ಶಿಕಾರಿಪುರದ ಈ ಹುಚ್ಚರಾಯ ಸ್ವಾಮಿ ದೇವಾಲಯದ ಬಗ್ಗೆ ಎಷ್ಟು ಜನಕ್ಕೆ ಗೊತ್ತು..!

in ಕನ್ನಡ ಮಾಹಿತಿ 525 views

ಮೂಗಿನಲ್ಲಿ ಸಾಲಿಗ್ರಾಮವನ್ನು ಹೊಂದಿದ ಅಪರೂಪದ ಆಂಜನೇಯ. ನಿಮಗೆಲ್ಲರಿಗೂ ವಿಚಿತ್ರ ಎನಿಸಬಹುದು ಈ ದೇವರಿಗೆ ಆಂಜನೇಯ ಸ್ವಾಮಿ ದೇಗುಲ ಎನ್ನುವ ಹೆಸರಿನ ಬದಲು ಹುಚ್ಚರಾಯ ಸ್ವಾಮಿ ದೇಗುಲ ಹೇಗೆ ಬಂತು ಅಂತಾ? ಕುಮದ್ವತಿ ನದಿಯ ದಂಡೆ ಮೇಲೆ ಈ ದೇವಸ್ಥಾನವಿದೆ. ನೂರಾರು ವರ್ಷಗಳ ಹಿಂದೆ ಹುಚ್ಚರಾಯ ಸ್ವಾಮಿ ದೇವಸ್ಥಾನದ ಜಾಗ ಒಬ್ಬ ಪಾಳೇಗಾರನ ವಶದಲ್ಲಿತ್ತು. ಒಂದು ದಿನ ಅವರ ಕನಸಿನಲ್ಲಿ ಆಂಜನೇಯ ಸ್ವಾಮಿ ಕಾಣಿಸಿಕೊಂಡು ಶಿಕಾರಿಪುರದ ದೊಡ್ಡಕೆರೆಯಲ್ಲಿ ತನ್ನ ಮೂರ್ತಿ ಇರುವುದಾಗಿಯೂ ಅದನ್ನು ವ್ಯಾಸರು ಪ್ರತಿಷ್ಠಾಪನೆ ಮಾಡಬೇಕೆಂದು ಹೇಳಿತು. ಆ ಕನಸಿನ ಮೇರೆಗೆ ಆ ಕೆರೆಯಲ್ಲಿನ ನೀರನ್ನು ಕಾಲಿ ಮಾಡಿ ಮೂರ್ತಿಯನ್ನು ಹೊರತೆಗೆದರು.ಮೂರ್ತಿಯನ್ನು ಅಲ್ಲಿಂದ ಸಾಗಿಸುವಾಗ ಮೂರ್ತಿಯ ಮೂಗಿಗೆ ಗಾಯವಾಗಿ ಮುಗಿನ ಭಾಗ ಒಡೆದು ಹೋಗುತ್ತದೆ.ಗಾಯ ಆಗಿರುವ ಮೂರ್ತಿಯನ್ನು ಪ್ರತಿಷ್ಠಾಪಿಸುವುದಿಲ್ಲ ಎಂಬ ವಿಷಯ ತಿಳಿದ ಅವರು ಕೃಷ್ಣ ನದಿ ದಂಡೆಗೆ ತೆರಳಿ ಅಲ್ಲಿ ಮುಳುಗಿ ಎದ್ದರೆ ಒಂದು ಸಾಲಿಗ್ರಾಮ ಸಿಗುತ್ತದೆ ಅದನ್ನು ತಂದು ಮೂರ್ತಿಯ ಮೂಗಿನ ಗಾಯವಾದ ಭಾಗದಲ್ಲಿ ಇಡಲಾಯಿತು.

Advertisement

Advertisement

 

Advertisement

ಎಲ್ಲವೂ ಸರಿ ಆದ ನಂತರ ಸ್ವಾಮಿಯ ಸ್ಥಾಪನೆಗೆ ಇರುವ ಜಾಗ ಹುಚ್ಚಪ್ಪ ಒಡೆಯರ್ ಎಂಬ ವೀರಶೈವ ಜಂಗಮರ ಅಧೀನದಲ್ಲಿತ್ತು. ಆತ ಜಾಗವನ್ನು ಬಿಟ್ಟು ಕೊಡುತ್ತೇನೆ ಆದರೆ ಆ ದೇವರಿಗೆ ನನ್ನ ಹೆಸರನ್ನು ಇಡ ಬೇಕೆಂಬ ಷರತ್ತನ್ನು ಹಾಕಿದನು ಹಾಗಾಗಿ ಶಿಕಾರಿಪುರದಲ್ಲಿರುವ ಆಂಜನೇಯ ಸ್ವಾಮಿಗೆ “ಹುಚ್ಚರಾಯ ಸ್ವಾಮಿ”ಎಂಬ ಹೆಸರು ಬಂತು.
ಪ್ರತಿನಿತ್ಯವು ಈ ದೇಗುಲದಲ್ಲಿ ಪೂಜಾಕಾರ್ಯ ನಡೆಯುತ್ತದೆ. ಅಲ್ಲಿನ ಸ್ಥಳೀಯರು ಈ ದೇವರ ದರ್ಶನ ಪಡೆದು ದಿನದ ಕೆಲಸ-ಕಾರ್ಯದಲ್ಲಿ ತೊಡಗುತ್ತಾರೆ.ಈ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತದೆ. ಈ ದೇವರಿಗೆ “ಬ್ರಾಂತೇಶ ” ಎಂದು ಸಹ ಕರೆಯುವರು.

Advertisement

ಆಂಜನೇಯ ಸ್ವಾಮಿಯ ವಿಶೇಷತೆ ಎಂದರೆ ,ನಮ್ಮಲ್ಲಿ ಒಂದು ನಂಬಿಕೆ ಇದೆ ಜೀವನದಲ್ಲಿ ಕಾಶಿ ಯಾತ್ರೆ ಮಾಡಿದರೆ ನಮ್ಮ ಜೀವನ ಪಾವನ ಎಂದು ಆದರೆ ಕಾಶಿಗೆ ಹೋಗುವುದಕ್ಕೆ ಎಲ್ಲರಿಗೂ ಆಗುವುದಿಲ್ಲ ಆದ ಕಾರಣ ಮೂರು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಬೇಟಿ ನೀಡಿದರೆ ಕಾಶಿಯಾತ್ರೆ ಮಾಡಿದಷ್ಟು ಪುಣ್ಯ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಕರ್ನಾಟಕದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತಾದಿಗಳು ಸಾವಿರಾರು ಆಸೆ -ಆಕಾಂಕ್ಷೆಗಳನ್ನು ಹೊತ್ತು ಈ ದೇವಸ್ಥಾನಕ್ಕೆ ಬರುತ್ತಾರೆ.ಮೂರು ಪ್ರಮುಖ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಚ್ಚರಾಯ ಸ್ವಾಮಿ ದೇವಸ್ಥಾನವು ಒಂದು. ಈ ದೇವಸ್ಥಾನ ಇರುವುದು ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡಿ..


ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ ಕೇಂದ್ರ
ಶ್ರೀ ಕಾಳಿಮಾತಾ ದೇವಿ ಉಪಾಸಕರಾದ ಪಂಡಿತ್ ಶ್ರೀ ವಾಸುದೇವ ಗುರೂಜಿ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಶತ್ರು ಕಾಟ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಮಾಟ ಮಂತ್ರ ನಿವಾರಣೆ ಆರೋಗ್ಯ ಹಣಕಾಸು ಮದುವೆ ಸಂತಾನ ಪ್ರೇಮ ವಿವಾಹ ಮನೆಯಲ್ಲಿ ಅಶಾಂತಿ ಗಂಡ ಹೆಂಡತಿ ಕಲಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ  ಫೋನಿನ ಮೂಲಕ ಶಾಶ್ವತ ಪರಿಹಾರ. ph : 8970080017 ಇಂದೇ ಕರೆ ಮಾಡಿ.

Advertisement
Share this on...