ರಾಮಾಯಣ ಖ್ಯಾತಿಯ ಸೀತೆ ಶಂಕರ್​​ ನಾಗ್​ ಅವರನ್ನು ನೆನಪಿಸಿಕೊಂಡು ಮತ್ತೊಮ್ಮೆ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿರುವುದೇನು ಗೊತ್ತಾ ?

in ಸಿನಿಮಾ 61 views

ಶಂಕರ್​​ ನಾಗ್, ಈ ಹೆಸರು ಕೇಳಿದರೆ ಸಿನಿಪ್ರಿಯರಿಗೆ ಏನೋ ಒಂದು ವಿಧವಾದ ಗೌರವ, ಖುಷಿಯೊಂದಿಗೆ ಇಂತಹ ಮಹಾನ್ ನಟ, ನಿರ್ದೇಶಕ ಇಂದು ನಮ್ಮೊಂದಿಗೆ ಇಲ್ಲ ಎಂಬ ಬೇಸರ ಕೂಡಾ. ಚಿತ್ರರಂಗಕ್ಕೆ ಬರುವ ಉದ್ದೇಶವಿಲ್ಲದಿದ್ದರೂ ಆಕಸ್ಮಿಕವಾಗಿ ದೊರೆತ ಅವಕಾಶವನ್ನು ಬಳಸಿಕೊಂಡು ನಂತರ ಕನ್ನಡ ಚಿತ್ರರಂಗದಲ್ಲಿ ಕೆಲವೇ ಬೇಡಿಕೆ ನಟರಲ್ಲಿ ಅವರೂ ಒಬ್ಬರಾದರು. ಕರಾಟೆ ಕಿಂಗ್ ಈಗ ನಮ್ಮೊಂದಿಗೆ ಇಲ್ಲವಾದರೂ ಅವರನ್ನು ಅಭಿಮಾನಿಗಳು ಅದರಲ್ಲಿ ಹೆಚ್ಚಾಗಿ ಆಟೋ ಡ್ರೈವರ್​​​​ಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ.

Advertisement

 

Advertisement

Advertisement

ಇದೀಗ ರಾಮಾಯಣದ ಸೀತೆ ಖ್ಯಾತಿಯ ದೀಪಿಕಾ ಚಿಕಾಲಿಯಾ ಶಂಕರ್​ನಾಗ್ ಅವರನ್ನು ನೆನೆದಿದ್ದಾರೆ. ದೀಪಿಕಾ ಚಿಕಾಲಿಯಾ ರಾಮಾಯಣದಲ್ಲಿ ನಟಿಸಿ ಬಹಳ ಹೆಸರು ಮಾಡಿದ್ದ ಕಾಲ ಅದು. ಶಂಕರ್ ನಾಗ್ ದೀಪಿಕಾ ಅವರನ್ನು ತಮ್ಮೊಂದಿಗೆ ನಟಿಸಲು ಕನ್ನಡಕ್ಕೆ ಕರೆತಂದರು. ‘ಹೊಸ ಜೀವನ ‘ ಚಿತ್ರದಲ್ಲಿ ಶಂಕರ್​ ನಾಗ್ ಅವರೊಂದಿಗೆ ದೀಪಿಕಾ ನಾಯಕಿಯಾಗಿ ನಟಿಸಿದರು. ಅದಾದ ನಂತರ ರೆಬಲ್ ಸ್ಟಾರ್ ಅಂಬರೀಶ್ ಅವರೊಂದಿಗೆ ‘ಇಂದ್ರಜಿತ್ ‘ ಚಿತ್ರದಲ್ಲಿ ದೀಪಿಕಾ ನಟಿಸಿದರು. ಆದರೆ ಈ ಚಿತ್ರಗಳ ನಂತರ ದೀಪಿಕಾ ಮತ್ತೆ ಕನ್ನಡದ ಕಡೆ ಮುಖ ಮಾಡಲಿಲ್ಲ.

Advertisement

 

ದೀಪಿಕಾ ಚಿಕಾಲಿಯಾ ನಟಿಸಿದ್ದು ಎರಡೇ ಕನ್ನಡ ಚಿತ್ರಗಳಾದರೂ ಕನ್ನಡಿಗರ ಬಗ್ಗೆ, ಕನ್ನಡ ನಟರ ಬಗ್ಗೆ ಬಹಳ ಗೌರವ ಇರಿಸಿಕೊಂಡಿದ್ದಾರೆ. ‘ಹೊಸ ಜೀವನ ‘ ಚಿತ್ರದ ಹಾಡೊಂದನ್ನು ತಮ್ಮ ಫೇಸ್​ಬುಕ್​​ನಲ್ಲಿ ಹಂಚಿಕೊಂಡಿರುವ ದೀಪಿಕಾ, ‘ಈ ಹಾಡು ಕನ್ನಡದ ‘ಹೊಸ ಜೀವನ’ ಸಿನಿಮಾದ್ದು. ಚಿತ್ರದ ಶೂಟಿಂಗ್ ಮುಗಿದ ನಂತರ ನನ್ನ ಸಹನಟ ಶಂಕರ್ ನಾಗ್ ಅವರು ಅಪಘಾತದಲ್ಲಿ ನಿಧನರಾದ ಸುದ್ದಿ ಕೇಳಿ ನನಗೆ ಬಹಳ ದು:ಖವಾಯಿತು. ಆ ವಿಷಯವನ್ನು ಅರಿಗಿಸಿಕೊಳ್ಳಲು ಸಾಕಷ್ಟು ದಿನಗಳೇ ಬೇಕಾಯ್ತು. ಆದರೆ ಆ ಸಿನಿಮಾ ಒಳ್ಳೆ ಹೆಸರು ಗಳಿಸಿತು. ಆದರೂ ಶಂಕರ್​​​ ನಾಗ್ ಅವರನ್ನು ಕಳೆದುಕೊಂಡ ದು:ಖ ನಮ್ಮನ್ನು ಇಂದೂ ಕಾಡುತ್ತಿದೆ’ ಎಂದು ದೀಪಿಕಾ ಶಂಕರ್​​ನಾಗ್ ಅವರನ್ನು ನೆನೆದು ಬೇಸರ ಮಾಡಿಕೊಂಡಿದ್ದಾರೆ.

 

ಈ ವಿಚಾರ ಒಂದೇ ಸಾಕು ಶಂಕರ್ ನಾಗ್ ಅವರನ್ನು ಜನರು ಎಷ್ಟು ಇಷ್ಟಪಡುತ್ತಾರೆ ಎಂದು ತಿಳಿಯಲು. ಶಂಕರ್​ ನಾಗ್ ಚಿತ್ರರಂಗಕ್ಕೆ ಬರುವ ಮುನ್ನ ಅಣ್ಣನೊಂದಿಗೆ ರಂಗಭೂಮಿಯಲ್ಲಿ ನಟಿಸುತ್ತಿದ್ದರು. ಕೆಲವೊಂದು ಮರಾಠಿ ನಾಟಕಗಳಲ್ಲೂ ಅವರು ನಟಿಸಿದ್ದಾರೆ. ಆರ್​​.ಕೆ. ನಾರಾಯಣ್ ಅವರ ‘ಮಾಲ್ಗುಡಿ ಡೇಸ್​ ‘ ಸೀರೀಸ್ ಮೂಲಕ ಶಂಕರ್​ ನಾಗ್ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದ್ದಾರೆ.
All Rights Reserved Namma Kannada Entertainment.

Advertisement
Share this on...