ಆಟೋರಾಜ ನಿರ್ದೇಶಿಸಿದ ಆ ಏಳು ಸಿನಿಮಾಗಳು ಯಾವುದು ಗೊತ್ತೇ?

in ಮನರಂಜನೆ/ಸಿನಿಮಾ 142 views

ಕನ್ನಡ ಚಿತ್ರರಂಗದ ಖ್ಯಾತ ನಟರ ಸಾಲಿನಲ್ಲಿ ಶಂಕರ್ ನಾಗ್ ಅವರ ಹೆಸರು ಬಂದು ಹೋಗುತ್ತದೆ. ಕಿರಿವಯಸ್ಸಿನಲ್ಲಿ ಹಲವು ಸಾಧನೆಗಳನ್ನು ಮಾಡಿದ ಈ ನಟ ಈಗ ಇದ್ದಿದ್ದರೆ ಕನ್ನಡ ಚಿತ್ರರಂಗ ಇನ್ನೂ ಬೆಳೆಯುತ್ತಿತ್ತು ಎಂಬ ವಿಚಾರ ಪ್ರೇಕ್ಷಕರ ಮನಸಿನಲ್ಲಿ ಮೂಡಲಾರದೇ ಇರದು. ಇಂದಿಗೆ ಶಂಕರ್ ನಾಗ್ ನಮ್ಮನ್ನಗಲಿ ಬರೋಬ್ಬರಿ 30 ವರುಷ ಕಳೆದಿದೆ ನಿಜ, ಆದರೆ ಇಂದಿಗೂ ಅವರು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಶಂಕರ್ ನಾಗ್ ಚಿರಪರಿಚಿತರು. ಕೇವಲ ಬೆರಳೆಣಿಕೆಯಷ್ಟು ಚಿತ್ರಗಳನ್ನಷ್ಟೇ ಅವರು ನಿರ್ದೇಶಿಸಿದ್ದಾರೆ ನಿಜ, ಆದರೆ ಅವರ ನಿರ್ದೇಶನದ ಚಿತ್ರಗಳನ್ನು ಎಂದಿಗೂ ಸಿನಿ ಪ್ರಿಯರು ಮರೆತಿಲ್ಲ. ಆಟೋ ರಾಜ ಎಂದೇ ಜನಜನಿತವಾಗಿರುವ ಶಂಕರ್ ನಾಗ್ ನಿರ್ದೇಶನದ ಚಿತ್ರಗಳು ಯಾವುದೆಂದು ಕಣ್ಣಾಡಿಸಿ ಬರೋಣ.

Advertisement

ಮಿಂಚಿನ ಓಟ – ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಮೂಲಕ ನಟನಾ ರಂಗಕ್ಕೆ ಬಂದ ಶಂಕರ್ ನಾಗ್ ಮುಂದೆ ಸೀತಾರಾಮು, ಆಟೋ ರಾಜ, ಪ್ರೀತಿ ಮಾಡು ತಮಾಷೆ ನೋಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮಿಂಚಿನ ಓಟ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಟನಿಂದ ನಿರ್ದೇಶಕರಾಗಿ ಭಡ್ತಿ ಪಡೆದರು ಶಂಕರ್ ನಾಗ್. ಈ ಚಿತ್ರದಲ್ಲಿ ಸ್ವತಃ ಅವರೂ ಕೂಡಾ ಬಣ್ಣ ಹಚ್ಚಿದ್ದರು. ಉಳಿದಂತೆ ಅನಂತ್ ನಾಗ್ ಲೋಕನಾಥ್, ರಮೇಶ್ ಭಟ್ ಈ ಚಿತ್ರದಲ್ಲಿ ನಟಿಸಿದ್ದರು.ಈ ಚಿತ್ರ ಎಂಟು ರಾಜ್ಯ ಪ್ರಶಸ್ತಿ ಮಾತ್ರವಲ್ಲದೇ ಫಿಲಂಫೇರ್ ಪ್ರಶಸ್ತಿ ಕೂಡಾ ಪಡೆದಿತ್ತು.

Advertisement

Advertisement

ಜನ್ಮ ಜನ್ಮದ ಅನುಬಂಧ – ಪೂರ್ವ ಜನ್ಮದ ಕಥೆ ಹೊಂದಿದ್ದ ಜನ್ಮ ಜನ್ಮದ ಅಬುಬಂಧ ಸಿನಿಮಾದಲ್ಲಿಯೂ ಶಂಕರ್ ನಾಗ್ ನಟಿಸಿದ್ದರು. ಉಳಿದಂತೆ ಅನಂತ್ ನಾಗ್ ಹಾಗೂ ಜಯಂತಿ ಈ ಸಿನಿಮಾದ ಭಾಗವಾಗಿದ್ದರು. ಈ ಸಿನಿಮಾದ ತಂಗಾಳಿಯಲ್ಲಿ ನಾನು ಹಾಡು ಸಂಗೀತ ಪ್ರಿಯರ ಮನ ಸೆಳೆದಿತ್ತು.

Advertisement

ಗೀತಾ – ಶಂಕರ್ ನಾಗ್ ರ ಸಿನಿಮಾ ಎಂದರೆ ಥಟ್ಟನೇ ನೆನಪಾಗುವುದು ಗೀತಾ. ಯಾಕೆಂದರೆ ಅವರ ಸಿನಿ ವೃತ್ತಿ ಜೀವನದಲ್ಲಿಯೂ ಅವರಿಗೆ ಹೆಸರು ತಂದುಕೊಟ್ಟ ಈ ಸಿನಿಮಾದ ಎಲ್ಲಾ ಹಾಡುಗಳು ಎಂದಿಗೂ ಗುನುಗುವಂತೆ ಮಾಡುತ್ತವೆ. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾದ ಗೀತಾ ಚಿತ್ರದಲ್ಲಿ ಶಂಕರ್ ನಾಗ್, ಪದ್ಮಾವತಿ ರಾವ್ ನಟಿಸಿದ್ದರು. ಈ ಸಿನಿಮಾದ ಸಂತೋಷಕ್ಕೆ ಹಾಡು ಸಂತೋಷಕ್ಕೆ ಎಂಬ ಹಾಡು ಎವರ್ ಗ್ರೀನ್ ಹಾಡು ಹೌದು.

ಹೊಸತೀರ್ಪು – ಸದಭಿರುಚಿಯ ಸಿನಿಮಾಗಳನ್ನೇ ಕೊಟ್ಟ ಶಂಕರ್ ನಾಗ್ ರ ನಿರ್ದೇಶನದಲ್ಲಿ ಮೂಡಿ ಬಂದ ಹೊಸತೀರ್ಪು ಚಿತ್ರದಲ್ಲಿ ಅಂಬರೀಶ್ ,ಮಂಜುಳ , ಜಯಮಾಲ ,ಜಯಂತಿ , ಅನಂತ್ ನಾಗ್ ನಟಿಸಿದ್ದರು. ಮತ್ತು ಮಾಸ್ಟರ್ ಮಂಜುನಾಥ್ ಬಾಲನಟನಾಗಿ ಕಾಣಿಸಿಕೊಂಡಿದ್ದರು.

ನೋಡಿ ಸ್ವಾಮಿ ನಾವಿರೋದೆ ಹೀಗೆ – ಶಂಕರ್ ನಾಗ್ ರ ಚಿತ್ರಗಳು ವಿಭಿನ್ನ ಕಥಾಹಂದರ ಹೊಂದಿದ್ದವು. ರಮೇಶ್ ಭಟ್ ನಿರ್ದೇಶನದ ಈ ಚಿತ್ರ ಸಾಂಸಾರಿಕ ಹಾಸ್ಯ ಪ್ರಧಾನವಾಗಿದ್ದು ವೀಕ್ಷಕರು ಮೆಚ್ಚಿಕೊಂಡಿದ್ದರು. ಈ ಚಿತ್ರದಲ್ಲಿ ರಮೇಶ್ ಭಟ್, ಅರುಂಧತಿನಾಗ್, ಶಂಕರನಾಗ್, ಮಾಸ್ಟರ್ ಮಂಜುನಾಥ್ ಅಭಿನಯಿಸಿದ್ದರು.

ಆ’ಕ್ಸಿಡೆಂಟ್ – ಕ್ರೈಂ ಥ್ರಿಲ್ಲರ್ ಚಿತ್ರವಾದ ಆ’ಕ್ಸಿಡೆಂಟ್ ಸಿನಿಮಾ ಹಿ’ಟ್ ಆಂಡ್ ರನ್ ಪ್ರಕರಣದ ಕುರಿತಾಗಿತ್ತು. 32ನೇ ರಾಷ್ಟ್ರಪ್ರಶಸ್ತಿ ಪಡೆದ ಇದರಲ್ಲಿ ಶಂಕರ್ ನಾಗ್ ,ಅನಂತ್ ನಾಗ್ ,ರಮೇಶ್ ಭಟ್ ನಟಿಸಿದ್ದರು. ಕೇವಲ ಎರಡು ತಿಂಗಳಿನಲ್ಲಿ ಶಂಕರ್ ನಾಗ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು.

ಒಂದು ಮುತ್ತಿನ ಕಥೆ – ಶಂಕರ್ ನಾಗ್ ಕೊನೆಯದಾಗಿ ನಿರ್ದೇಶಿಸಿದ ಈ ಚಿತ್ರದಲ್ಲಿ ರಾಜ್ ಕುಮಾರ್ ನಟಿಸಿದ್ದರು. ರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಿದ ಖ್ಯಾತಿ ಶಂಕರ್ ನಾಗ್ ರದು.
– ಅಹಲ್ಯಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...