ನಟ ಶರಣ್ ಮಗಳು ಎಷ್ಟು ಕ್ಯೂಟ್ ಗೊತ್ತಾ ನೀವೇ ನೋಡಿ !

in ಮನರಂಜನೆ 165 views

ನಟ ಶರಣ್ ಡೆಡಿಕೇಶನ್ ಗೆ ಮತ್ತೊಂದು ಹೆಸರು. ಒಂದು ಕಾಲದಲ್ಲಿ ನಟನೆ ಮತ್ತು ಚಿತ್ರರಂಗದ ಸಹವಾಸವೇ ಬೇಡ ಎಂದು ದೂರವಿದ್ದ  ಶರಣ್ ಆರ್ಕೆಸ್ಟ್ರಾ ಜೀವನ ಆರಂಭಿಸಿದರು.  ನಂತರ ಸಣ್ಣ ಪುಟ್ಟ ಪಾತ್ರ,  ಹಾಸ್ಯ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ಶರಣ್  ಸ್ಟಾರ್ ನಟಿ ಶ್ರುತಿಯ ತಮ್ಮನಾದರೂ ಕೂಡ ಚಿತ್ರರಂಗದಲ್ಲಿ  ಹಲವು ಏಳು ಬೀಳುಗಳನ್ನು ಕಂಡಿದ್ದಾರೆ.   ಸಣ್ಣ ಪುಟ್ಟ ಪಾತ್ರ ಮತ್ತು ಹಾಸ್ಯ ಪಾತ್ರವನ್ನು ಮಾಡುತ್ತಿದ್ದ ನಟ ತನ್ನ ಸತತ ಪ್ರಯತ್ನದಿಂದಾಗಿ ಇಂದು  ಸ್ಟಾರ್ ನಟರಾಗಿ ಹೊಮ್ಮಿದ್ದಾರೆ.  ನಟ ಶರಣ್ ನಾಯಕನಾಗಿ ಅಭಿನಯಿಸುವ ಯಾವುದೇ ಚಿತ್ರವೂ ಕೂಡ  ನಷ್ಟವನ್ನು ಅನುಭವಿಸುವುದೇ ಇಲ್ಲ ಕಾರಣ ನಟ ಶರಣ್ ಮಾಡುವ ಕಮಾಲ್ ಅನ್ನು ನೋಡುವ ಸಲುವಾಗಿ  ಜನ ಸಿನಿಮಾವನ್ನು ನೋಡುತ್ತಾರೆ.ನಲವತ್ತೆಂಟು ವರ್ಷದ ಶರಣ್ ಡ್ಯಾನ್ಸ್ ಹಿನ್ನೆಲೆ ಇಲ್ಲದಿದ್ದರೂ  ದೇಹವನ್ನು ಹಿಂಡಿ ಡ್ಯಾನ್ಸ್ ಮಾಡಿ  ಸಖತ್ ಪವರ್ಫುಲ್ ಆಗಿ  ಡ್ಯಾನ್ಸ್ ಮಾಡಿ ಆ ಹಾಡು ದೇಶದ ಟಾಪ್ ಒನ್ ಲಿಸ್ಟ್ ನಲ್ಲಿ ನಿಲ್ಲುವಂತೆ ಮಾಡಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ಡೆಡಿಕೇಷನ್ ಮತ್ತೊಂದಿಲ್ಲ.

Advertisement

 

Advertisement

Advertisement

ನಟ ಶರಣ್ ಗೆ  ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಮಗ ಹೃದಯ ಮತ್ತು ಮಗಳು ಪುಣ್ಯ.  ಮುಗ್ಧತೆಯಲ್ಲಿ ಕಚಗುಳಿ ಕೊಡುವ ನಟನೆಯಲ್ಲಿ ನಟ ಶರಣ್ ಎತ್ತಿದ ಕೈ. ಆದರೆ ಮಗಳು ಪುಣ್ಯ ಮುಗ್ಧತೆಯಲ್ಲಿ ತಂದೆಯನ್ನೇ ಮೀರಿಸುವಂತಿದ್ದಾಳೆ.  ಶರಣ್ ಅವರ ಅವತಾರ ಪುರುಷ ಎಂಬ ಚಿತ್ರದಲ್ಲಿ ತಂದೆಯ ಜೊತೆ ಮಗಳು ಪುಣ್ಯ ಕೂಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾಳೆ.ಈ ಪುಟ್ಟ ಹುಡುಗಿಯ ಮುಗ್ಧತೆ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ. ಒಂದು ಕಾಲದಲ್ಲಿ ಮುಗ್ಧತೆಯನ್ನು ಹೊರಹೊಮ್ಮಿಸುವ  ಮೂಲಕ ನಟನೆಯನ್ನು ಮಾಡುತ್ತಿದ್ದ ಬಾಲ ನಟಿ ಬೇಬಿ ಶ್ಯಾಮಿಲಿ. ಚಿಕ್ಕ ಮಕ್ಕಳ ಚಿತ್ರವನ್ನು ಈಗಲೂ ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂದು ಶಾಂತಿ ನೆಮ್ಮದಿ ಸಮಾಧಾನ.  ಆ ಮುಗ್ಧ ಮಾತು ಮುಗ್ಧ ನಟನೆ ನಮ್ಮಲ್ಲಿ ಸಂತೋಷವನ್ನು ಮೂಡಿಸುತ್ತದೆ. ಅದೇ ರೀತಿ ಸಖತ್ ಕ್ಯೂಟ್ ಆಗಿರುವ  ಪುಣ್ಯ ಕೂಡ  ಅಂತಹ ಪಾತ್ರಗಳನ್ನು ಮಾಡುವ ಕಡೆ ಹೆಜ್ಜೆಯನ್ನು ಇಟ್ಟಿದ್ದಾಳೆ.

Advertisement

ಮನಸ್ಸಿನಲ್ಲಿ ಧೈರ್ಯ ಮತ್ತು ಶ್ರದ್ಧೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಾದರಿಯಾಗಿ ನಿಂತಿದ್ದಾರೆ ನಟ ಶರಣ್. ಅವತಾರ ಪುರುಷ ಚಿತ್ರದ ಮೂಲಕ ನಟ ಶರಣ್ ಮತ್ತು ಆಶಿಕಾ ರಂಗನಾಥ್ ತೆರೆಗೆ ಬರಲು ಸಿದ್ಧವಾಗಿದ್ದು ಮತ್ತೆ ಕಮಾಲ್  ಮಾಡುವುದು ಗ್ಯಾರಂಟಿ.

Advertisement
Share this on...