ನಟ್ ಶರಣ್ ಮಗಳನ್ನು ನೋಡಿದ್ದೀರಾ ? ಆಕೆಯೂ ಕೂಡ ಬೆಳ್ಳಿ ಪರದೆಗೆ ಲಗ್ಗೆ ಇಡಲಿದ್ದಾರೆ !

in ಮನರಂಜನೆ/ಸಿನಿಮಾ 158 views

ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ಹಾಸ್ಯನಟ ಎಂದರೆ ಅದು ಶರಣ್. ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ, ಇದೀಗ ಚಂದನವನದ ಭರವಸೆಯ ಸ್ಟಾರ್ ನಟನಾಗಿ ನಿಂತಿದ್ದಾರೆ. ಇನ್ನು ಒಂದು ಕಾಲದಲ್ಲಿ ಶರಣ್ ಚಿತ್ರರಂಗದ ಸಹವಾಸವೇ ಬೇಡ ಎಂದು ನಿರ್ಧರಿಸಿ ದೂರ ಉಳಿದು, ಜೀವನಕ್ಕಾಗಿ ಆರ್ಕೆಸ್ಟ್ರಾ ಜೀವನ ಆರಂಭಿಸಿದರು. ಈ ನಡುವೆ ಅಲ್ಲಲ್ಲಿ  ಸಣ್ಣ ಪುಟ್ಟ ಪಾತ್ರ,  ಹಾಸ್ಯ ಪಾತ್ರಗಳಲ್ಲಿ ಅಭಿನಯಿಸತೊಡಗಿದರು.ಇನ್ನು ತಮಗೆಲ್ಲರಿಗೂ ತಿಳಿದಿರುವ ಹಾಗೆ ಶರಣ್  ನಟಿ ಶ್ರುತಿ ಅವರ ಸಹೋದರ. ಅಕ್ಕ ಕನ್ನಡದ ಸ್ಟಾರ್ ನಟಿಯಾಗಿದ್ದರೂ, ಚಿತ್ರರಂಗದಲ್ಲಿ ಅವಕಾಶಗಳೇನು ಕುಂತ ಜಾಗದಲ್ಲಿ ಹುಡುಕೊಂಡು ಬರಲಿಲ್ಲ. ಜೀವನದುದ್ದಕ್ಕು ಅನೇಕ ಏಳು ಬೀಳನ್ನು ಕಂಡು, ಸಿಕ್ಕಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ, ಇದೀಗ ಸತತ ಪ್ರಯತ್ನದಿಂದ ಸ್ಟಾರ್ ನಟರಾಗಿದ್ದಾರೆ. ಇನ್ನು ಇದೀಗ ಶರಣ್ ಅಭಿನಯಿಸುವ ಯಾವುದೇ ಸಿನಿಮಾ ಕೂಡ ನಷ್ಟ ಅನುಭವಿಸುವುದಿಲ್ಲ. ಆದ ಕಾರಣ ನಿರ್ಮಾಪಕರು ಶರಣ್ ಸಿನಿಮಾಗೆ ಬಂಡವಾಳ ಹೂಡಲು ಯೋಚಿಸದೆ ಒಪ್ಪಿಬಿಡುತ್ತಾರೆ.

Advertisement

 

Advertisement

Advertisement

ಇನ್ನು ಪ್ರೇಕ್ಷಕರು ಕೂಡ ತೆರೆಯ ಮೇಲೆ ಶರಣ್ ಮಾಡುವ ಕಮಾಲ್ ನೋಡಲು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಾರೆ. ಇದೀಗ ಶರಣ್ ಅವರಿಗೆ ೪೮ ವರುಷವಾಗಿದ್ದು, ಡ್ಯಾನ್ಸ್ ಹಿನ್ನೆಲೆ ಇಲ್ಲದೇ ಹೋದರು ಕೂಡ ಪವರ್ ಫುಲ್ ಹಾಗೂ ಎನರ್ಜಿ ಇಂದ ಡ್ಯಾನ್ಸ್ ಮಾಡಿ ಆ ಹಾಡನ್ನು ದೇಶದ ಟಾಪ್ ಒನ್ ಸಾಲಿನಲ್ಲಿ ಸೇರುವಂತೆ ಮಾಡಿ ಬಿಟ್ಟರು. ಅವರ ಡೆಡಿಕೇಷನ್ ಅನ್ನು ನಿಜಕ್ಕು ಮೆಚ್ಚಲೇ ಬೇಕು.ಸುಖ ಸಂಸಾರವನ್ನು ನಡೆಸುತ್ತಿರುವ ಶರಣ್ ಅವರಿಗೆ ಎರಡು ಮುದ್ದಾದ ಮಕ್ಕಳಿವೆ. ಗಂಡು ಮಗನ ಹೆಸರು ಹೃದಯ ಆದರೆ ಹೆಣ್ಣು ಮಗಳ ಹೆಸರು ಪುಣ್ಯ. ಇನ್ನು ತಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ ಮುಗ್ಧತೆಯಲ್ಲಿ ಪ್ರೇಕ್ಷಕರಿಗೆ ಕಚಗುಳಿ ಕೊಡುತ್ತಾರೆ ನಟ ಶರಣ್.

Advertisement

ಆದರೆ ಪುಣ್ಯ ಅವರನ್ನು ನೋಡುತ್ತಿದ್ದರೆ ಮುಗ್ಧತೆಯಲ್ಲಿ ತನ್ಮ ತಂದೆಯನ್ನೇ ಮೀರಿಸುವಂತೆ ಕಾಣುತ್ತಿದ್ದಾರೆ ಪುಣ್ಯ ಅವರು.  ಈಗಾಗಲೇ ಶರಣ್ ಅವರ ಅವತಾರ ಪುರುಷ ಎಂಬ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾದ ವಿಶೇಷತೆ ಏನೆಂದರೆ ಅವತಾರ ಪುರುಷದಲ್ಲಿ ತಂದೆಯೊಟ್ಟಿಗೆ ಮಗಳು ಪುಣ್ಯ ಕೂಡ ಅಭಿನಯಿಸಿದ್ದಾರೆ

 

ಪುಣ್ಯ ಅವರ ಮುಖ ನೋಡುತ್ತಿದ್ದರೆ ಪ್ರೇಕ್ಷಕರಿಗೆಈ ಪುಟ್ಟ ಹುಡುಗಿಯ ಮುಗ್ಧತೆ ಇಷ್ಟವಾಗುತ್ತದೆ ಎಂಬುವದರಲ್ಲಿ ನೋ doubt. ಇನ್ನೂ ಒಂದು ಕಾಲದಲ್ಲಿ ತಮ್ಮ ಮುಗ್ಧತೆಯನ್ನು ಹೊರಹೊಮ್ಮಿಸುವ  ಮೂಲಕ ನಟನೆಯನ್ನು ಮಾಡುತ್ತಿದ್ದ ಬಾಲ ನಟಿ ಬೇಬಿ ಶ್ಯಾಮಿಲಿ. ಚಿಕ್ಕ ಮಕ್ಕಳ ಚಿತ್ರವನ್ನು ಈಗಲೂ ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂದು ಶಾಂತಿ ನೆಮ್ಮದಿ ಸಮಾಧಾನ.  ಆ ಮುಗ್ಧ ಮಾತು ಮುಗ್ಧ ನಟನೆ ನಮ್ಮಲ್ಲಿ ಸಂತೋಷವನ್ನು ಮೂಡಿಸುತ್ತದೆ.

ಇದೀಗ ಇದೇ ರೀತಿಯಲ್ಲಿ ಸಖತ್ ಕ್ಯೂಟ್ ಆಗಿರುವ  ಪುಣ್ಯ ಅವರು ಕೂಡ  ಅಂತಹ ಪಾತ್ರಗಳನ್ನು ಮಾಡುವ ಕಡೆ ಹೆಜ್ಜೆಯನ್ನು ಇಟ್ಟಿದ್ದಾರೆ. ಆಕೆಯ ಪಾತ್ರ ಪ್ರೇಕ್ಷಕರಿಗೆ ಯಾವ ರೀತಿ ಇಷ್ಟವಾಗುತ್ತದೋ ಕಾದು ನೋಡ ಬೇಕಾಗಿದೆ. ಇನ್ನು ಚುಟು ಚುಟು ಎಂಬ ಹಾಡಿಗೆ ಹೆಜ್ಜೆ ಹಾಕುತ್ತಾ ರ್ಯಾಂಬೋ ೨ ಸಿನಿಮಾದಲ್ಲಿ ಸೂಪರ್ ಹಿಟ್ ಜೋಡಿಗಳಾದ ಶರಣ್ ಮತ್ತು ಅಶಿಕಾ, ಇದೀಗ ಅವತಾರ ಪುರುಷದಲ್ಲಿ ಯಾವ ರೀತಿ ಮನರಂಜನೆ ಕೊಡತ್ತಾರೋ ಕಾದು ನೋಡಬೇಕಿದೆ..

Advertisement
Share this on...