manasa

ಬೆಂಗಳೂರಿನ ಹುಡುಗಿಯಾದ ಈಕೆ ನಟನೆ ಜಗತ್ತಿಗೆ ಬಂದಿದ್ದೇ ಆಕಸ್ಮಿಕ !

in ಮನರಂಜನೆ/ಸಿನಿಮಾ 1,286 views

ಓದಿನಲ್ಲಿ ಜಾಣೆಯಾಗಿದ್ದ ಮಗಳ ಕಲಿಕೆ ನೋಡಿ ಪೋಷಕರು ಇವಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬಹುದು ಎಂದುಕೊಂಡಿದ್ದರು. ಆದರೆ ಅವರ ಆಲೋಚನೆ ಅಕ್ಷರಶಃ ಸುಳ್ಳಾಯಿತು. ಹೌದು, ಆಕೆ ಫೊಷಕರು ಅಂದುಕೊಂಡಂತೆ ಡಾಕ್ಟರ್ ಅಗಲಿ, ಇಂಜಿನಿಯರ್ ಆಗಲಿ ಆಗಲಿಲ್ಲ. ಬದಲಿಗೆ ಆಕೆ ಬೆಳದದ್ದು ನಟಿಯಾಗಿ! ಬಣ್ಣದ ಲೋಕದ ಸೆಳೆತಕ್ಕೆ ಸಿಲುಕಿ ನಟನಾ ರಂಗಕ್ಕೆ ಕಾಲಿಟ್ಟ ಆ ಮುದ್ದು ಮುಖದ ಚೆಲುವೆಯ ಹೆಸರು ಮಾನಸ ಮನೋಹರ್. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆರೂರು ಜಗದೀಶ್ ನಿರ್ದೇಶನದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಆಗಿ ಅಭಿನಯಿಸುತ್ತಿರುವ ಮಾನಸ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಇವರ ಗತ್ತು , ಬುದ್ದಿವಂತಿಕೆಗೆ ಪ್ರೇಕ್ಷಕರು ಫಿದಾ ಆಗಿರುವುದಂತೂ ದಿಟ. ಮೀರಾ ಪಾತ್ರದ ಬಗ್ಗೆ ಮಾತನಾಡಿದ ಮಾನಸ “ಅವಕಾಶ ನೀಡಿದರೆ ಹೆಣ್ಣು ಅದ್ಭುತವಾಗಿ ಸಾಧನೆ ಮಾಡುತ್ತಾಳೆ. ವಿಶ್ವ ಬೆರಗಾಗುವಷ್ಟು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾಳೆ. ಈ ಪಾತ್ರವೂ ಅದನ್ನೇ ತೋರಿಸುತ್ತದೆ. ಮೀರಾ ಆಧುನಿಕ ಯುಗದ ಹೆಣ್ಣು ಹೀಗಾಗಿ ಎಲ್ಲರಿಗೂ ಇಷ್ಟವಾಗಿದೆ. ನನಗೂ ಕೂಡಾ” ಎನ್ನುತ್ತಾರೆ ಮಾನಸ.

Advertisement

Advertisement

ಅಂದ ಹಾಗೇ ನಿರ್ದೇಶಕ ಆರೂರು ಜಗದೀಶ್ ಅವರ ಹಿಂದಿನ ಧಾರಾವಾಹಿಗಳಲ್ಲಿಯೂ ಮಾನಸ ನಟಿಸಿದ್ದು ಇದೀಗ ಮತ್ತೆ ಅವರದೇ ನಿರ್ದೇಶನದ ಧಾರಾವಾಹಿಯಲ್ಲಿ ಆಕೆ ಅಭಿನಯಿಸಿದ್ದಾರೆ. ಅಶ್ವಿನಿ ನಕ್ಷತ್ರ ,ಶುಭವಿವಾಹಗಳಲ್ಲಿ ನಟಿಸಿದ್ದ ಮಾನಸಾ ಬಳಿ ಜೊತೆ ಜೊತೆಯಲಿ ಆರಂಭವಾದಾಗ ಜಗದೀಶ್ ಅವರು ಇಂತಹದೊಂದು ಪಾತ್ರ ಇದೆ ,ನಟಿಸುವಿರಾ ಎಂದು ಕೇಳಿದರು. ಆಗ ಬಹಲಕ ಖುಷಿಯಿಂದ ಒಪ್ಪಿಕೊಂಡ ಮಾನಸ ” ಮೀರಾ ಪಾತ್ರದಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಛಾಯೆ ಇದೆ. ಕಲಾವಿದೆಗೆ ಇದು ಸವಾಲಿನ ಪಾತ್ರ” ಎನ್ನುತ್ತಾರೆ.

Advertisement

ಮಾನಸ ನಟನೆ ಜಗತ್ತಿಗೆ ಬಂದಿದ್ದೇ ಆಕಸ್ಮಿಕ. ಬೆಂಗಳೂರಿನ ಹುಡುಗಿಯಾದ ಇವರಿಗೆ ನಟನೆಯ ಕುರಿತು ಬಾಲ್ಯದಲ್ಲಿಯೇ ಆಸಕ್ತಿ ಇತ್ತು. ಎಂಬಿಎ ಓದುತ್ತಿದ್ದಾಗ ನಟನೆಯತ್ತ ಮುಖ ಮಾಡಿದ್ದ ಈಕೆ ಆಡಿಷನ್ ನಲ್ಲಿ ಆಯ್ಕೆಯಾದರು. ಅಶ್ವಿನಿ ನಕ್ಷತ್ರದ ಮೂಲಕ ಇವರ ಬಣ್ಣದ ಪಯಣ ಶುರು ಮಾಡಿದ್ದರು‌. ಎಂಬಿಎ ಎಕ್ಸಾಂ ಇದ್ದ ಕಾರಣ ಪೂರ್ಣ ಪ್ರಮಾಣದ ಪಾತ್ರ ಒಪ್ಪಿಕೊಳ್ಳಲಾಗಲಿಲ್ಲ. ಕೇವಲ ಅತಿಥಿ ಪಾತ್ರ ಮಾಡಿದರು. ಮಾನಸ ಅವರ ನಟನೆಯನ್ನು ಕಂಡು ಮೆಚ್ಚಿದ ಆರೂರು ಜಗದೀಶ್ ಮುಂದಿನ ಎರಡು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನೀಡಿದರು.

Advertisement

ಆರೂರು ಜಗದೀಶ್ ಧಾರಾವಾಹಿ ತಂಡ ನನ್ನ ಎರಡನೇ ಕುಟುಂಬ ಎನ್ನುವ ಮಾನಸ ಅನಿರುದ್ಧ್ ಅವರಿಗೆ ಜಂಭ ಇಲ್ಲ. ಸೆಟ್ ನವರೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಾರೆ ಎಂದು ತಮ್ಮ ತಂಡದ ಬಗ್ಗೆ ಮಾತನಾಡುತ್ತಾರೆ ಮಾನಸಾ. ಇಂತಿಪ್ಪ ಮಾನಸ 2014ರಲ್ಲಿ ಮಿಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ. ಮಾನಸ ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಈಗಾಗಲೇ ನಟಿಸಿದ್ದಾರೆ. ಗೌರೀಶ್ ಅಕ್ಕಿ ಅವರ ಸಿನಿಮಾ ಮೈ ಡಾರ್ಲಿಂಗ್ ಸಿನಿಮಾದಲ್ಲಿ ನಟಿಸಿರುವ ಇವರು ತೆಲುಗು ತಮಿಳಿನಲ್ಲಿಯೂ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿಸಲು ಕಿರುತೆರೆ ಹಿರಿತೆರೆ ಎಂಬುದೇನಿಲ್ಲ. ತೂಕವುಳ್ಳ ಪಾತ್ರ ಸಿಗಬೇಕು. ಜನ ಗುರುತಿಸುವಂತಹ ಪಾತ್ರಗಳಲ್ಲಿ ನಟಿಸಬೇಕು. ಜೊತೆಗೆ ಪ್ರಾಮುಖ್ಯತೆ ಇರಬೇಕು. ಎಲ್ಲಾ ತರಹದ ಪಾತ್ರಗಳು ನನಗಿಷ್ಟ ಎನ್ನುವ ಮಾನಸ ಅವರಿಗೆ ನಟನೆಯೇ ಜಗತ್ತು ಎಂದರೆ ಸುಳ್ಳಲ್ಲ!
– ಅಹಲ್ಯಾ

Advertisement
Share this on...