ಕನ್ನಡ ಸಿನಿರಂಗದ ಮರೆಯಲಾಗದ ರತ್ನ ಶಂಕರ್ ನಾಗ್!

in ಮನರಂಜನೆ/ಸಿನಿಮಾ 104 views

ಕನ್ನಡ ಚಿತ್ರರಂಗದ ಮರೆಯಲಾಗದ ರತ್ನ ಶಂಕರನಾಗ್ ನಿ’ಧನರಾಗಿ ಇಂದಿಗೆ ಮೂವತ್ತು ವರುಷಗಳೇ ಸರಿದುಹೋಗಿವೆ. ಆದರೆ ಅವರು ಕನ್ನಡಚಿತ್ರರಂಗದಲ್ಲಿ ಬಿಟ್ಟು ಹೋದ ಸಾಧನೆಗಳು ಜನರು ಅವರನ್ನು ಇಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿವೆ. 1954ರಲ್ಲಿ ಉತ್ತರಕನ್ನಡದ ಹೊನ್ನಾವರದಲ್ಲಿ ಜನಿಸಿದ ಶಂಕರನಾಗ್ ವಿದ್ಯಾಭ್ಯಾಸ ಮುಗಿಸಿ ಮುಂಬೈಗೆ ತೆರಳಿದರು. ಮರಾಠಿ ಥಿಯೇಟರ್ ಗಳತ್ತ ಆಕರ್ಷಿತರಾಗಿದ್ದ ಶಂಕರ್ ನಾಗ್ 1978ರಲ್ಲಿ ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ತದ ನಂತರ ಸೀತಾರಾಮು, ಅಟೋ ರಾಜ, ಪ್ರೀತಿ ಮಾಡು ತಮಾಷೆ ನೋಡು ಚಿತ್ರಗಳಲ್ಲಿ ನಟಿಸಿ ಯಶಸ್ಸು ಕಂಡರು. ಇಂತಿಪ್ಪ ಶಂಕರ್ ನಾಗ್ ಕೇವಲ ನಟರಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಪರಿಚಿತರು. ಮಿಂಚಿನ ಓಟ ಸಿನಿಮಾ ನಿರ್ದೇಶಿಸುವುದರ ಮೂಲಕ ನಿರ್ದೇಶನದಲ್ಲೂ ಸೈ ಅನ್ನಿಸಿಕೊಂಡ ಶಂಕರ್ ನಾಗ್ ಏಳು ರಾಜ್ಯಪ್ರಶಸ್ತಿಗಳನ್ನು ಗೆದ್ದುಕೊಂಡರು. ಜನ್ಮ ಜನ್ಮದ ಅನುಬಂಧ ಹಾಗೂ ಗೀತಾ ಸಿನಿಮಾಗಳ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಮುಂದೆ ನ್ಯಾಯ ಎಲ್ಲಿದೆ, ನ್ಯಾಯ ಗೆದ್ದಿತು, ಗೆದ್ದ ಮಗ, ಸಾಂಗ್ಲಿಯಾನ , ಎಸ್. ಪಿ ಸಾಂಗ್ಲಿಯಾನ -2 , ಸಿಬಿಐ ಶಂಕರ್ ಸಿನಿಮಾಗಳು ಶಂಕರ್ ನಾಗ್ ಅವರಿಗೆ ಮಗದಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.

Advertisement

Advertisement

ಎಲ್ಲದಕ್ಕಿಂತಲೂ ಮುಖ್ಯವಾಗಿ ಶಂಕರ್ ನಾಗ್ ನಿರ್ದೇಶನದ ಆಕ್ಸಿಡೆಂಟ್ ಸಿನಿಮಾ ಕೇವಲ ರಾಜ್ಯಪ್ರಶಸ್ತಿ ಮಾತ್ರವಲ್ಲದೇ ರಾಷ್ಟ್ರ ಪ್ರಶಸ್ತಿಗಳನ್ನು ಕೂಡಾ ಅವರಿಗೆ ತಂದುಕೊಟ್ಟಿತು. ಜಾನ್ ಸ್ಟೈನ್ ಬೆಕ್ ಅವರ ದಿ ಪರ್ಲ್ ಕಾದಂಬರಿ ಆಧಾರಿಸಿ ಒಂದು ಮುತ್ತಿನ ಕಥೆ ಎಂಬ ಚಿತ್ರವನ್ನು ಕೂಡಾ ಅವರು ನಿರ್ದೇಶಿಸಿದರು. ವರನಟ ಡಾ. ರಾಜ್ ಕುಮಾರ್ ನಟಿಸಿದ್ದ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಮುಂದೆ ನೋಡಿ ಸ್ವಾಮಿ ನಾವಿರೋದೆ ಹೀಗೆ, ಹೊಸ ತೀರ್ಪು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿದ್ದರು.

Advertisement

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಶಂಕರ್ ನಾಗ್ ಅವರು ಕಿರುತೆರೆಯಲ್ಲೂ ಛಾಪು ಮೂಡಿಸಿದ ಪ್ರತಿಭೆ. ಆರ್ ಕೆ ನಾರಾಯಣ್ ಅವರ ಕಾದಂಬರಿ ಆಧರಿಸಿ ಮಾಲ್ಗುಡಿ ಡೇಸ್ ಎಂಬ ಧಾರಾವಾಹಿ ನಿರ್ದೇಶಿಸಿದ ಶಂಕರ್ ನಾಗ್ ಆ ಮೂಲಕ ಕಿರುತೆರೆಯಲ್ಲೂ ಮಿಂಚಿದರು. ಅನಂತ್ ನಾಗ್, ವಿಷ್ಣುವರ್ಧನ್, ಮಾಸ್ಟರ್ ಮಂಜುನಾಥ್ ಮುಂತಾದವರು ಅಭಿನಯಿಸಿದ್ದ ಮಾಲ್ಗುಡಿ ಡೇಸ್ ಧಾರಾವಾಹಿಯು ಭಾರತದ ಟಿವಿ ಇತಿಹಾಸದಲ್ಲಿ ಉತ್ತಮ ಧಾರಾವಾಹಿ ಎನಿಸಿಕೊಂಡಿದೆ.

Advertisement

ಇಂತಿಪ್ಪ ಶಂಕರ್ ನಾಗ್ 1990ರಲ್ಲಿ ದಾವಣಗೆರೆಯ ಅನಗೂಡು ಗ್ರಾಮದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ನಿಧನರಾದರು. ಒಟ್ಟಿನಲ್ಲಿ ಹನ್ನೆರಡು ವರ್ಷಗಳ ಸಿನಿ ಜೀವನದಲ್ಲಿ ತೊಂಭತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಮೇರು ಪ್ರತಿಭೆ. ಇಂತಿಪ್ಪ ನಟ ಇದೀಗ ಭೌತಿಕವಾಗಿ ನಮ್ಮ ಜೊತೆ ಇಲ್ಲ. ಬದಲಿಗೆ ತಮ್ಮ ಸಾಧನೆಯಿಂದಲೇ ಜನರ ಮನದಲ್ಲಿ ಹಸಿರಾಗಿ ಉಳಿದಿದ್ದಾರೆ ಶಂಕರ್ ನಾಗ್.
– ಅಹಲ್ಯಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...