ಅನಾಥ ಮಕ್ಕಳನ್ನು ಮನೆಗೆ ಕರೆದು ಪಾದಪೂಜೆ ಮಾಡಿ ಊಟ ಬಡಿಸಿದ ಶಿಲ್ಪಾ ಶೆಟ್ಟಿ…ವಿಡಿಯೋ ನೋಡಿ

in ಮನರಂಜನೆ/ಸಿನಿಮಾ 3,349 views

ಕಳೆದ ಹತ್ತು ದಿನಗಳಿಂದ ದೇಶಾದ್ಯಂತ ಮನೆ ಮಾಡಿದ್ದ ನವರಾತ್ರಿ ಸಂಭ್ರಮ ಕೊನೆಗೊಂಡಿದೆ. ಮೈಸೂರು ಜಂಬೂ ಸವಾರಿ, ಮಂಗಳೂರು ದಸರಾ ಕೂಡಾ ಮುಕ್ತಾಯಗೊಂಡಿದೆ. ಈ ಬಾರಿ ಕೊರೊನಾ ಭೀತಿಯಿಂದ ಅದ್ಧೂರಿಯಾಗಿ ದಸರಾ ಜರುಗದಿದ್ದರೂ ಸಂಭ್ರಮಕ್ಕೆ ಕೊರತೆ ಇರಲಿಲ್ಲ. ವಿಶ್ವವಿಖ್ಯಾತ ಜಂಬೂ ಸವಾರಿಯನ್ನು ಸರಳವಾಗಿ ನೆರವೇರಿಸಲಾಯಿತು. ಗೊಂಬೆ ಕೂರಿಸುವ ಪದ್ಧತಿ ಇರುವವರು ಗೊಂಬೆ ಕೂರಿಸಿ ಪೂಜೆ ಮಾಡಿ ಈ ನವರಾತ್ರಿಯನ್ನು ಆಚರಿಸಿದ್ದಾರೆ. ಇನ್ನು ಆಯುಧಪೂಜೆಯಂದು ಜನಸಾಮಾನ್ಯರು ಸೇರಿದಂತೆ ಸುದೀಪ್, ಉಪೇಂದ್ರ ಹಾಗೂ ಇನ್ನಿತರ ಸೆಲಬ್ರಿಟಿಗಳು ತಮ್ಮ ವಾಹನಗಳಿಗೆ ಹಾಗೂ ಪ್ರತಿದಿನ ಬಳಸುವ ಆಯುಧಗಳಿಗೆ ಪೂಜೆ ಮಾಡಿ ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಕೆಲವರು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ವಿಜಯದಶಮಿಯ ಶುಭದಿನದಂದು ಅನಿತಾ ಭಟ್​​ ತಮ್ಮದೇ ಆದ ಹೊಸ ಪ್ರೊಡಕ್ಷನ್ ಕಂಪನಿ ಆರಂಭಿಸಿದ್ದಾರೆ. ಇದಕ್ಕೆ ಎಬಿ ಕ್ರಿಯೇಷನ್ಸ್ ಎಂದು ಹೆಸರಿಟ್ಟಿದ್ದಾರೆ.

Advertisement

Advertisement

ಇನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ನವರಾತ್ರಿ ಆಚರಿಸಿದ್ದಾರೆ. ಮಂಗಳೂರು ಹುಡುಗಿ ಶಿಲ್ಪಾಶೆಟ್ಟಿ ಪ್ರತಿಬಾರಿಯಂತೆ ಈ ಬಾರಿ ಕೂಡಾ ತಮ್ಮ ಮನೆಗೆ ಅನಾಥ ಮಕ್ಕಳನ್ನು ಕರೆದು ಊಟ ಬಡಿಸುವ ಮೂಲಕ ಬಹಳ ವಿಭಿನ್ನವಾಗಿ ನವರಾತ್ರಿ ಆಚರಿಸಿದ್ದಾರೆ. ಶಿಲ್ಪಾಶೆಟ್ಟಿ ಎಷ್ಟೇ ದೊಡ್ಡ ಸ್ಟಾರ್ ನಟಿ ಆದರೂ ನಮ್ಮ ಸಂಸ್ಕೃತಿಯನ್ನು ಮರೆತಿಲ್ಲ. ರಾಜ್​​ಕುಂದ್ರಾ ಅವರನ್ನು ಮದುವೆಯಾದ ನಂತರ ನಟನೆಯಿಂದ ದೂರವೇ ಉಳಿದಿರುವ ಶಿಲ್ಪಾಶೆಟ್ಟಿ ಪತಿಯ ಬ್ಯುಸ್ನೆಸ್​​​​​​​​ನಲ್ಲಿ ಭಾಗಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಮಗನಿಗೆ ಪಾಠ ಕೂಡಾ ಹೇಳಿಕೊಡುವ ಶಿಲ್ಪಾಶೆಟ್ಟಿ ಈಗಲೂ ಸಖತ್ ಬ್ಯುಸಿ. ತಮ್ಮದೇ ಯೂಟ್ಯೂಬ್​ ಚಾನೆಲ್ ಮೂಲಕ ವಿಧ ವಿಧವಾದ ರೆಸಿಪಿ ಮಾಡಿ ಅಪ್​​ಲೋಡ್ ಮಾಡುತ್ತಾರೆ. ಯೋಗದ ಬಗ್ಗೆ ಪುಸ್ತಕ ಹಾಗೂ ಸಿಡಿಯನ್ನು ಶಿಲ್ಪಾಶೆಟ್ಟಿ ಹೊರತಂದಿದ್ದಾರೆ.

Advertisement

ಇಷ್ಟೆಲ್ಲಾ ಹೆಸರು ಗಳಿಸಿರುವ ಶಿಲ್ಪಾಶೆಟ್ಟಿ ನವರಾತ್ರಿಯ ಅಷ್ಟಮಿಯಂದು 8 ಅನಾಥ ಮಕ್ಕಳನ್ನು ಮನೆಗೆ ಕರೆದು ಅವರ ಪಾದಪೂಜೆ ಮಾಡಿ ಶಾಲುಹೊದಿಸಿ ಅವರಿಗೆ ಊಟ ಬಡಿಸಿದ್ದಾರೆ. ಅಮ್ಮ, ತಂಗಿ, ಪತಿಯೊಂದಿಗೆ ಅಡುಗೆ ತಯಾರಿಸಿ ಮಕ್ಕಳಿಗೆ ತಾವೇ ಖುದ್ದಾಗಿ ಊಟ ಬಡಿಸಿ ಸಂತೋಷಪಟ್ಟಿದ್ದಾರೆ. ಅಲ್ಲದೆ ದೇವರ ಸ್ವರೂಪವಾದ ಮಕ್ಕಳಿಗೆ ಆರತಿ ಮಾಡಿದ್ದಾರೆ. ಕಳೆದ ವರ್ಷ ಶಿಲ್ಪಾಶೆಟ್ಟಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದು ಆ ಮಗುವಿಗೆ ಸಮಿಷ ಎಂದು ನಾಮಕರಣ ಮಾಡಿದ್ದರು. ಮಗಳಿಗೆ ಕೂಡಾ ಪಾದಪೂಜೆ ಮಾಡಿರುವ ಶಿಲ್ಪಾಶೆಟ್ಟಿ ಈ ಸುಂದರ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ಧಾರೆ. “ಅಷ್ಟಮಿಯ ಈ ದಿನದಂದು ಕೋವಿಡ್​​​-19 ಸೂಚನೆಗಳನ್ನು ಅನುಸರಿಸಿ ಈ ಕನ್ಯಾಪೂಜೆಯನ್ನು ನೆರವೇರಿಸಿದ್ದೇವೆ” ಎಂದು ಶಿಲ್ಪಾಶೆಟ್ಟಿ ಬರೆದುಕೊಂಡಿದ್ದಾರೆ.

Advertisement

 

View this post on Instagram

 

On the auspicious occasion of Ashtami today, we were fortunate and blessed with our very own DEVI , 🧿Samisha 🧿her first Navratri, so performed the Kanya Pooja, with her and 8 little girls, welcomed with all precautions taken 🤦🏽‍♀️😇 Our way of paying gratitude to the Supreme Goddess Maha Gauri today and her nine divine forms. This year, however, we masked up and did the Pooja keeping all the safety measures in mind, nevertheless, a beautiful feeling to serve and pamper these little girls❤️ 🌷 Jai Mata Di 🌷 @rajkundra9 @shamitashetty_official . . . . . #HappyNavratri #Ashtami #KanchikaPooja #KanjakPooja #blessed #gratitude #DurgaMaa #JaiMataDi

A post shared by Shilpa Shetty Kundra (@theshilpashetty) on

ಶಿಲ್ಪಾಶೆಟ್ಟಿ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಸ್ವಲ್ಪ ಹಣ ಸೇರುತ್ತಿದ್ದಂತೆ ಸಂಸ್ಕೃತಿ, ಸಂಪ್ರದಾಯ,ಸಂಬಂಧಗಳನ್ನು ಮರೆಯುವ ಈ ಕಾಲದಲ್ಲಿ ದೊಡ್ಡ ನಟಿಯಾದರೂ, ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದರೂ ಈ ರೀತಿಯ ಪೂಜೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಪಾಲಿಸುತ್ತಿರುವ ಶಿಲ್ಪಾ ಶೆಟ್ಟಿ ನಿಜಕ್ಕೂ ಗ್ರೇಟ್.

Advertisement
Share this on...