ಶಿಲ್ಪಾ ಶೆಟ್ಟಿ ಮಾಡಿದ ಆಲೂ ಪರಾಠ ನೋಡಿ ಪತಿ ರಾಜ್​ ಕುಂದ್ರಾ ಏನು ಪ್ರಶ್ನೆ ಕೇಳಿದ್ರು ನೋಡಿ…

in ಮನರಂಜನೆ 20 views

‘ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ’ ಈ ಹಾಡು ಕೇಳುತ್ತಿದ್ದಂತೆ ಪಡ್ಡೆಗಳಿಗೆ ನೆನಪಾಗುವುದು ಬಾಲಿವುಡ್ ನಟಿ ಶಿಲ್ಪಾಶೆಟ್ಟಿ. ವಯಸ್ಸು 45 ಆದರೂ ಇನ್ನೂ 16 ರ ಯುವತಿಯಂತೆ ಕಾಣುತ್ತಾರೆ. ಪ್ರತಿನಿತ್ಯ ಯೋಗ, ಧ್ಯಾನ, ಮಿತ ಆಹಾರ ಪದ್ಧತಿಯನ್ನು ಅನುಸರಿಸುವ ಶಿಲ್ಪಾ ಪತ್ನಿ ರಾಜ್​​ಕುಂದ್ರಾ, ಪುತ್ರ ವಿಯಾನ್​ ಶೆಟ್ಟಿ, ಶಮಿಷಾ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ಅವರೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ.ಯೋಗ, ರೆಸಿಪಿಗಳು ಎಂದು ಸದಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇರುವ ಶಿಲ್ಪಾಶೆಟ್ಟಿ ಇತ್ತೀಚೆಗೆ ಶಿಲ್ಪಾಶೆಟ್ಟಿ ಟಿಕ್​ಟಾಕ್​​​​​​​​​​​​​ನಲ್ಲಿ ಕೂಡಾ ಬಹಳ ಆ್ಯಕ್ಟಿವ್ ಇದ್ದಾರೆ. ಪತಿ ರಾಜ್​ಕುಂದ್ರಾ ಹಾಗೂ ಸ್ನೇಹಿತರೊಂದಿಗೆ ಟಿಕ್​​ಟಾಕ್​ ಮಾಡುವ ಕರಾವಳಿ ಹುಡುಗಿ ಅಭಿಮಾನಿಗಳಿಗಾಗಿ ಅವನ್ನು ತಮ್ಮ ಸೋಷಿಯಲ್ ಮೀಡಿಯಾಗೆ ಅಪ್​​ಲೋಡ್ ಮಾಡುತ್ತಿದ್ದಾರೆ. ಇನ್ನು ಈ ವಿಡಿಯೋಗಳಲ್ಲಿ ಬಹುತೇಕ ಫನ್ನಿ ವಿಡಿಯೋಗಳೇ ಹೆಚ್ಚಾಗಿರುತ್ತವೆ.

Advertisement

 

Advertisement

Advertisement

ನಿನ್ನೆ ಕೂಡಾ ಶಿಲ್ಪಾ ಹೊಸ ವಿಡಿಯೋವೊಂದನ್ನು ತಮ್ಮ ಇನ್ಸ್​​ಟಾಗ್ರಾಮ್​ನಲ್ಲಿ ಅಪ್​​ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ತಮ್ಮ ಪತಿ ರಾಜ್​​ ಕುಂದ್ರಾಗಾಗಿ ಆಲೂ ಪರಾಠ ತಂದು ಬಡಿಸುತ್ತಾರೆ. ಪರಾಠವನ್ನು ತಿರುಗಿಸಿ ನೋಡುವ ಕುಂದ್ರಾ ಇದು ಆಲೂ ಪರಾಠಾನಾ…ಹಾಗಾದರೆ ಆಲೂನೆ ಇಲ್ವಲ್ಲಾ ಅಂತ ಕೇಳ್ತಾರೆ. ಇದಕ್ಕೆ ಫನ್ನಿಯಾಗಿ ಉತ್ತರಿಸುವ ಶಿಲ್ಪಾ ಶೆಟ್ಟಿ ಆಲೂ ಪರಾಠದಲ್ಲಿ ಆಲೂಗಡ್ಡೆ ಇಲ್ಲವೇ..ಹಾಗಿದ್ರೆ ನಿಮಗೆ ಕಾಶ್ಮೀರಿ ಪಲಾವ್​​​ನಲ್ಲಿ ಕಾಶ್ಮೀರ ಕಾಣುತ್ತದೆಯೇ…ಬನಾರಸ್ ಸೀರೆಯಲ್ಲಿ ಬನಾರಸ್ ಕಾಣುತ್ತದೆಯೇ ಎಂದು ಮರುಪ್ರಶ್ನೆ ಹಾಕುತ್ತಾರೆ. ಇದನ್ನು ಕೇಳಿ ಕುಂದ್ರಾ ಕಕ್ಕಾಬಿಕ್ಕಿಯಾಗುತ್ತಾರೆ.

Advertisement

 

View this post on Instagram

 

Food for thought !!?????? #fridayfun #laughs #comedy #cray #food

A post shared by Shilpa Shetty Kundra (@theshilpashetty) on

ಈ ವಿಡಿಯೋ ನಿಜಕ್ಕೂ ಬಹಳ ಫನ್ನಿಯಾಗಿದೆ. ಶಿಲ್ಪಾ ಶೆಟ್ಟಿ ಅವರ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳು ಈಗ ಅವರ ಹೊಸ ಟಿಕ್​​​ಟಾಕ್ ವಿಡಿಯೋಗಾಗಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಶಿಲ್ಪಾ ತಮ್ಮ ಫನ್ನಿ ಟಿಕ್​​​ಟಾಕ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವುದು ಸುಳ್ಳಲ್ಲ.

Advertisement
Share this on...