ಶಂಕರ್ ನಾಗ್ ಅವರ ಪುತ್ರಿ ಮಾಡುತ್ತಿರುವ ಈ ಕೆಲಸ ಮೆಚ್ಚುವಂತಹದು ! ಇಲ್ಲಿದೆ ನೋಡಿ ಮಾಹಿತಿ…

in Uncategorized/ಕನ್ನಡ ಮಾಹಿತಿ 40 views

ಕನ್ನಡ ಚಿತ್ರರಂಗದಲ್ಲಿ ಸದಾ ಹಚ್ಚ ಹಸಿರಾಗಿರುವ ಅಜರಾಮರವಾಗಿರುವ  ಹೆಸರು ಎಂದರೆ ಅದು  ಶಂಕರ್ ನಾಗ್.  ಶಂಕರ್ ನಾಗ್ ರವರು ಕನ್ನಡ ಚಲನಚಿತ್ರ ಕಂಡ ಅದ್ಭುತ ಕಲಾವಿದ. ಅಂತಹ ಶಂಕರ್ ನಾಗ್ ತಮ್ಮ ಮೂವತ್ತೈದನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಇಹ ಲೋಕಕ್ಕೆ ತೆರಳಿದರು. ಇಂದು ಶಂಕರ್ ನಾಗ್ ಅವರು ಇದ್ದಿದ್ದರೆ ಕನ್ನಡ ಚಿತ್ರರಂಗ ಉತ್ತುಂಗ ಸ್ಥಾನಕ್ಕೆ ಇರುತ್ತಿತ್ತು.  ಆಟೋ ರಾಜ ಎಂದೇ ಕರೆಸಿಕೊಳ್ಳುವ  ನಮ್ಮ ನಿಮ್ಮೆಲ್ಲರ ಪ್ರೀತಿಯ ಖ್ಯಾತ ನಟ ನಿರ್ದೇಶಕ ಶಂಕರ್ ನಾಗ್  ತಮ್ಮ ವಿಭಿನ್ನ ಪಾತ್ರಗಳ ಮೂಲಕ ವಿಭಿನ್ನ  ಯೋಜನೆಗಳ ಮೂಲಕ ಎಷ್ಟು ತಲೆಮಾರುಗಳು ಬಂದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವರ ಹೆಸರು ಅಚ್ಚಳಿಯದಂತೆ ಉಳಿಸಿ ಹೋಗಿದ್ದಾರೆ. ಶಂಕರ್ ನಾಗ್ರ ಅವರು ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರು ಮಾಡಿರುವ ಪಾತ್ರಗಳಲ್ಲಿ ಕೆಲಸಗಳಲ್ಲಿ ಅವರು ಜೀವಂತವಾಗಿದ್ದಾರೆ .

Advertisement

 

Advertisement

Advertisement

ಶಂಕರ್ ನಾಗ್ ರವರ ಹೆಂಡತಿ ಅರುಂಧತಿ ನಾಗ್ ಕೂಡಾ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದವರು. ಈ ದಂಪತಿಗಳ ಮುದ್ದಾದ ಮಗಳು  ಕಾವ್ಯ. ಇವರಿಗೆ ಸಿನಿಮಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಆಸಕ್ತಿ ಕೂಡ ಇಲ್ಲ. ಕಾವ್ಯಾ ನಾಗ್ ರವರು ವನ್ಯಜೀವಿ ವಿಭಾಗದಲ್ಲಿ ಎಂಎ ಪದವಿಯನ್ನು ಮಾಡಿದ್ದಾರೆ.  ಹೊಸೂರಿನಲ್ಲಿರುವ ತಂದೆಯ ಜಮೀನಿನಲ್ಲಿ ತನ್ನದೇ ಆದ ಒಂದು ಸ್ವಂತ ಕಂಪನಿಯನ್ನು ತೆರೆದಿದ್ದಾರೆ . ಕೆಮಿಕಲ್  ಮುಕ್ತ ಸೋಪ್ ಮತ್ತು ಆಯಿಲ್ ತಯಾರಿಸುವ ಕೋಕೊನೆಸ್ ಎಂಬ ಕಂಪನಿಯನ್ನು ತೆರೆದಿದ್ದಾರೆ. ಕೆಮಿಕಲ್ ಸೋಪ್ ಮತ್ತು ಆಯಿಲ್ ಉತ್ಪಾದನೆ ಮಾಡಿ ಮಾರುತ್ತಿರುವ ಇವರು ಮಾಡುತ್ತಿರುವ ಸಿನಿಮಾ ರಂಗದಿಂದ ದೂರವಿದ್ದಾರೆ.

Advertisement

 

ಅವರು ಸಿನಿಮಾ ರಂಗದಲ್ಲಿ ಯಾವುದೇ ರೀತಿಯ ಸಾಧನೆ ಮಾಡದೆ ಇದ್ದರೂ ಕೂಡ ಅತ್ಯದ್ಭುತವಾದ ಸೋಪು ಮತ್ತು ಆಯಿಲ್ ಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ  . ಪ್ರಸ್ತುತ ವಿದ್ಯಮಾನದ ತಾಂತ್ರಿಕ ಯುಗದಲ್ಲಿ ಜೀವಿಸುತ್ತಿರುವ ನಮಗೆ ಕೆಮಿಕಲ್ ಮುಕ್ತ ಸೋಪ್ ಮತ್ತು ಆಯಿಲ್ ಗಳ ಅವಶ್ಯಕತೆ  ಇದೆ ಎಂದು ಹೇಳಬಹುದು . ಏನೇ ಆಗಲಿ ಶಂಕರ್ ನಾಗ್ ಅವರ ಪುತ್ರಿ ಮಾಡುತ್ತಿರುವ ಈ ಕೆಲಸ ಮೆಚ್ಚುವಂತಹದು. ನಿಮಗೂ ಹೆಮ್ಮೆಯೆನಿಸಿದರೆ ಲೈಕ್ ಮಾಡಿ,  ಶೇರ್ ಮಾಡಿ..

Advertisement
Share this on...