shilpa sheety

ಸಂಡೆ ಬಿಂಜ್ ಹೆಸರಿನಲ್ಲಿ ಹೊಟ್ಟೆ ಬಿರಿಯುವಷ್ಟು ತಿಂದ ಶಿಲ್ಪಾ ಶೆಟ್ಟಿ…ಅಷ್ಟು ತಿಂದ್ರೂ ಇಷ್ಟು ತೆಳ್ಳಗಿರೋದು ಹೇಗೆ ಸಾಧ್ಯ…?

in ಮನರಂಜನೆ/ಸಿನಿಮಾ 302 views

ಮನುಷ್ಯನಿಗೆ ಹಣ ಇಲ್ಲವಾದರೂ ಆರೋಗ್ಯ ಇರಬೇಕು, ನಾವು ಆರೋಗ್ಯವಾಗಿದ್ದರೆ ಎಷ್ಟು ಹಣ ಬೇಕಾದರೂ ಸಂಪಾದಿಸಬಹುದು. ಬಾಯಿಗೆ ರುಚಿ ಎನಿಸುವ ಕುರುಕಲು ತಿಂಡಿ ತಿಂದು ಆರೋಗ್ಯ ಕೆಡಿಸಿಕೊಳ್ಳುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಕೆಲವರು ಅನಾರೋಗ್ಯ ಉಂಟು ಮಾಡುವ ತಿನಿಸುಗಳಿಂದ ಯಾವಾಗಲೂ ದೂರ ಇರುತ್ತಾರೆ. ಅವರು ಯಾವಾಗಲೂ ಆರೋಗ್ಯಕರ ಜೀವನ ಶೈಲಿಗೆ ಪ್ರಾಮುಖ್ಯತೆ ನೀಡುತ್ತಾರೆ. ಅಂತವರಲ್ಲಿ ಬಾಲಿವುಡ್​ ನಟಿ ಶಿಲ್ಪಾಶೆಟ್ಟಿ ಕೂಡಾ ಒಬ್ಬರು. ಶಿಲ್ಪಾಶೆಟ್ಟಿ ಎಂದರೆ ಅವರು ಮಾಡುವ ಯೋಗ ನೆನಪಾಗುತ್ತದೆ. ಶಿಲ್ಪಾ ಶೆಟ್ಟಿ ಪ್ರತಿದಿನ ಯೋಗ ಮಾಡದೆ ದಿನ ಆರಂಭಿಸುವುದಿಲ್ಲವಂತೆ. ತಾನು ಸ್ಟಾರ್ ನಟಿ ಆದರೂ ಶಿಲ್ಪಾ ಶೆಟ್ಟಿ ಅಡುಗೆ ಮಾಡಲು ಕೆಲಸದವರನ್ನು ನೇಮಿಸಿಕೊಂಡಿಲ್ಲ. ಪ್ರತಿ ದಿನ ಅಮ್ಮ, ತಂಗಿಯ ಸಹಾಯದಿಂದ ಹೆಲ್ದಿ ಫುಡ್​​​​ಗಳನ್ನು ಮಾಡಿ ತಿನ್ನುತ್ತಾರೆ. ಶಿಲ್ಪಾಶೆಟ್ಟಿ ತಮ್ಮ ಯೂಟ್ಯೂಬ್ ಚಾನೆಲ್ ಹಾಗೂ ಸೋಷಿಯಲ್ ಮೀಡಿಯಾ ಮುಖಾಂತರ ಬಹಳಷ್ಟು ಆರೋಗ್ಯಕರ ರೆಸಿಪಿಗಳನ್ನು ಕೂಡಾ ಮಾಡಿ ಆ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಯೋಗ ಹಾಗೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಿಡಿ ಹಾಗೂ ಪುಸ್ತಕವನ್ನು ಕೂಡಾ ಹೊರತಂದಿದ್ದಾರೆ ಶಿಲ್ಪಾಶೆಟ್ಟಿ.

Advertisement

Advertisement

ಇದ್ದರೆ ಶಿಲ್ಪಾಶೆಟ್ಟಿ ಸೊಂಟದ ರೀತಿ ಇರಬೇಕಾಪ್ಪ ಎಂದು ಯುವಜನತೆ ಮಾತನಾಡಿಕೊಳ್ಳುವುದುಂಟು. ವಯಸ್ಸು 45 ಆದರೂ ಶಿಲ್ಪಾ ಇಂದಿಗೂ ಫಿಟ್, ಯಂಗ್ ಹಾಗೂ ಎನರ್ಜಿಟಿಕ್. ಅದಕ್ಕೆ ಕಾರಣ ಅವರ ಯೋಗ. ಮಂಗಳೂರಿನ ಈ ಬಳುಕುವ ಬಳ್ಳಿ ಯೋಗದ ಜೊತೆ ಪ್ರತಿದಿನ ಆರೋಗ್ಯಕರ ಆಹಾರ ಸೇವಿಸುತ್ತಾರೆ. ಆದರೆ ಭಾನುವಾರ ಯಾವುದೇ ಕಾರಣಕ್ಕೂ ಶಿಲ್ಪಾಶೆಟ್ಟಿ ಡಯಟ್ ಮಾಡುವುದಿಲ್ಲ. ಭಾನುವಾರ ಬಂತೆಂದರೆ ಶಿಲ್ಪಾ ಶೆಟ್ಟಿಗೆ ಹಬ್ಬವೋ ಹಬ್ಬ. ಏಕೆಂದರೆ ಆ ದಿನ ಅವರು ತಮಗೆ ಇಷ್ಟವಾದ ತಿಂಡಿ ತಿನ್ನುತ್ತಾರಂತೆ. ಅದು ಇಂತದ್ದೇ ಎಂದೇನಿಲ್ಲ. ಮನಸ್ಸಿಗೆ ಇಷ್ಟವಾಗುವ ಊಟ ಮಾಡಿ ಖುಷಿಪಡುತ್ತಾರೆ. ನಂತರ ಮತ್ತೆ ಸೋಮವಾರದಿಂದ ಡಯಟ್ ಶುರು.

Advertisement

ಶಿಲ್ಪಾಶೆಟ್ಟಿ ಹೀಗೆ ಸಂಡೆ ಬಿಂಜ್ ಹೆಸರಿನಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುತ್ತಿರುವ ವಿಡಿಯೋಗಳು ಈಗ ಸಖತ್ ವೈರಲ್ ಆಗುತ್ತಿದೆ. ಒಂದು ವಿಡಿಯೋದಲ್ಲಿ ತನ್ನ ಪತಿ ರಾಜ್​ಕುಂದ್ರಾ ಮಾಡಿರುವ ವೆನಿಲಾ ಕೇಕ್​​​ ತಿನ್ನುವ ಶಿಲ್ಪಾ ಶೆಟ್ಟಿ ಇಷ್ಟಪಟ್ಟಿದ್ದನ್ನು ತಿನ್ನಲು, ಖುಷಿಯನ್ನು ಸೆಲಬ್ರೇಟ್ ಮಾಡಲು ಒಂದು ಕಾರಣ ಬೇಕು. ಇವತ್ತಿಗೆ ನನ್ನ ಮಗಳು ಹುಟ್ಟಿ 40 ದಿನಗಳಾಯ್ತು ಆದ್ದರಿಂದ ಇದೆಲ್ಲಾ ತಿನ್ನುತ್ತಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಬಿಸಿಬಿಸಿ ಜಿಲೇಬಿ ತಿನ್ನುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಮತ್ತೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಪ್ಯಾನ್ ಕೇಕ್, ತಾವೇ ಮಾಡಿದ ಚಿಕ್ಕಿ, ಚೆನ್ನೈ ಹೋಟೆಲೊಂದರಲ್ಲಿ ಮಸಾಲೆ ದೋಸೆ, ವಡೆ ತಿನ್ನುತ್ತಿರುವ ದೃಶ್ಯವಿದೆ.

Advertisement

 

View this post on Instagram

 

Every day seems like a Sunday, but I only binge on the REAL Sunday. This one is special❤️ Samisha Shetty Kundra completes 40 days and celebration calls for cake. But since all shops were closed, @rajkundra9 decided to make a Vanilla Meringue cake. The sponge was made by me and Viaan ate a slice of the cake before the meringue came on, hence it looks incomplete.🤦🏽‍♀️ But the whole process made the celebration completely worthwhile. Happy Sunday Binge, #instafam ❤️🌈 Heartfelt Gratitude to @rajkundra9 for being the most caring, loveable,and the bestest husband and father in the world ❤️ . . . . . . #SundayBinge #20DaysOfGratefulness #Day4 #family #love #husband #desserts #stayhome #staysafe #SwasthRahoMastRaho

A post shared by Shilpa Shetty Kundra (@theshilpashetty) on

ಇದೇನಪ್ಪಾ ನೋಡಲು ಇಷ್ಟು ಸಣ್ಣ ಇದ್ದಾರೆ ಶಿಲ್ಪಾ ಶೆಟ್ಟಿ ಇಷ್ಟೆಲ್ಲಾ ತಿನ್ನುತ್ತಾರಾ ಎಂದು ನೀವು ಅಂದುಕೊಳ್ಳುವುದುಂಟು. ಆದರೆ ಶಿಲ್ಪಾಶೆಟ್ಟಿ ಸಂಡೆ ಬಿಂಜನ್ನು ವಾರಪೂರ್ತಿ ವರ್ಕೌಟ್ ಮಾಡಿ ಕರಗಿಸುತ್ತಾರೆ. ಪ್ರತಿದಿನ ಡಯಟ್, ವರ್ಕೌಟ್ ಮಾಡಿ ವಾರದ ಒಂದು ದಿನ ಇಷ್ಟಪಟ್ಟಿದ್ದನ್ನು ತಿಂದರೆ ಏನೂ ಆಗುವುದಿಲ್ಲ. ಎಷ್ಟು ತಿನ್ನುತ್ತೀರೋ ಅಷ್ಟು ವರ್ಕೌಟ್ ಮಾಡಿ ಎನ್ನುತ್ತಾರೆ ಈ ಚೆಲುವೆ.

Advertisement
Share this on...