ಎಲ್ಲಾ ಚೆನ್ನಾಗಿ ಹೋಗುತ್ತಿರುವ ಸಮಯದಲ್ಲಿ ಶಶಿಕುಮಾರ್ ಗೆ ಈ ಪರಿಸ್ಥಿತಿ ಬಿರುಗಾಳಿಯನ್ನೆ ಎಬ್ಬಿಸಿತು…

in ಮನರಂಜನೆ/ಸಿನಿಮಾ 110 views

ಬೆಳ್ಳೆತೆರೆಯ ಮೇಲೆ ನಾಯಕ ನಟನಾಗಿ ಮಿಂಚುವ ಒಬ್ಬ ನಾಯಕ ನಟನಿಗೆ ಮುಖ್ಯವಾಗಿ ಬೇಕಾಗಿರುವುದು ಆತನ ಮುಖ ಅಲ್ಲವೇ? ಆತ ದೈಹಿಕವಾಗಿ ಮತ್ತು ನೋಡಲು ಚೆನ್ನಾಗಿದ್ದು, ಜೊತೆಗೆ ಪ್ರತಿಭೆ ಇದ್ದರೆ ಮಾತ್ರ ಆ ನಟನನ್ನು ಅಭಿಮಾನಿ ದೇವರುಗಳು ಮೆಚ್ಚುತ್ತಾರೆ. ಆ ರೀತಿ ತನ್ನ ಸೌಂದರ್ಯದ ಮೂಲಕ ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದ ನಟ, ಇದ್ದಕ್ಕಿದ್ದ ಹಾಗೆ ತನ್ನ ಅಂದವನ್ನೇ ಕಳೆದುಕೊಂಡರೆ ಹೇಗಾಗಬೇಕು ಊಹಿಸಿ. ಈ ರೀತಿಯ ಪರಿಸ್ಥಿತಿ ಬಂದಿದ್ದು ನಟ ಶಶಿ ಕುಮಾರ್ ಜೀವನದಲ್ಲಿ. ಶಶಿಕುಮಾರ್ ಅವರು ಚಂದನವನ ಕಂಡ ಬಹು ಸುಂದರ ನಟ. ಎಲ್ಲರ ದೃಷ್ಟಿ ಇಂದಲೋ ಏನೋ ಒಂದು ಅಪಘಾತದಲ್ಲಿ ಅವರ ಮುಖಕ್ಕೆ ಬಲವಾದ ಪೆಟ್ಟು ಬೀಳುತ್ತದೆ. ಈ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾದ ಶಶಿಕುಮಾರ್ ಸಾವು ಬದುಕಿನ ನಡುವೆ ಹೋರಾಡಿ ಗೆದ್ದು ಬರುತ್ತಾರೆ. ಆದರೆ ಹೀಗೆ ಗೆದ್ದು ಬಂದರೂ ಆ ಒಂದು ಅಪಘಾತ ಅವರ ಜೀವನದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿರುತ್ತದೆ. ಹೌದು ಅದು ೧೯೯೮ ಜುಲೈ ೩೧ ರಂದು ನಡೆದ ಒಂದು ಘಟನೆ.. ಆ ಸಮಯದಲ್ಲಿ ಕನ್ನಡದಲ್ಲಿ ಶಶಿಕುಮಾರ್ ದೊಡ್ಡ ಸ್ಟಾರ್ ಆಗಿರುತ್ತಾರೆ. ಕೇವಲ ಏಳೆಂಟು ವರ್ಷಗಳಲ್ಲಿ ೭೫ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ.

Advertisement

Advertisement

ಅವರು ಅಭಿನಯಿಸುತ್ತಿದ್ದ ಬಹುತೇಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗುತ್ತಿದ್ದವು. ಅಲ್ಲದೆ ಕನ್ನಡದಲ್ಲಿ ಬಹು ಬೇಡಿಕೆಯ ನಟ ಮತ್ತು ಬ್ಯುಸಿಯಷ್ಟ್ ನಾಯಕ ಎಂದೆನಿಸಿಕೊಂಡಿದ್ದರು. ಹೀಗೆ ಎಲ್ಲ ಚೆನ್ನಾಗಿ ಹೋಗುತ್ತಿರುವ ಸಮಯದಲ್ಲಿ ಅವರ ಜೀವನದಲ್ಲಿ ಆ ಅಪಘಾತ ಅವರನ್ನು ಮುಳುಗಿಸಿಬಿಟ್ಟಿತು. ಶಶಿಕುಮಾರ್ ಆ ಸಮಯದಲ್ಲಿ ಬೆಂಗಳೂರಿನ ಆರ್ ಟಿ ನಗರದಲ್ಲಿ ವಾಸವಾಗಿದ್ದರು. ಬಾರೋ ನನ್ನ ಮುದ್ದಿನ ಕೃಷ್ಣ ಎಂಬ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ಬರುತ್ತಿದ್ದ ಅವರಿಗೆ ಮಗಳು ಕರೆ ಮಾಡಿ ಐಸ್ ಕ್ರೀಮ್ ತೆಗೆದುಕೊಂಡು ಬಾ ಅಪ್ಪಾ ಎಂದು ಹೇಳಿದರಂತೆ. ತನ್ನ ಮಗಳ ಆಸೆಯಂತೆ ಅವರಿಗೆ ಐಸ್ ಕ್ರೀಮ್ ತೆಗೆದುಕೊಳ್ಳಲು ತಮ್ಮ ಮಾರುತಿ ಕಾರಿನಲ್ಲಿ ಶಿವಾನಂದ ಸರ್ಕಲ್ ಹತ್ತಿರ ಹೋಗುತ್ತಿದ್ದಾಗ ದೊಡ್ಡ ಅಪಘಾತವಾಗುತ್ತದೆ. ಸ್ಥಳದಲ್ಲಿದ್ದ ಆಟೋ ಡ್ರೈವರ್ಗಳು ಶಶಿಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ.

Advertisement

Advertisement

 

ಅದಾಗಲೇ ಸಮಯ ರಾತ್ರಿ ಒಂಬತ್ತು ಗಂಟೆಯಾಗಿತ್ತು. ಶಶಿಕುಮಾರ್ ಕೇವಲ ಮೂವತ್ತು ಕಿಲೋ ಮೀಟರ್ ವೇಗದಲ್ಲಿ ಬರುತ್ತಿದ್ದರು ಜೊತೆಗೆ ಸಣ್ಣದಾಗಿ ಮಳೆಯೂ ಬೇರೆ ಬರುತ್ತಿತ್ತು. ನಂತರ ಕಾರ್ ಎದುರಿನಿಂದ ಅವರ ಕಣ್ಣಿಗೆ ಲೈಟ್ ಬೀಳುತ್ತದೆ. ಲೈಟ್ ನಿಂದ ಕಣ್ಣು ಬಿಡಲು ಸಾಧ್ಯವಾಗದ ಶಶಿಕುಮಾರ್, ಮುಂದೆ ಒಂದು ಗಾಡಿ ಬರುತ್ತಿದೆ ಎಂದು ಸ್ಟೇರಿಂಗ್ ಅನ್ನು ಬಲಕ್ಕೆ ತಿರುಗಿಸಿದ್ದಾರೆ. ಹೀಗೆ ಬಲಕ್ಕೆ ತಿರುಗಿಸಿದ ಮೇಲೆ ಕಣ್ಣು ಮುಚ್ಚಿದ ಶಶಿಕುಮಾರ್ ಕಣ್ಣು ತೆರೆದಿದ್ದು ಆಸ್ಪತ್ರೆಯಲ್ಲಿ. ಈ ಅಪಘಾತದಿಂದ ಶಶಿಕುಮಾರ್ ಅವರ ಮುಖಕ್ಕೆ ದೊಡ್ಡ ಪೆಟ್ಟೇ ಬಿದ್ದು ಬಿಟ್ಟಿತ್ತು.

ಮುಖ ರಕ್ತದಿಂದ ತುಂಬಿತ್ತು. ಬರೋಬ್ಬರಿ ಶಶಿಕುಮಾರ್ ಅವರಿಗೆ ಎಂಟು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯಿತು . ಡಾಕ್ಟರ್ ಜಲಾನಿ ಎಂಬುವವರು ಶಶಿಕುಮಾರ್ ಅವರಿಗೆ ಮರು ಜೀವವನ್ನು ನೀಡುತ್ತಾರೆ. ಆದರೆ ಈ ಅಪಘಾತದ ತೀವ್ರತೆಗೆ ಶಶಿಕುಮಾರ್ ತಮ್ಮ ಮುಖವನ್ನು ನೋಡಲು ಸಾಧ್ಯವಾಗದ ರೀತಿಯಲ್ಲಿ ಆಗಿಬಿಟ್ಟಿರುತ್ತದೆ. ಇದಾದ ನಂತರ ನೋಡಿ ಶಶಿ ಅವರ ಬಾಳಲ್ಲಿ ಬಿರುಗಾಳಿ ಎದ್ದು ಬಿಡುತ್ತದೆ.ಈ ರೀತಿಯಾದ ಒಂದು ದುರ್ಘಟನೆ ಅವರ ಬಾಳಲ್ಲಿ ನಡೆದ ನಂತರ ಶಶಿಕುಮಾರ್ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತ ಬರುತ್ತದೆ. ಅಪಘಾತದ ಬಳಿಕ ಅವರಿಗೆ ಡ್ಯಾನ್ಸ್ , ಆಕ್ಟ್ ಮಾಡಲು ಆಗಲ್ಲ ಎನ್ನುವ ವದಂತಿಗಳು ಗಾಂಧಿನಗರದಲ್ಲಿ ಹಬ್ಬಿದವು. ಇದರಿಂದ ಸಿನಿಮಾಗಳು ಕೈ ತಪ್ಪಿದ್ದವು. ಹಣ ಇಲ್ಲದೆ ಸ್ನೇಹಿತರಿಗೆ ಕೇವಲ ೧೦ ಸಾವಿರಕ್ಕಾಗಿ ಕೈ ಚಾಚಿದರು. ಆದರೆ, ಯಾರು ಕೂಡ ಅವರ ಸಹಾಯಕ್ಕೆ ಬರಲಿಲ್ಲ ಎಂದು ಭಾವುಕರಾದರು ಶಶಿಕುಮಾರ್ ಅವರು..

ಈ ಘಟನೆಗಳೆಲ್ಲಾ ನಡೆದ ಮೇಲೆ ನಟ ಶಶಿಕುಮಾರ್ ಅವರು ಆ ವೇಳೆ ಡಿಪ್ರೆಶನ್ ಹೋಗುತ್ತಾರೆ. ಅವರು ತಮ್ಮ ಮುಖ ನೋಡಿಕೊಳ್ಳಬಾರದು ಎಂದು ಮನೆಯಲ್ಲಿ ಒಂದು ಕನ್ನಡಿಯೂ ಕೂಡ ಇರಿಸಿರಲಿಲ್ಲ. ತನ್ನ ಮುಖ ನೋಡಿಕೊಳ್ಳಬಾರದೆಂದು ತನ್ನ ಕಣ್ಣೀಗೆ ಬಟ್ಟೆ ಕಟ್ಟಿಕೊಂಡು ಇರುತ್ತಿದ್ದರು. ಈ ರೀತಿ ಇದ್ದ ಶಶಿಕುಮಾರ್ ಕ್ರಮೇಣ ಚೇತರಿಸಿಕೊಂಡರು. ತಮ್ಮ ನೋವನ್ನು ಮರೆತು, ಮತ್ತೆ ಸಿನಿಮಾದಲ್ಲಿ ನಟಿಸಲು ಶುರು ಮಾಡಿದರು. ಶಶಿ ಬದುಕಿನಲ್ಲಿ ಹೊಸ ಬೆಳಕು ಮೂಡಲು ವರ್ಷಗಳೇ ಬೇಕಾಯಿತು.

Advertisement
Share this on...