ಅಷ್ಟಕ್ಕೂ ಶಿಲ್ಪಾ ಶೆಟ್ಟಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಕಾರಣವೇನು ?

in Uncategorized 156 views

ಬಾಲಿವುಡ್ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ ಶಿಲ್ಪಾಶೆಟ್ಟಿ ಅವರು ಬಾಡಿಗೆ ತಾಯಿ ಮೂಲಕ ಮಗು ಪಡೆದು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದ್ದರು. ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿರುವ ಈ ಬೆಡಗಿಗೆ ಈಗಾಗಲೇ ಒಂದು ಗಂಡು ಮಗುವಿದ್ದು, ಬಾಡಿಗೆ ತಾಯಿ ಮೂಲಕ ಹೆಣ್ಣು ಮಗು ಒಂದನ್ನು ಪಡೆದುಕೊಂಡು ಇದೀಗ ತಮ್ಮ ಕುಟುಂಬವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರು ಸಂದರ್ಶನ ಒಂದರಲ್ಲಿ ತಾವು  ನಿರ್ಧರಿಸಿದ ಕಾರಣವನ್ನು ಬಿಚ್ಚಿಟ್ಟಿದ್ದು, ಈ ವಿಚಾರವನ್ನು ತಿಳಿದ ಅಭಿಮಾನಿಗಳು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿ ಅವರು ಆಟೋಇಮ್ಯೂನ್‌ ಎಂಬ ಖಾಯಿಲೆಯಿಂದ ಬಳಲುತ್ತಿದ್ದು,
ಈ ಖಾಯಿಲೆಯಿಂದಾಗಿ ಮತ್ತೊಂದು ಬಾರಿ ಮಗು ಪಡೆಯುವುದು ಅಸಾಧ್ಯವಾಯಿತು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೀಗ ಬಾಡಿಗೆ ತಾಯಿಯ ಮೂಲಕ ಮುದ್ದಾದ ಹೆಣ್ಣು ಮಗು ಪಡೆದಿದ್ದು, ಮಗು ಪಡೆದಾಗ ನೆಟ್ಟಿಗರು ಶಿಲ್ಪಾ ಶೆಟ್ಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ್ದರು. ಇನ್ನು ಶಿಲ್ಪಾ ಶೆಟ್ಟಿ ಅವರಿಗೆ ತಮ್ಮ ಮಗ ವಿಯಾನ್ ಅವರನ್ನು ಸಿಂಗಲ್‌ ಚೈಲ್ಡ್‌ ರೀತಿಯಲ್ಲಿ ಬೆಳೆಸುವುದು ಇಷ್ಟವಿಲ್ಲವಂತೆ.

Advertisement

 

Advertisement

Advertisement

ಶಿಲ್ಪಾ ಶೆಟ್ಟಿ ಅವರಿಗೆ ಒಬ್ಬ ತಂಗಿ ಇರುವ ಹಾಗೆ, ಅವನಿಗೂ ತಂಗಿ ಅಥವಾ ತಮ್ಮ ಬೇಕು ಎಂದು ಬಯುಸುತ್ತಿದ್ದರು. ಏಕೆಂದರೆ ಅದು ಬಹಳ ಅವಶ್ಯಕ ಎಂದು ಶಿಲ್ಪಾ ಶೆಟ್ಟಿ ತಮ್ಮ ಕುಟುಂಬದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.ಶಿಲ್ಪಾ ಶೆಟ್ಟಿ ಅವರು ಒಂದು ಸಮಯದಲ್ಲಿ ಮಗುವನ್ನು ದತ್ತು ಪಡೆಯಲು ಕೂಡ ಯತ್ನಿಸಿದ್ದರಂತೆ. ಅದಕ್ಕಾಗಿ 4 ವರ್ಷಗಳ ಕಾಲ ಕಾದಿದ್ದರೂ ಕೂಡ , ಆದರೆ ಕೊನೆಯಲ್ಲಿ ಇರೀಟೇಟ್‌ ಆಗಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ನಿರ್ಧರಿಸಿದ್ದಾರೆ, ಎಂದು ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಬಾಯಿ ಬಿಟ್ಟಿದ್ದಾರೆ.

Advertisement

 


ತಾನು ಗರ್ಭಿಣಿಯಾದಾಗ ಆಟೋಇಮ್ಯೂನ್‌ ಎಂಬ ಕಾಯಿಲೆಯಿಂದ ಬಳಲಿದ್ದು, ಆ ಕಾರಣದಿಂದ ಹಲವು ಬಾರಿ ಅವರಿಗೆ ಮಿಸ್‌ಕ್ಯಾರೇಜ್‌ ಆಗಿದೆ. ಕೊನೆಗೆ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಡಿಸೈಡ್‌ ಮಾಡಿದ ರಾಜ್ ಕುಂದ್ರಾ ದಂಪತಿಗಳು ಮಗುವನ್ನು ಪಡೆದಿದ್ದಾರೆ. ಇನ್ನು ಈ ದಂಪತಿಗಳ ಮಗು ಸಮೀಷಾಳ ಜನ್ಮ ಫೆಬ್ರವರಿ 15ರಂದು ಆಗಿತ್ತು. ಆದರೆ ಫೆಬ್ರವರಿ 21ರಂದು ಮಹಾಶಿವರಾತ್ರಿಯ ದಿನದಂದು ತಮ್ಮ ಅಭಿಮಾನಿಗಳೊಂದಿಗೆ ಈ ಸಿಹಿ ವಿಚಾರವನ್ನುನ್ನು ಶೇರ್‌ ಮಾಡಿಕೊಂಡಿದ್ದರು.

ಕರಾವಳಿ ಮೂಲದವರಾದ ಶಿಲ್ಪಾ ಶೆಟ್ಟಿ ಬಂಟ್ ಸಮುದಾಯಕ್ಕೆ ಸೇರಿದವರಾಗಿದ್ದು, ಅಲ್ಲಿ ಹೆಣ್ಣು ಮಕ್ಕಳದ್ದೆ ಪಾರುಪತ್ಯ ಹೆಚ್ಚು.ಅವರಿಗೆ ಸದಾ ಒಂದು ಹೆಣ್ಣು ಮಗು ಹೊಂದುವ ಆಸೆ ಇತ್ತು ಮತ್ತು 21 ವರ್ಷಗಳ ಮೊದಲೇ ಹೆಸರನ್ನು ಸಹ ಯೋಚಿಸಿದ್ದರು, ಎಂದು ಸಂದರ್ಶನದಲ್ಲಿ ಹೇಳಿದ್ದಾರೆ..

Advertisement
Share this on...