ಶಿಲ್ಪಾ ಶೆಟ್ಟಿ ಧರಿಸಿರುವ ಈ ಸೀರೆ ಬೆಲೆ ಒಂದು ಫ್ಲಾಟ್ ಬೆಲೆಯಷ್ಟೇ ಇದೆ !

in ಮನರಂಜನೆ 221 views

ನಿನ್ನೆಯಷ್ಟೇ ಶಿಲ್ಪಾ ಶೆಟ್ಟಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಆದರೆ ನಾವೀಗ ಹೇಳುತ್ತಿರುವುದು ಶಿಲ್ಪಾ ಶೆಟ್ಟಿ ಹುಟ್ಟುಹಬ್ಬದ ಬಗ್ಗೆ ಅಲ್ಲ, ಶಿಲ್ಪಾ ಸೀರೆಯ ಬಗ್ಗೆ. ಹೌದು, ಶಿಲ್ಪಾ ಶೆಟ್ಟಿ ಹುಟ್ಟುಹಬ್ಬ, ಮದುವೆ ಕಾರ್ಯಕ್ರಮ, ಪೂಜಾ ಕಾರ್ಯಕ್ರಮಗಳು ಬಂದಾಗ ಅವರು ಡ್ರೆಸ್ ಮಾಡಿಕೊಳ್ಳುವ ಶೈಲಿ, ತೊಡುವ ಬಟ್ಟೆ ಸ್ವಲ್ಪ ವಿಶೇಷವಾಗಿಯೇ ಇರುತ್ತವೆ. ಅಂದಹಾಗೆ ಶಿಲ್ಪಾ ತಮ್ಮ ಮದುವೆಯಲ್ಲಿ ಧರಿಸಿದ ಸೀರೆಯ ಮೇಲೆ ಅನೇಕರಿಗೆ ಕಣ್ಣಿತ್ತು. ಏಕೆಂದರೆ ರಿಚ್ ಡಿಸೈನ್ ಹೊಂದಿದ್ದ ಆ ಸೀರೆ ಎಲ್ಲರ ಕಣ್ಮನ ಸೆಳೆದಿತ್ತಲ್ಲದೆ, ಶಿಲ್ಪಾ ಆ ಸೀರೆಯಲ್ಲಿ ಥೇಟ್ ಗೊಂಬೆಯಂತೆ ಕಾಣಿಸುತ್ತಿದ್ದರು. ಹಾಗಾದರೆ ಶಿಲ್ಪಾ ಸೌಂದರ್ಯವನ್ನು ಇಮ್ಮಡಿಸಿದ ಆ ಸೀರೆಯ ಬೆಲೆ ಎಷ್ಟು ನಿಮಗೆಷ್ಟು ಗೊತ್ತಾ?. ಬಹುಶಃ ನೀವು ಶಿಲ್ಪಾ ಸೀರೆಯ ಬೆಲೆ ಕೇಳಿದರೆ ಒಂದು ಮನೆಯನ್ನೇ ಖರೀದಿ ಮಾಡುತ್ತೀರಿ. ಹೌದು ಮದುವೆಯಲ್ಲಿ ಶಿಲ್ಪಾ ತೊಟ್ಟಿದ್ದ ಸೀರೆಯ ಬೆಲೆ 50 ಲಕ್ಷ ರೂ. ಇನ್ನು ನಿಶ್ಚಿತಾರ್ಥದಲ್ಲಿ ಬರೋಬ್ಬರಿ 3 ಕೋಟಿ ಬೆಲೆ ಬಾಳುವ ರಿಂಗ್ ತೊಟ್ಟ ಶಿಲ್ಪಾ, ನವೆಂಬರ್ 22, 2009 ರಂದು ಮುಂಬೈ ಬಳಿಯ ಖಂಡಲಾದಲ್ಲಿ ರಾಜ್ ಕುಂದ್ರಾ ಜೊತೆ ವಿವಾಹವಾದರು.

Advertisement

 

Advertisement


ಶಿಲ್ಪಾ ಕರ್ನಾಟಕ ಮೂಲದವರು. ಆದ್ದರಿಂದ ಮದುವೆ ಕರುನಾಡ ಸಂಪ್ರದಾಯದಂತೆ ನೆರವೇರಿತು. ಶಿಲ್ಪಾ ಮತ್ತು ರಾಜ್ ದಕ್ಷಿಣ ಭಾರತದ ರೀತಿಯಲ್ಲಿ ವಿವಾಹವಾದರೆ, ಸಂಗೀತ ಮತ್ತು ಮೆಹೆಂದಿ ಸಮಾರಂಭವನ್ನು ಪಂಜಾಬಿ ಪದ್ಧತಿಗಳ ಪ್ರಕಾರ ನಡೆಸಲಾಯಿತು. ತೋಟದಮನೆ ಮತ್ತು ಮಂಟಪವನ್ನು ಮದುವೆಗೆ ಸುಂದರವಾಗಿ ಅಲಂಕರಿಸಲಾಗಿತ್ತು. ತನ್ನ ಮದುವೆಯಲ್ಲಿ ಶಿಲ್ಪಾ ತರುಣ್ ತಹಿಲ್ಯಾನಿ ವಿನ್ಯಾಸಗೊಳಿಸಿದ ಸೀರೆಯನ್ನು ಧರಿಸಿದ್ದರು. ಮದುವೆಯಾದ ಎರಡು ದಿನಗಳ ನಂತರ, ಶಿಲ್ಪಾ ಮತ್ತು ರಾಜ್ ಆರತಕ್ಷತೆ ಸಮಾರಂಭ ಮುಂಬೈನಲ್ಲಿಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಬಂದು ಶಿಲ್ಪಾ ಮತ್ತು ರಾಜ್ ಅವರನ್ನು ಹಾರೈಸಿದರು.

Advertisement

 

Advertisement


ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಅವರ ಎರಡನೇ ಪತ್ನಿ. ಬಿಗ್ ಬ್ರದರ್ ಶೋ ಸಂದರ್ಭದಲ್ಲಿ ಶಿಲ್ಪಾ ಮತ್ತು ರಾಜ್ ಲಂಡನ್ನಲ್ಲಿ ಭೇಟಿಯಾದರು. ಶಿಲ್ಪಾ ಈ ಕಾರ್ಯಕ್ರಮದ ವಿಜೇತರೂ ಆದರು. ಆ ನಂತರ ಸುಗಂಧ ದ್ರವ್ಯ ಬ್ರಾಂಡ್ ಎಸ್ -2 ರ ಪ್ರಚಾರದ ಸಮಯದಲ್ಲಿ ಇಬ್ಬರೂ ಭೇಟಿಯಾದರು. ಈ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದ ಇಬ್ಬರೂ ನಂತರ ವಿವಾಹವಾದರು.

Advertisement
Share this on...