ಮಜಾಭಾರತದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಈಕೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಹೌದು!

in ಮನರಂಜನೆ/ಸಿನಿಮಾ 13,125 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಸ್ಯ ಕಾರ್ಯಕ್ರಮ ಮಜಾಭಾರತದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆಯ ಹೆಸರು ಪ್ರಿಯಾಂಕಾ ಕಾಮತ್. ಪ್ರಿಯಾಂಕಾ ಕಾಮತ್ ಎಂದಾಗ ಯಾರಪ್ಪಾ ಇದು ಎಂಬ ಅನುಮಾನ ಮೂಡದಿರದು. ಯಾಕೆಂದರೆ ಸಣ್ಣ ಪರದೆಯಲ್ಲಿ ಆಕೆ ಪಿಕೆ ಎಂದೇ ಫೇಮಸ್ಸು! ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿರುವ ಪ್ರಿಯಾಂಕಾ ಕಾಮತ್ ಬಯಸದೇ ಬಂದ ಅವಕಾಶವನ್ನು ಒಪ್ಪಿಕೊಂಡ ಕಾರಣ ಇದೀಗ ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಿಯಾಂಕಾ ಕಾಮತ್ ಇದೀಗ ಮಜಾಭಾರತದ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಚಾಂಪಿಯನ್ ಗೆ ಆಡಿಶನ್ ಗೆ ಹೋಗಿ ಬಂದ ಪ್ರಿಯಾಂಕಾಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ ಅವರು ಆಯ್ಕೆಯೂ ಆಗಿದ್ದರು. ಆದರೆ ಅಂತಿಮ ಪರೀಕ್ಷೆಯ ಸಮಯವಾದುದಿಂದ ಪ್ರಿಯಾಂಕೆಗೆ ಫೈನಲ್ ಆಡಿಶನ್ ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಜೊತೆಗೆ ತನಗೆ ಪರೀಕ್ಷೆ ಇರುವ ಕಾರಣ ಭಾಗವಹಿಸಲು ಅಸಾಧ್ಯ ಎಂದು ವಾಹಿನಿಗೆ ತಿಳಿಸಿದರು.

Advertisement

Advertisement

ಪರೀಕ್ಷೆ ಮುಗಿದ ಬಳಿಕವಷ್ಟೇ ಆಡಿಶನ್ ನಲ್ಲಿ ಭಾಗವಹಿಸಬಹುದು ಎಂಬ ಮಾತು ವಾಹಿನಿ ಕಡೆಯಿಂದ ಕೇಳಿ ಬಂದಾಗ ಪ್ರಿಯಾಂಕಾ ಗರ ಆದ ಸಂತಸ ಹೇಳತೀರದು. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಸ್ವರ್ಗಕ್ಕೆ ಮೂರೇ ಗೇಣು. ಪರೀಕ್ಷೆ ಮುಗಿದ ಬಳಿಕ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡ ಪ್ರಿಯಾಂಕಾ ಬರೋಬ್ಬರಿ ಮೂರು ತಿಂಗಳ ಕಾಲ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಚಾಂಪಿಯನ್ ರಿಯಾಲಿಟಿ ಶೋ ಮುಗಿದದ್ದೇ ತಡ, ಅವಕಾಶಗಳ ಸುರಿಮಳೆ ಪ್ರಿಯಾಂಕರನ್ನು ಅರಸಿಕೊಂಡು ಬಂದಿತು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದ್ದ ಹೊಚ್ಚ ಹೊಸ ಹಾಸ್ಯ ಕಾರ್ಯಕ್ರಮ ಮಜಾಭಾರತದಲ್ಲಿ ಭಾಗವಹಿಸುವ ಅವಕಾಶ ಬಂದಾಗ ಒಂದು ಕ್ಷಣ ಅಂಜಿಕೆ ಉಂಟಾಗಿತ್ತು.

Advertisement

Advertisement

ಯಾಕೆಂದರೆ ನಟನೆಯ ರೀತಿ ನೀತಿಗಳು, ಗಂಧ ಗಾಳಿ ತಿಳಿಯದ ಕಾರಣ ನಟಿಸಲು ಭಯವಾಗಿತ್ತು. ತನಗೆ ನಟನೆಯ ಆಗು ಹೋಗುಗಳು ಗೊತ್ತಿಲ್ಲ, ನಟಿಸಿ ಅಭ್ಯಾಸವಿಲ್ಲ ಎಂದು ವಾಹಿನಿಯವರ ಬಳಿ ಹೇಳಿದಾಗ ಏನಿದ್ದರೂ ಒಂದು ವಾರಗಳ ಕಾಲ ಕಾರ್ಯಕ್ರಮದಲ್ಲಿ ಇರಿ. ಮುಂದೆಯೂ ಕಷ್ಟವಾದರೆ ಮುಂದೆ ನೋಡೋಣ ಎಂದು ಹೇಳಿದರು. ಒಕೆ ಎಂದ ಪ್ರಿಯಾಂಕಾ ಅಸ್ತು ಎಂದರು. ಮೊದಮೊದಲು ನಟಿಸುವುದು ಕಷ್ಟವಾದರೂ ಮತ್ತೆ ನಟನೆ ಎಂಬುದು ಏನು ಎಂಬುದನ್ನು ಅರಿತುಕೊಂಡರು.

ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಪಿಕೆ ಅಲಿಯಾಸ್ ಪ್ರಿಯಾಂಕಾ ಕಾಮತ್ ಮಜಾಭಾರತದ ಮೂರೂ ಸೀಸನ್​​​ನಲ್ಲೂ ಮಿಂಚಿದ್ದು, ಇದೀಗ ಹೊಸ ಸೀಸನ್ ನಲ್ಲೂ ಛಾಪು ಮೂಡಿಸುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಶೋ ಸಂಡೇ ಬಜಾರ್ ನ ನಿರೂಪಕಿಯಾಗಿ ಮೋಡಿ ಮಾಡಿರುವ ಈಕೆ ಹಾಸ್ಯೋತ್ಸವ ಕಾರ್ಯಕ್ರಮದ ನಿರೂಪಕಿಯಾಗಿ ಗಮನ ಸೆಳೆದಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಸಿನಿಮಾದಲ್ಲಿ ನಾಯಕಿಯ ಗೆಳತಿಯಾಗಿ ಅಭಿನಯಿಸಿರುವ ಈ ಚೆಂದುಳ್ಳಿ ಚೆಲುವೆ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
– ಅಹಲ್ಯಾ

Advertisement