ಕಿರುತೆರೆಯಲ್ಲಿ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿಯೂ ಈಕೆ ಖಳನಾಯಕಿ! - Namma Kannada Suddi
bigboss priyanka

ಕಿರುತೆರೆಯಲ್ಲಿ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿಯೂ ಈಕೆ ಖಳನಾಯಕಿ!

in ಮನರಂಜನೆ/ಸಿನಿಮಾ 334 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ಖಳನಾಯಕಿ ಚಂದ್ರಿಕಾ ಆಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆಯ ಹೆಸರು ಪ್ರಿಯಾಂಕಾ ಶಿವಣ್ಣ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಶಿವಣ್ಣ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಕಿರುತೆರೆಯಲ್ಲಿ ನಟಿಸಿ ಮೋಡಿ ಮಾಡಿರುವ ಪ್ರಿಯಾಂಕಾ ಇದೀಗ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಪವನ್ ನಿರ್ದೇಶನದ ಫ್ಯಾಂಟಸಿ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಹಿರಿತೆರೆಗೆ ಹಾರಿದ ಪ್ರಿಯಾಂಕಾ ಅಲ್ಲೂ ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ!  ” ಫ್ಯಾಂಟಸಿ ಸಿನಿಮಾ ವಿಶಿಷ್ಟ ಅನುಭವ ನೀಡಿದೆ. ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಪಾತ್ರ ನಿರ್ವಹಣೆ ಕಷ್ಟ ನೀಡಿಲ್ಲ. ಉಳಿದಂತೆ ಅಗ್ನಿಸಾಕ್ಷಿಯ ಚಂದ್ರಿಕಾ ಪಾತ್ರಕ್ಕೂ ಇದಕ್ಕೂ ವ್ಯತ್ಯಾಸವಿದೆ. ಸಿನಿಮಾದಲ್ಲಿ ಚಂದ್ರಿಕಾಳಷ್ಟು ಕೆಟ್ಟಬುದ್ದಿ ಪ್ರದರ್ಶಿಸಿಲ್ಲ” ಎಂದು ನಗುತ್ತಾ ಹೇಳುವ ಚಂದ್ರಿಕಾ ಕಿರುತೆರೆ ಹಿರಿತೆರೆ ಎಂದು ಯಾವತ್ತಿಗೂ ಬೇಧ ಮಾಡುವುದಿಲ್ಲ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಸತ್ಯ ದಲ್ಲಿ ಪ್ರಿಯಾಂಕಾ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಅಗ್ನಿಸಾಕ್ಷಿ ನಂತರ ಕಿರುತೆರೆಯಿಂದ ದೂರವಿದ್ದ ಈ ಚೆಲುವೆ ಇದೀಗ ಮತ್ತೊಮ್ಮೆ ಕಮಾಲ್ ಮಾಡಲು ತಯಾರಾಗಿದ್ದಾರೆ. ಇಲ್ಲೂ ಆಕೆ ವಿಲನ್ ಆಗಿ ನಟಿಸಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ.

Advertisement

Advertisement

ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಬಂದ ಪ್ರಿಯಾಂಕಾ ಮುಂದೆ  ಒಂದೂರಲ್ಲಿ ರಾಜ ರಾಣಿ, ಪರಿಣಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ತದ ನಂತರ ಆಕೆ ಚಂದ್ರಿಕಾ ಆಗಿ ಬದಲಾಗಿದ್ದು, ಮನೋಜ್ಞ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಅಗ್ನಿಸಾಕ್ಷಿಯ ಚಂದ್ರಿಕಾ ಆಗಿ ಅಭಿನಯಿಸುತ್ತಿದ್ದ ರಾಜೇಶ್ವರಿ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಾಗ ಪ್ರಿಯಾಂಕಾ ಅವರಿಗೆ ನಟಿಸುವ ಅವಕಾಶ ದೊರಕಿತು.

Advertisement

ನಟಿಸುವ ಅವಕಾಶ ದೊರೆತಾಗ ಖುಷಿ ಆದರೂ ಈಗಾಗಲೇ ಜನಪ್ರಿಯತೆ ಪಡೆದಿರುವ ಪಾತ್ರ, ಅದನ್ನು ನಿಭಾಯಿಸಿಕೊಂಡು ಸಾಗಲು ಸಾಧ್ಯವೇ ಎಂಬ ಅಳುಕು, ಭಯ ಆಕೆಯನ್ನು ಕಾಡಿತ್ತು. ಆದರೂ ನಟಿಸಲು ಒಪ್ಪಿಕೊಂಡ ಈಕೆಯನ್ನು ಜನ ಮೆಚ್ಚಿದ್ದಾರೆ ಎಂಬುದಕ್ಕೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನಲ್ಲಿ ಮನ ಮೆಚ್ಚಿದ ಮಂಥರೆ ಪ್ರಶಸ್ತಿ ಪಡೆದಿರುವುದೇ ಸಾಕ್ಷಿ.

Advertisement

“ನನಗೆ ನೆಗೆಟಿವ್ ಪಾತ್ರಗಳೆಂದರೆ ತುಂಬಾ ಇಷ್ಟ. ಅಳುವ ಪಾತ್ರಗಳೆಂದರೆ ನನಗೆ ಅಷ್ಟಕಷ್ಟೇ” ಎಂದು ಹೇಳುವ ಪ್ರಿಯಾಂಕಾ ಕಾಕತಾಳೀಯ ಎಂಬಂತೆ ತಮ್ಮ ಮೊದಲ ಸಿನಿಮಾದಲ್ಲಿಯೂ ಖಳನಾಯಕಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಫ್ಯಾಂಟಸಿ ಸಿನಿಮಾ ಕಥೆ ಕೇಳಿದಾಗ ಮನಸಿಗೆ ಆಪ್ತ ಎನಿಸಿತು. ಕಥೆಯೇ ಪ್ರಧಾನವಾದ ಈ ಸಿನಿಮಾವನ್ನು ತಕ್ಷಣ ಒಪ್ಪಿಕೊಂಡೆ ಎನ್ನುವ ಪ್ರಿಯಾಂಕಾಗೆ ಕಿರುತೆರೆ ಎಂಬುದು ತವರುಮನೆ. ಉತ್ತಮ ಅವಕಾಶಗಳು ದೊರಕಿದರೆ ಮರಳಿ ಕಿರುತೆರೆಗೆ ಬರುತ್ತೇನೆ ಎಂದು ಹೇಳಿದ್ದ ಪ್ರಿಯಾಂಕಾ ಸತ್ಯ ಧಾರಾವಾಹಿಯ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
– ಅಹಲ್ಯಾ

Advertisement
Share this on...

Latest from ಮನರಂಜನೆ

ಕಡೆಗೂ ಔಟ್ ಆಯ್ತು ಬಿಗ್ ಬಾಸ್ ಸಿಸನ್ -9 ಸ್ಪರ್ಧಿಗಳ ಲಿಸ್ಟ್ ; ಯಾರ‍್ಯಾರು ದೊಡ್ಮನೆ ಸೇರಲಿದ್ದಾರೆ ಗೊತ್ತಾ?

ವಾಹಿನಿಗಳಿಗೆ ಟಿಆರ್‌ಪಿ ಮಾನದಂಡ ಆರಂಭವಾದ ದಿನದಿಂದ ಪೈಪೋಟಿಯೂ ಆರಂಭಗೊಂಡಿದೆ. ಹಾಗಾಗಿ ಒಂದು ವಾಹಿನಿಗಿಂತ ಇನ್ನೊಂದು ವಾಹಿನಿ…

ಡಾಕ್ಟರ್ ಹೃದಯ ಕದ್ದ ಸ್ಯಾಂಡಲ್​​​ವುಡ್​ ನಟಿ…ಶೀಘ್ರದಲ್ಲೇ ಹಸೆಮಣೆ ಏರುತ್ತಿರುವ ಮಮತಾ ರಾಹುತ್​​​​​​​​​​​​

ಕನ್ನಡ ಚಿತ್ರರಂಗದಲ್ಲಿ ಸಿಕ್ಸ್​​ ಪ್ಯಾಕ್ ಹುಡುಗಿ ಎಂದೇ ಹೆಸರಾದ ನಟಿ ಮಮತಾ ರಾಹುತ್​​​ ಮದುವೆ ನಿಶ್ಚಯವಾಗಿದ್ದು…

Go to Top