಿಂಗ್ ಮಾಡಿ ಹಣ ಸಂಪಾದನೆ ಮಾಡುತ್ತಿರುವ ಕನ್ನಡದ ಖ್ಯಾತ ನಟ…!

in ಮನರಂಜನೆ/ಸಿನಿಮಾ 76 views

ಈ ಲಾಕ್ ಡೌನ್ ಕಾರಣದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಜೀವ ಮುಖ್ಯವೋ, ಜೀವನ ಮುಖ್ಯವೋ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಬಡವರು, ಮಧ್ಯಮ ವರ್ಗದವರು, ಶ್ರೀಮಂತರು ಎಲ್ಲರಿಗೂ ಈ ಸಮಯದಲ್ಲಿ ಅವರದೇ ಆದಂತಹ ಸಮಸ್ಯೆಗಳು ಹುಟ್ಟಿಕೊಂಡಿವೆ. ಲಾಕ್ ಡೌನ್ ಸಡಲಿಕೆಯಾದರೂ ಯಾವುದೇ ವ್ಯಾಪಾರ-ವಹಿವಾಟು ಸಮರ್ಪಕವಾಗಿ ನಡೆಯುತ್ತಿಲ್ಲ. ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ನೆಲಕಚ್ಚಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಇಲ್ಲದಂತಾಗಿ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಇನ್ನೂ ಸಿನಿಮಾ ರಂಗದವರ ಪಾಡು ಸಹ ಎಲ್ಲರಿಗಿಂತಲೂ ವಿಭಿನ್ನವಾಗಿ ಏನು ಇಲ್ಲ. ಸದ್ಯಕ್ಕೆ ಸಿನಿಮಾ ಶೂಟಿಂಗ್ ನಡೆಯುವ ಯಾವುದೇ ಲಕ್ಷಣಗಳಿಲ್ಲ. ಇದೇ ಕಾರಣದಿಂದಾಗಿ ಕೆಲವರು ಬೇರೆ ಬೇರೆ ಕೆಲಸ ಹುಡುಕಿಕೊಳ್ಳುತ್ತಿದ್ದಾರೆ. ಇನ್ನು ಕನ್ನಡದ ಖ್ಯಾತ ಹಿರಿಯ ನಟ ಅಶ್ವಥ್ ರವರ ಪುತ್ರ ಶಂಕರ್ ಅಶ್ವಥ್ ರವರು ಜೀವನಕ್ಕಾಗಿ ಹೊಸ ದಾರಿ ಹುಡುಕಿದ್ದಾರೆ. ಹಲವಾರು ಕನ್ನಡ ಸಿನಿಮಾ ಹಾಗೂ ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಟ ಶಂಕರ್ ಅಶ್ವಥ್ ರವರು ಅವಕಾಶಗಳಿಲ್ಲದೆ ಉಬರ್ ಕಾರ್ ಚಾಲನೆ ಮಾಡುತ್ತಿದ್ದರು ಹಾಗೂ ಕೆಲವೊಂದು ಸಣ್ಣ-ಪುಟ್ಟ ಪಾತ್ರಗಳನ್ನು ಸಹ ಮಾಡುತ್ತಿದ್ದರು.

Advertisement

Advertisement

ಇನ್ನು ಈ ಲಾಕ್ ಡೌನ್ ಕಾರಣದಿಂದ ಎಲ್ಲರಂತೆ ಶಂಕರ್ ಅಶ್ವತ್ ರವರಿಗೂ ಸಮಸ್ಯೆಯಾಗಿದೆ. ಇದೇ ಕಾರಣಕ್ಕೆ ಶಂಕರ್ ಅಶ್ವತ್ಥ್ ಅವರು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಶಂಕರ್ ಅಶ್ವತ್ಥ್ ಅವರು ತಮ್ಮ ಪತ್ನಿಯ ಜತೆ ಕೈಜೋಡಿಸುವ ಮೂಲಕ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಶಂಕರ್ ಅಶ್ವಥ್ ರವರ ಪತ್ನಿ ಮೊದಲಿನಿಂದಲೂ ಸಹ ಕ್ಯಾಟರಿಂಗ್ ಸರ್ವಿಸ್ ಮಾಡಿಕೊಂಡು ಕುಟುಂಬದ ನಿರ್ವಹಣೆಗೆ ತನ್ನ ಪುಟ್ಟ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಲಾಕ್ ಡೌನ್ ಬಳಿಕ ಉಬರ್ ಚಾಲನೆ ಮತ್ತು ಸಿನಿಮಾಗಳಲ್ಲಿ ಕೆಲಸ ಸ್ಥಗಿತವಾದ ನಂತರ ಶಂಕರ್ ಅವರು ತಮ್ಮ ಪತ್ನಿ ಮಾಡುತ್ತಿರುವ ಕ್ಯಾಟರಿಂಗ್ ಸರ್ವಿಸ್ ಗೆ ಕೈ ಜೋಡಿಸಿದ್ದಾರೆ. ಶಂಕರ್ ಅಶ್ವಥ್ ರವರು ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಕೆಲಸ ಇಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವ ಬದಲು ಇರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಳ್ಳುವ ಮೂಲಕ ತಮ್ಮ ಜೀವನ ಕಂಡುಕೊಳ್ಳುತ್ತಿರುವ ಶಂಕರ್ ಅಶ್ವಥ್ ರವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Advertisement

Advertisement

ಭಗವಂತ ನಮ್ಮನ್ನೆಲ್ಲಾ ಹೇಗೆ ಪರೀಕ್ಷೆ ಮಾಡುತ್ತಾನೆ ಎಂದರೆ ನನಗೂ ಸುಮಾರು ದಿನಗಳಿಂದ ಆದಾಯ ಇಲ್ಲ. ಇತ್ತ ಕಡೆ ಶೂಟಿಂಗ್ ಇಲ್ಲ, ಸೀರಿಯಲ್ ಇಲ್ಲ, ಇನ್ನು ಉಬರ್ ಯಾರು ಕೇಳೋ ಹಾಗೆ ಇಲ್ಲ. ಏನೋ ಒಂದೆರಡು ದಿನ ಒಂದು ಸಣ್ಣ ಪಾತ್ರಕ್ಕೆ ಕರೆಬಂತು, ಹೋಗಿ ಬಂದೆ. ನಮ್ಮ ಜೀವನ ನಡೆಯುತ್ತಿರುವುದು ನನ್ನ ಹೆಂಡತಿ ಕ್ಯಾಟರಿಂಗ್ ಸರ್ವಿಸ್ ಮಾಡುತ್ತಿರುವುದರಿಂದ ಇಲ್ಲದಿದ್ದರೆ ನಾವು ಸಾಲ, ಅಡ ಅಂತೆಲ್ಲಾ ದಾರಿನ ನೋಡ್ಕೋಬೇಕಾಗಿತ್ತು. ಈ ಕೊರೋನಾ ತಂದಿಟ್ಟ ಸಮಸ್ಯೆ ಹಾಗಿದೆ. ನಮ್ಮದು ಹೇಗೋ ನಡೆಯುತ್ತದೆ ಆದರೆ ಎಷ್ಟೋ ಕುಟುಂಬಗಳ ಪಾಡು ಏನೋ ದೇವರೇ ಬಲ್ಲ. ಜಸ್ಟ್ ಡಯಲ್ ಗೆ ಫೋನ್ ಮಾಡಿ ಪ್ರತಿದಿನ ಕೆಲಸ ಇಲ್ಲದೆ ಜೀವನ ನಡೆಸಲು ಕಷ್ಟ ಪಡುತ್ತಿರುವ ಹೆಂಗಸರು ನನ್ನ ಹೆಂಡತಿಗೆ ಫೋನ್ ಮಾಡಿ ಏನಾದರೂ ಕೆಲಸ ಕೊಡಿ ಕೊನೆಗೆ ಮುಸುರೆ ಪಾತ್ರೆ ತೊಳೆಯುವ ಕೆಲಸವಾದರೂ ಕೊಡಿ ಎಂದು ಗೋಳಾಡುತ್ತಿದ್ದಾರೆ. ಇದನ್ನು ಕೇಳಲಾರದೆ ನನ್ನ ಮಡದಿ ನಾವು ಎಷ್ಟೋ ಪುಣ್ಯ ಮಾಡಿದ್ದೀವಿ ಎಂದು ನೊಂದುಕೊಂಡಳು. ದೇವರೆ ಆದಷ್ಟು ಬೇಗ ನೀನೆ ಪರಿಹಾರ ತೋರಿಸು ಎಂದು ಅವರು ಸಂಕಷ್ಟದಲ್ಲಿ ಇರುವವರ ಸಮಸ್ಯೆ ಬಗೆಹರಿಯಲಿ ಎಂದು ಪ್ರಾರ್ಥಿಸಿದ್ದಾರೆ.

ಮೊದಲಿನಿಂದಲೂ ಶಂಕರ್ ಅಶ್ವತ್ಥ್ ಅವರು ತುಂಬಾ ಸ್ವಾಭಿಮಾನದ ವ್ಯಕ್ತಿ ಸಿನಿಮಾಗಳಲ್ಲಿ ಅವಕಾಶವಿಲ್ಲವೆಂದು ಯಾರನ್ನು ಅಂಗಲಾಚಿದವರೆಲ್ಲ. ಸಿನಿಮಾದಲ್ಲಿ ಅವಕಾಶವಿಲ್ಲದಿದ್ದರೇನು ಬದುಕು ಸಾಗಿಸಲು ಸಾವಿರಾರು ದಾರಿಗಳಿವೆ ಎಂದು ಕಷ್ಟದ ಪರಿಸ್ಥಿತಿಗಳಲ್ಲಿ ಕುಗ್ಗಿ ಹೋಗದೆ ತಾನೊಬ್ಬ ಶ್ರೇಷ್ಠ ನಟನ ಮಗ ಎಂಬ ಯಾವುದೇ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ನ್ಯಾಯಯುತವಾಗಿ ಯಾವುದೇ ಕೆಲಸ ಮಾಡಿದರು ತಪ್ಪಿಲ್ಲ ಎಂಬಂತೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.

– ಸುಷ್ಮಿತಾ

Advertisement
Share this on...