ಹುಡುಗಿಗಾಗಿ ಪ್ರತಿಸ್ಪರ್ಧಿಗಳಾದ ಶರ್ವಾನಂದ್ ಮತ್ತು ಸಿದ್ಧಾರ್ಥ್?

in ಮನರಂಜನೆ/ಸಿನಿಮಾ 59 views

ಚೊಚ್ಚಲ ಚಿತ್ರ ಯಶಸ್ಸಿನ ರುಚಿ ನೋಡಿದ ಆರ್ಎಕ್ಸ್ 100 ಖ್ಯಾತಿಯ ಅಜಯ್ ಭೂಪತಿ ಅವರ ಮುಂದಿನ ಚಿತ್ರ ‘ಮಹಾ ಸಮುದ್ರಂ’ ಸುಮಾರು ಒಂದೆರಡು ವರ್ಷಗಳಿಂದ ಸುದ್ದಿಯಲ್ಲಿದೆ. ರವಿ ತೇಜಾ ಮತ್ತು ನಾಗ ಚೈತನ್ಯ ಈ ಚಿತ್ರದಿಂದ ಹೊರನಡೆದಾಗಿನಿಂದ, ಮುಖ್ಯ ಪಾತ್ರಕ್ಕಾಗಿ ನಟ ಶರ್ವಾನಂದ್ ಅವರನ್ನು ಆಯ್ಕೆ ಮಾಡಿಕೊಳ್ಳಲು ಅಜಯ್ ಹಗ್ಗಜಗ್ಗಾಟ ನಡೆಸಿದ್ದರು. ಪ್ರತಿಭಾನ್ವಿತ ನಟ ಸಿದ್ಧಾರ್ಥ್ ಕೂಡ ಈ ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ಹಗ್ಗಜಗ್ಗಾಟ ನಡೆಸಿದ್ದರು ಎಂದು ಈಗಾಗಲೇ ವರದಿಯಾಗಿದೆ. ಇತ್ತೀಚಿನ ಅಪ್ಡೇಟ್ ಪ್ರಕಾರ ಸಿದ್ಧಾರ್ಥ್ ನೆಗೆಟಿವ್ ಶೇಡ್ ಹೊಂದಿರುವ ಪಾತ್ರವನ್ನು ಮಾಡಲಿದ್ದಾರೆ. ಲಾಕ್ಡೌನ್’ಗೂ ಮುನ್ನ ನಿರ್ದೇಶಕರು ಚಿತ್ರಕಥೆಯನ್ನು ಸಿದ್ಧಾರ್ಥ್ಗೆ ಹೇಳಿದ್ದು, ಸಿದ್ಧಾರ್ಥ್ ಅವರು ಈ ಪಾತ್ರವನ್ನು ನಿರ್ವಹಿಸಲು ಆಸಕ್ತಿ ತೋರಿಸಿದರಂತೆ. ವರದಿಗಳ ಪ್ರಕಾರ, ‘ಮಹಾ ಸಮುದ್ರಂ’ ವೈಜಾಗ್ನ ಕಳ್ಳಸಾಗಣೆ ಹಿನ್ನೆಲೆಯ ಸಿನಿಮಾ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಬಹುದು.

Advertisement


ಇನ್ನು ಚಿತ್ರದಲ್ಲಿ ಶರ್ವಾನಂದ್ ಮತ್ತು ಸಿದ್ಧಾರ್ಥ್ ಮುಖ್ಯ ಪಾತ್ರದಲ್ಲಿದ್ದರೆ, ಈಗಾಗಲೇ ಬಾಲಿವುಡ್’ನಲ್ಲಿ ಸೈ ಎನಿಸಿಕೊಂಡಿರುವ, ತಮಿಳಿನ ‘ಅಂತರಿಕ್ಷಮ್’, ತೆಲುಗಿನಲ್ಲಿ ‘ಸಮ್ಮೋಹನಮ್’ ಚಿತ್ರ ಖ್ಯಾತಿಯ ಪ್ರತಿಭಾವಂತ ನಟಿ ಅದಿತಿ ರಾವ್ ಹೈದರಿ ನಾಯಕಿ ಎಂದು ಈಗಾಗಲೇ ವರದಿಯಾಗಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ ಚಿತ್ರದಲ್ಲಿನ ನಾಯಕ ಪಾತ್ರಧಾರಿಗಳು ಒಂದು ಹುಡುಗಿ ತಮ್ಮ ಜೀವನದಲ್ಲಿ ಕಾಲಿಡುವವರೆಗೂ ಆಪ್ತ ಮಿತ್ರರು ಎಂದು ಹೇಳಲಾಗುತ್ತದೆ. ಅಂತಿಮವಾಗಿ, ಅವರ ಸ್ನೇಹವು ಪೈಪೋಟಿಗೆ ತಿರುಗಲಿದೆ. ಈ ಮೊದಲೇ ಹೇಳಿದಂತೆ ಇದು ವೈಜಾಗ್ ಆಧಾರಿತ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದೆ.

Advertisement

 

Advertisement


ಆದರೆ ರೊಮ್ಯಾಂಟಿಕ್ ನಾಯಕ ಸಿದ್ಧಾರ್ಥ್ ನೆಗೆಟಿವ್ ಶೇಡ್ ಇರುವ ಈ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಎರಡನೇ ನಾಯಕ ಚಿತ್ರದಲ್ಲಿ ಸಾಯುತ್ತಾನೆ. ಅನಿಲ್ ಸುಂಕರಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಲಾಕ್ ಡೌನ್ ಸಮಯದಲ್ಲಿ ಸ್ಕ್ರಿಪ್ಟ್ ಅನ್ನು ಬರೆಯಲಾಗಿದೆ. ಸದ್ಯ ಕೊರೊನಾ ಹಾವಳಿ ಇರುವುದರಿಂದ, ಮುಂದಿನ ದಿನಗಳಲ್ಲಿ ಮಹಾ ಸಮುದ್ರಂ ಚಿತ್ರೀಕರಣ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಚಿತ್ರಕ್ಕಾಗಿ ಕೆಲಸ ಮಾಡುವ ನಟರು ಮತ್ತು ತಂತ್ರಜ್ಞರ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.

Advertisement

Advertisement
Share this on...