ಅಷ್ಟೊಂದು ಆತ್ಮೀಯತೆಯಿಂದಿದ್ದ ಶಿಲ್ಪಾ-ಅಕ್ಷಯ್ ದೂರವಾದದ್ದು ಯಾಕೆ ಅಂತ ನಿಮಗೆ ಗೊತ್ತಾ ?

in ಮನರಂಜನೆ 92 views

ಬಾಲಿವುಡ್ ಮಾತ್ರವಲ್ಲದೇ, ಸೌತ್ ಇಂಡಸ್ಟ್ರಿಯಲ್ಲೂ ತಮ್ಮ ನಟನೆ, ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಶಿಲ್ಪಾ ಶೆಟ್ಟಿ, ಅವರ ಕಾಲದಲ್ಲಿ ಅತ್ಯುತ್ತಮ ನಟಿ. ಈಗ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿರುವ ಶಿಲ್ಪಾ, ಅದಕ್ಕಾಗಿ ಸಕಲ ತಯಾರಿಯನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಎಲ್ಲರ ನೆಚ್ಚಿನ ನಾಯಕಿಯಾಗಿದ್ದ ಶಿಲ್ಪಾರನ್ನು ಅಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಬಹಳ ಇಷ್ಟಪಡುತ್ತಿದ್ದರು. ಶಿಲ್ಪಾ ಶೆಟ್ಟಿ ಕೂಡ ಆಗ ಅಕ್ಷಯ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ಪ್ರಪಂಚಕ್ಕೆ ಗೊತ್ತಿತ್ತು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರ ಸಂಬಂಧ ಬ್ರೇಕ್ ಅಪ್ ಆಯಿತು. ಅಕ್ಷಯ್’ರನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಶಿಲ್ಪಾ ಹೀಗೆ ಇದ್ದಕ್ಕಿದ್ದಂತೆ ದೂರವಾಗಿದ್ದೇಕೆ ಎಂದು ಎಲ್ಲರಿಗೂ ಅನಿಸಬಹುದು. ಆದರೆ ಶಿಲ್ಪಾ ಅವರೇ ಹೇಳುವಂತೆ ಅಕ್ಷಯ್ ಶಿಲ್ಪಾಗೆ ಮೋಸ ಮಾಡಿದಾರಂತೆ. ಅಕ್ಷಯ್ ಬಗ್ಗೆ ಎಲ್ಲಾ ವಿಷಯ ತಿಳಿದ ನಂತರವೇ ಶಿಲ್ಪಾ ದೂರವಾದರಂತೆ.

Advertisement

 

Advertisement


ಹೌದು, 2000 ರಲ್ಲಿ ನಡೆದ ಸಂದರ್ಶನವೊಂದರಲ್ಲಿ, ಅಕ್ಷಯ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿರುವ ಶಿಲ್ಪಾ, “ಅಕ್ಷಯ್ ಅವರನ್ನು ನಾನು ಪ್ರೀತಿಸುತ್ತಿದ್ದ ಸಮಯದಲ್ಲಿ ಅಕ್ಷಯ್ ಎರಡು ಟೈಮಿಂಗ್ ನಿರ್ವಹಿಸುತ್ತಿದ್ದರು. ಅದೇ ಸಮಯದಲ್ಲಿ, ಅವರು ಟ್ವಿಂಕಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಈ ವಿಷಯ ತಿಳಿದಾಗ ನನಗೆ ಆಶ್ಚರ್ಯವಾಯಿತು. ಇದು ನಿಜಕ್ಕೂ ನನ್ನ ಜೀವನದಲ್ಲಿ ಕೆಟ್ಟ ಘಟನೆ” ಎಂದು ಶಿಲ್ಪಾ ಹೇಳಿದ್ದಾರೆ. “ನಾನು ಅದನ್ನೆಲ್ಲವನ್ನೂ ಮರೆತು ಖುಷಿಯಾಗಿದ್ದೇನೆ, ಕಪ್ಪು ರಾತ್ರಿಯ ನಂತರವೇ ಬೆಳಿಗ್ಗೆ ಬರುವುದು. ಎಂದಿಗೂ ಈ ಘಟನೆ ನನ್ನ ಕೆಲಸಗಳಿಗೆ ಅಡಚಣೆಯಾಗಲಿಲ್ಲ, ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳಿವೆ. ಆದರೆ ಅವೆಲ್ಲವನ್ನೂ ನಾನು ಅಷ್ಟಾಗಿ ಹಚ್ಚಿಕೊಳ್ಳಲಿಲ್ಲ” ಎಂದು ಶಿಲ್ಪಾ ತಿಳಿಸಿದ್ದಾರೆ.

Advertisement

 

Advertisement


ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶಿಲ್ಪಾ ಶೆಟ್ಟಿ ಮಾತ್ರವಲ್ಲ, ಬಾಲಿವುಡ್’ನ ಅನೇಕ ನಟಿಯರು ಅಕ್ಷಯ್ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಇದೆಲ್ಲವನ್ನೂ ಕೇಳಿದ ಜನರು ಇಂದಿಗೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅಂದಹಾಗೆ ಶಿಲ್ಪಾ ಅವರು ಈಗ ರಾಜ್ ಕುಂದ್ರಾ ಅವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಶಿಲ್ಪಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು, ಅಭಿಮಾನಿಗಳ ಜೊತೆ ತಮ್ಮ ಕುಟುಂಬದ ಬಗ್ಗೆ, ಲೈಫ್ ಸ್ಟೈಲ್ ಬಗ್ಗೆ, ವರ್ಕ್ ಔಟ್ ಬಗ್ಗೆ ಹೀಗೆ ಹಲವಾರು ವಿಡಿಯೋಗಳು, ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

Advertisement
Share this on...