ಸಮುದ್ರದಿಂದ ಟೈಟಾನಿಕ್ ಅನ್ನು ತೆಗೆಯದಿರಲು ಕಾರಣವೇನು ಗೊತ್ತಾ ?

in ಕನ್ನಡ ಮಾಹಿತಿ 38 views

‘ಟೈಟಾನಿಕ್’ ಬಗ್ಗೆ ನೀವು ಸಾಕಷ್ಟು ಓದಿರಬೇಕು ಅಥವಾ ಕೇಳಿರಬೇಕು. ಟೈಟಾನಿಕ್ ಎಂದಾಕ್ಷಣ ನಿಮ್ಮ ಚಿತ್ತವೆಲ್ಲಾ ಸಿನಿಮಾ ಕಡೆ ಹೋದರೂ, ನಾವು ಮಾತನಾಡುತ್ತಿರುವುದು ಆ ಸಿನಿಮಾ ತೆಗೆಯಲು ಪ್ರೇರಣೆಯಾದ, ‘ವೈಟ್ ಸ್ಟಾರ್ ಲೈನ್’ ಎಂಬ ಸಾರಿಗೆ ಸಂಸ್ಥೆಯ ಒಡೆತನದಲ್ಲಿದ್ದ, ಬೆಲ್ಫಾಸ್ಟ್ನ ಹಾರ್ಲಂಡ್ ಅಂಡ್ ವುಲ್ಫ್ ಎಂಬ ಸಂಸ್ಥೆ ನಿರ್ಮಿಸಿದ ದೈತ್ಯ ಹಡಗು ಟೈಟಾನಿಕ್ ಬಗ್ಗೆ. ವಿಶ್ವದ ಅತಿದೊಡ್ಡ ಹಡಗು ಎಂದು ಹೆಸರುವಾಸಿಯಾದ ಟೈಟಾನಿಕ್ ಮುಳುಗಿ 108 ವರ್ಷಗಳಾಗಿವೆ. ಅದರ ಭಗ್ನಾವಶೇಷ ಎಲ್ಲಿದೆ ಎಂದು ಜನರಿಗೂ ತಿಳಿದಿದೆ, ಆದರೂ ಇಲ್ಲಿಯವರೆಗೆ ಆ ಭಗ್ನಾವಶೇಷಗಳನ್ನು ಸಮುದ್ರದಿಂದ ತೆಗೆದಿಲ್ಲ. ಅದು ಏಕೆ ಎಂಬ ವಿಷಯ ನಿಮಗೆ ಗೊತ್ತಾ? ಒಂದು ವೇಳೆ ಗೊತ್ತಿರದಿದ್ದರೆ ಆ ವಿಷಯ ಕೇಳಿ ಆಶ್ಚರ್ಯಚಕಿತರಾಗುವಿರಿ. ಬನ್ನಿ, ಇಲ್ಲಿ ‘ಟೈಟಾನಿಕ್’ ಭಗ್ನಾವಶೇಷ ತೆಗೆಯದಿರಲು ಕಾರಣವೇನೆಂದು ವಿವರವಾಗಿ ತಿಳಿಯೋಣ.

Advertisement

 

Advertisement


ಏಪ್ರಿಲ್ 10, 1912 ರಂದು ಟೈಟಾನಿಕ್ ತನ್ನ ಮೊದಲ ಸಮುದ್ರಯಾನವನ್ನು ಬ್ರಿಟನ್’ನ ಸೌತ್ಹ್ಯಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್ಗೆ ಬೆಳೆಸಿತು. ಆದರೆ ಏಪ್ರಿಲ್ 14, 1912 ರಂದು ಉತ್ತರ ಅಟ್ಲಾಂಟಿಕ್ ಮಹಾಸಾಗರದ ಹಿಮಗಡ್ಡೆಯೊಂದಕ್ಕೆ (ನೀರ್ಗಲ್ಲು) ಢಿಕ್ಕಿ ಹೊಡೆಯಿತು. ಹಿಮಗಡ್ಡೆ ಅಪ್ಪಳಿಸಿದ ಮೂರು ಗಂಟೆಗಳೊಳಗೆಯೇ, ಏಪ್ರಿಲ್ 15 ರ ಮುಂಜಾನೆ 2.20ರ ಸಮಯದಲ್ಲಿ ಟೈಟಾನಿಕ್ ಸುಮಾರು 1500 ಪ್ರಯಾಣಿಕರೊಡನೆ ಸಂಪೂರ್ಣವಾಗಿ ಮುಳುಗಿಹೋಯಿತು. ಇದು ಆ ಕಾಲದ ಅತಿದೊಡ್ಡ ಕಡಲ ದುರಂತಗಳಲ್ಲಿ ಒಂದಾಗಿದೆ. ಈ ಘಟನೆ ನಡೆದು ಸುಮಾರು 70 ವರ್ಷಗಳವರೆಗೆ ಈ ಹಡಗಿನ ಭಗ್ನಾವಶೇಷವನ್ನುಸಮುದ್ರದಿಂದ ತೆಗೆಯಲಿಲ್ಲ. ಆದರೆ 1985 ರಲ್ಲಿ, ಟೈಟಾನಿಕ್’ನ ಭಗ್ನಾವಶೇಷವನ್ನು ಅನ್ವೇಷಣೆಕಾರ ರಾಬರ್ಟ್ ಬಲ್ಲಾರ್ಡ್ ಮತ್ತು ಅವರ ತಂಡವು ಕಂಡುಹಿಡಿಯಿತು.

Advertisement

 

Advertisement


ಅಂದಹಾಗೆ ಟೈಟಾನಿಕ್ ಹಡಗು ಮುಳುಗಿದ ಸ್ಥಳದಲ್ಲಿ, ಕಂದರವು ಗಾಢವಾಗಿದೆ. ತಾಪಮಾನವು ಸಮುದ್ರದ ಆಳದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಒಬ್ಬ ವ್ಯಕ್ತಿಯು ಅಂತಹ ಆಳಕ್ಕೆ ಹೋಗಿ ನಂತರ ಸುರಕ್ಷಿತವಾಗಿ ಹಿಂತಿರುಗುವುದು ಈಗ ತುಂಬಾ ಕಷ್ಟ. ಹಡಗು ತುಂಬಾ ದೊಡ್ಡದಾಗಿದ್ದು, ಭಾರವಾಗಿರುವುದರಿಂದ ಸುಮಾರು ನಾಲ್ಕು ಕಿಲೋಮೀಟರ್ ಆಳದಿಂದ ಭಗ್ನಾವಶೇಷಗಳನ್ನು ಹೊರತೆಗೆಯುವುದು ಅಸಾಧ್ಯವಾಗಿದೆ.

 


ಟೈಟಾನಿಕ್’ನ ಭಗ್ನಾವಶೇಷವು ಸಮುದ್ರದೊಳಗೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಅದು ವೇಗವಾಗಿ ಕರಗುತ್ತಿದೆ. ತಜ್ಞರು ಹೇಳುವುದನ್ನು ಕೇಳುವುದಾದರೆ ಮುಂಬರುವ 20-30 ವರ್ಷಗಳಲ್ಲಿ, ಟೈಟಾನಿಕ್’ನ ಭಗ್ನಾವಶೇಷಗಳು ಸಂಪೂರ್ಣವಾಗಿ ಸಮುದ್ರದ ನೀರಿನಲ್ಲಿ ಕರಗುತ್ತವೆ. ಸದ್ಯ ಸಮುದ್ರದಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ಅದರ ಕಬ್ಬಿಣದ ರಚನೆಯನ್ನು ವೇಗವಾಗಿ ವಿರೂಪಗೊಳಿಸುತ್ತಿವೆ. ಇದರಿಂದಾಗಿ ಅದು ತುಕ್ಕು ಹಿಡಿಯುತ್ತದೆ. ವರದಿಯ ಪ್ರಕಾರ, ತುಕ್ಕು ಉಂಟುಮಾಡುವ ಈ ಬ್ಯಾಕ್ಟೀರಿಯಾಗಳು ಪ್ರತಿದಿನ ಸುಮಾರು 180 ಕೆಜಿ ಭಗ್ನಾವಶೇಷಗಳನ್ನು ಸೇವಿಸುತ್ತವೆ. ಇದಕ್ಕಾಗಿಯೇ ವಿಜ್ಞಾನಿಗಳು ಟೈಟಾನಿಕ್ ವಯಸ್ಸು ಮುಗಿದು ಹೋಯಿತು ಎಂದು ಹೇಳುತ್ತಾರೆ.

Advertisement
Share this on...